ಬಳ್ಳಾರಿ ಚಲೋ : ಜನರ ನೋವಿಗೆ ಧ್ವನಿಯಾಗುವ ಹೋರಾಟ : ಸಂಸದ ಬಿ. ವೈ. ರಾಘವೇಂದ್ರ

ಬಳ್ಳಾರಿ

ಬಳ್ಳಾರಿ ಚಲೋ – ಜನರ ನೋವಿಗೆ ಧ್ವನಿಯಾಗುವ ಹೋರಾಟ175 ಕಿ.ಮೀ.ಗಳ ಈ ಪಾದಯಾತ್ರೆ ಕೇವಲ ನಡಿಗೆಯಲ್ಲ ; ಇದು ರೈತರ ನೋವಿಗೆ, ದಲಿತರ ನ್ಯಾಯದ ಕೂಗಿಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ನಿರೀಕ್ಷೆಗೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಕ್ಕಿಗೆ ಧ್ವನಿಯಾಗುವ ಜನಾಂದೋಲನ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಬರದಿಂದ ಬೆಳೆ ಒಣಗುತ್ತಿರುವ ರೈತನ ಕಣ್ಣೀರಿಗೆ ಉತ್ತರ ಬೇಕಿದೆ. ತಮ್ಮ ಹಕ್ಕಿನ ಹಣಕ್ಕಾಗಿ ಕಾಯುತ್ತಿರುವ ದಲಿತ ಸಮುದಾಯಕ್ಕೆ ನ್ಯಾಯ ಬೇಕಿದೆ. ಉದ್ಯೋಗಕ್ಕಾಗಿ ಬೆಂಗಳೂರಿನತ್ತ ವಲಸೆ ಹೋಗಬೇಕಾದ ಯುವಕರಿಗೆ ತಮ್ಮ ನೆಲದಲ್ಲೇ ಅವಕಾಶ ಬೇಕಿದೆ. ಉತ್ತರ ಕರ್ನಾಟಕಕ್ಕೆ ನೀರಾವರಿ, ಕೈಗಾರಿಕೆ ಮತ್ತು ಅಭಿವೃದ್ಧಿ ಬೇಕಿದೆ.ಈ ಎಲ್ಲ ಜನರ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡುವ ಸಂಕಲ್ಪದೊಂದಿಗೆ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಯುತ್ತಿದೆ.

ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ‘ಚಾರ್ಜ್‌ಶೀಟ್’ ಅನ್ನು ಜನರ ಮುಂದಿಡುವ ಜನಾಂದೋಲನವೂ ಹೌದು,ಭ್ರಷ್ಟಾಚಾರ, ರೈತರ ಸಂಕಷ್ಟ, ದಲಿತರ ಹಣದ ದುರ್ಬಳಕೆಯ ಆರೋಪ, ಯುವಕರ ಉದ್ಯೋಗ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು.ಈ ಮಹತ್ವದ ಹೋರಾಟದಲ್ಲಿ ಇಂದು ನಾನೂ ಭಾಗವಹಿಸುತ್ತಿದ್ದೇನೆ. ಇದು ಜನರ ಬದುಕು, ಹಕ್ಕು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಹೋರಾಟವೆಂದು ತಿಳಿಸಿದ್ದಾರೆ.

Author