ಶಿವಮೊಗ್ಗ ನಗರ ಜೆಡಿಎಸ್ ಸಮಿತಿ ವತಿಯಿಂದ ನಾಳೆ ದಿನಾಂಕ 16-12-2025 ರ ಮಂಗಳವಾರ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ 66ನೇ ಹುಟ್ಟು ಹಬ್ಬದ ಅಂಗವಾಗಿ ಬೆಳಗ್ಗೆ 11:00 ಘಂಟೆಗೆ ನಗರದ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ. ಮಧ್ಯಾಹ್ನ 12:00 ಘಂಟೆಗೆ ಶ್ರೀ ಶಾರದಾದೇವಿ ಅಂಧ ವಿಕಾಸ ಶಾಲೆಯಲ್ಲಿ ಮಕ್ಕಳಿಗೆ ಊಟ, ಕೇಕ್ ಹಾಗೂ ಸಿಹಿ ವಿತರಣೆ. ಮೇಲ್ಕಾಣಿಸಿದಂತೆ ಕಾರ್ಯಕ್ರಮಗಳನ್ನು ನಗರದ ಮಾಜಿ ಶಾಸಕರು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಕ್ಷದ ಕಾರ್ಯಕರ್ತರು, ಮುಖಂಡರುಗಳು, ಅಭಿಮಾನಿಗಳು ತಪ್ಪದೆ ಆಗಮಿಸಿ ಉಭಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಶಿವಮೊಗ್ಗ ನಾಗರಾಧ್ಯಕ್ಷರಾದ ದೀಪಕ್ ಸಿಂಗ್ ತಿಳಿಸಿದ್ದಾರೆ.




