ಶಿವಮೊಗ್ಗವೇ ನನ್ನ ಕರ್ಮಭೂಮಿ, ನನ್ನ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ : ಬಿ. ಎಸ್. ವೈ

ಶಿವಮೊಗ್ಗ

ಶಿವಮೊಗ್ಗ,ಜಿಲ್ಲೆಯ ಮಹಾನ್ ವ್ಯಕ್ತಗಳಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು, ಶಾಂತವೇರಿ ಗೋಪಾಲಗೌಡರಂತಹ ಮಹನೀಯರನ್ನು ನಾಡಿಗೆ ಕೊಟ್ಟಿರುವ ಶಿವಮೊಗ್ಗ ಪುಣ್ಯಭೂಮಿ.

ಶಿವಮೊಗ್ಗವೇ ನನ್ನ ಕರ್ಮಭೂಮಿ. ನನ್ನ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆ ಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಡಿವಿಜನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯ ವಿಶ್ವಸ್ಥ ಮಂಡಳಿ ಹಾಗೂ ಎನ್‌ಡಿವಿ ಹಾಸ್ಟೆಲ್ ಟ್ರಸ್ಟ್ ನ ನೂತನ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ಉದ್ಘಟಾನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿದ ಮಾತನಾಡಿ, ಸಾರ್ವಜನಿಕ ಜೀವನಕ್ಕೆ ಬಂದ ಸಂದರ್ಭದಲ್ಲಿ ಹಳ್ಳಿಗಳು ಹಾಗೂ ದೂರದ ಶಿವಮೊಗ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದ. ವಸತಿ ಮತ್ತು ಊಟದ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿದ್ದ ವಿದ್ಯಾರ್ಥಿ ಗಳನ್ನು ತಾನು ಹತ್ತಿರದಿಂದ ಕಂಡಿದ್ದೇನೆ ಎಂದು ಅವರು ಸ್ಮರಿಸಿದರು.

ಯಾವುದೇ ಮಗು ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣ ಊರುಗಳಿಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಯಡಿಯೂರಪ್ಪ, ಜೀವನದಲ್ಲಿ ಕಷ್ಟಗಳು ಬಂದಾಗ ಧೃತಿಗೆಡಬೇಡಿ, ಪರಿಶ್ರಮ, ನಿಷ್ಠೆ ಮತ್ತು ಸಮಾಜಮುಖಿ ಆಲೋಚನೆ ಇದ್ದಾಗ ನೀವು ಖಂಡಿತವಾಗಿಯೂ ಉನ್ನತ ಮಟ್ಟಕ್ಕೆ ಏರಬಹುದು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಶತಮಾನ ಪೂರೈಸಿರುವ ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ತಮ್ಮ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ತಮಗೆ ದೊರೆತ ದೊಡ್ಡ ಗೌರವ ಎಂದು ಭಾವಿಸುವುದಾಗಿ ಅವರು ಹೇಳಿದರು. ಆದರೆ ಈ ಗೌರವವನ್ನು ತಮ್ಮ ವೈಯಕ್ತಿಕ ಹೆಸರಿಗಿಂತಲೂ ಹೆಚ್ಚಾಗಿ ಜನರು ನೀಡಿರುವ ಪ್ರೀತಿ, ವಿಶ್ವಾಸ, ಅಭಿಮಾನ ಮತ್ತು ಆಶೀರ್ವಾದದ ಪ್ರತೀಕವಾಗಿ ಸ್ವೀಕರಿಸುವೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರು ಮಾತನಾಡಿ, ಅತ್ಯಾಧುನಿಕ ಸೌಲಭ್ಯದೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಇಲ್ಲಿ ಎರಡು ಅಂತಸ್ತುಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ವ್ಯವಸ್ಥೆಮಾಡಲಾಗಿದೆ. ಮೂರನೇ ಅಂತಸ್ತು ಖಾಲಿ ಇದೆ.ಅಲ್ಲಿ ಸಮಾಜದ ಯುವಕರು ಕೆಪಿಎಸ್ ಸಿ, ಯು ಪಿ ಎಸ್ ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬಂದರೆ ಅವರಿಗೆ ಅಲ್ಲಿ ಅವಕಾಶ ಕಲ್ಪಿಸಿ, ಸೂಕ್ತ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶವೂ ಇದೆ ಎಂದರು

