ಶಿವಮೊಗ್ಗ,ದೇವರಾಜು ಅರಸು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಊಟದ ವೇಳೆ ತಹಶಿಲ್ದಾರ್ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ, ಅಧಿಕಾರಿಗಳ ಬೇಟಿ ಸಮಯದಲ್ಲಿ ಹಾಸ್ಟೆಲ್ ನ ಊಟದ ಹಾಲ್ ನಲ್ಲೇ ಬೀದಿ ನಾಯಿಯನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಶಿವಮೊಗ್ಗದ ಮಲ್ಲಿಗೇನಹಳ್ಳಿ ಬಡಾವಣೆಯಲ್ಲಿರುವ ವಿದ್ಯಾರ್ಥಿಗಳ ಹಾಸ್ಟೆಲ್, ಭೇಟಿ ವೇಳೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಿ ಸಮಾಲೋಚನೆ ನಡೆಸಿರುವ ಅಧಿಕಾರಿಗಳು. ಭೇಟಿಯ ವೇಳೆ ಹಾಸ್ಟೆಲ್ ನಲ್ಲಿ ವಾರ್ಡನ್ ಇಲ್ಲದೇ ಇರುವುದಕ್ಕೆ ತಹಶೀಲ್ದಾರ್ ರಾಜೀವ್ ಗರಂ ಆಗಿದ್ದಾರೆ.
ವಾರ್ಡನ್ ಇಲ್ಲದೇ ಊಟ ಯಾರು ಬಡಿಸುತ್ತಾರೆಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಹಾಸ್ಟೆಲ್ ನಲ್ಲಿ ಎಲ್ಲವೂ ಸರಿ ಇದಿಯಾ ಎಂದು ಪರಿಶೀಲನೆ ನಡೆಸಿರುವ ರಾಜೀವ್, ವಾರ್ಡನ್ ಗೆ ಫೋನ್ ಮಾಡಿ ಕರೆಸಿ ವಾರ್ನಿಂಗ್ ನೀಡಿ ಎಲ್ಲವೂ ನಿಯಮಗಳ ಪ್ರಕಾರವೇ ಇರಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ.