2021ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ಅನುದಾನ ನೀಡಿದ್ದನ್ನು ಸ್ಮರಿಸಿದ ಅವರು, ಅದು ಸಮಾಜ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರ್ಕಾರ ಸಲ್ಲಿಸಬೇಕಾದ ಕನಿಷ್ಠ ಕರ್ತವ್ಯವಾಗಿತ್ತು ಎಂದು ಹೇಳಿದರು.ಈ ಸಂಸ್ಥೆಯಲ್ಲಿ ಶ್ರೀ ಎಚ್.ಪಿ. ಲಂಕೇಶ್, ಪ್ರೊಫೆಸರ್ ನಂಜುಂಡಸ್ವಾಮಿ, ಎಚ್.ಎಸ್. ದ್ವಾರಕೇಶ್ ಸೇರಿದಂತೆ ಅನೇಕ ಮಹನೀಯರು ವಿದ್ಯಾಭ್ಯಾಸ ಮಾಡಿ ಬೆಳೆದಿದ್ದಾರೆ. ನೂತನ ಕಟ್ಟಡದಿಂದ ಮುಂದಿನ ದಿನಗಳಲ್ಲಿ ನಾಡಿಗೆ ನೂರಾರು ನಾಯಕರು ಹಾಗೂ ಸಾಧಕರು ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡಿ, ಸಂಸದರಾದ ರಾಘಣ್ಣನವರ ಮೇಲೆ ಸಮಾಜದ ಪ್ರೀತಿ ಎಷ್ಟಿದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಅವರ ಹುಟ್ಟುದ ದಿನದಂದೇ ಈ ಕಾರ್ಯ ಕ್ರಮ ನಡೆಯುತ್ತದೆ. ಅವರಿಗೂ ಸಮಾಜದ ಮೇಲೆ ಅಷ್ಟೇ ಪ್ರೀತಿಯಿದೆ ಎನ್ನುವುದಕ್ಕೆ ಅವರೂ ಕೂಡ ಇಲ್ಲಿ ಇರುವುದು ಸಾಕ್ಷಿ ಎಂದರು.

ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಶ್ವಸ್ಥ ಟ್ರಸ್ಟ್ ಅಧ್ಯಕ್ಷ ಆಯನೂರು ಮಂಜುನಾಥ್, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಎಸ್.ಎನ್.ಚನ್ನಬಸಪ್ಪ, ಸಮಾಜದ ಮುಖಂಡರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಓಂಕಾರಪ್ಪ, ವಿರೂಪಾಕ್ಷಪ್ಪ, ಪಿ.ರುದ್ರೇಶ್, ಇ. ವಿಶ್ವಾಸ್, ಎಚ್.ವಿ. ಮಹೇಶ್ವರಪ್ಪ, ಹಿರಿಯ ವಕೀಲ ಕೆ.ಬಸಪ್ಪ ಗೌಡ, ಎಂ.ಹಾಲಪ್ಪ, ನಂಜುಂಡ ಶೆಟ್ಟರು, ಚಂದ್ರೇಖರ್ ಡಿ.ಎಸ್., ಪ್ರಕಾಶ್ ಕೆ.ಆರ್. ಕೆ.ಬಿ.ರಾಮಲಿಂಗಪ್ಪ, ಎಸ್.ಎಂ.ಓಂಕಾರ ಮೂರ್ತಿ, ಬಾಳೆಕಾಯಿ ಮೋಹನ್ ಮತ್ತಿತರರು ಹಾಜರಿದ್ದರು. ಸುತ್ತೂರು ಶ್ರೀಗಳು ಶುಭ ಸಂದೇಶ ಕಳಿಸಿದ್ದರು.

Author