ಶಿವಮೊಗ್ಗ | ಶ್ರೀ ವಸಂತ ರಾಮ ಸೇವಾ ಸಂಘ ಹಾಗೂ ಶ್ರೀ ಅಕ್ಷ್ಯೋಭ್ಯ ವಸಂತರಾಮ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ “ಶ್ರೀಮದ್ಭಾಗವತದ ” ದಶಮ ಸ್ಕಂಧದ ಪ್ರವಚನ ಕಾರ್ಯಕ್ರಮ

ಶಿವಮೊಗ್ಗ

ಶಿವಮೊಗ್ಗ ನಗರದ ಶ್ರೀ ವಸಂತ ರಾಮ ಸೇವಾ ಸಂಘ ಹಾಗೂ ಶ್ರೀ ಅಕ್ಷ್ಯೋಭ್ಯ ವಸಂತರಾಮ ಸೇವಾ ಟ್ರಸ್ಟ್. (ರಿ) ಬಿ.ಬಿ. ರಸ್ತೆ ಕೂಡ್ಲಿಮಠ ಸಂಯುಕ್ತ ಆಶ್ರಯದಲ್ಲಿ ಶ್ರೀ ಸತ್ಯಾಭಿಗ್ನೂತ್ಸವದ ಅಂಗವಾಗಿ ನಡೆಯುತ್ತಿರುವ ಜ್ಞಾನಸತ್ರದ ಮೂವತ್ನಾಲ್ಕನೆಯ ಮಾಲಿಕೆಯಲ್ಲಿ ದಿನಾಂಕ 03.09.26 ರಿಂದ 06.09.26 “ಶ್ರೀಮದ್ಭಾಗವತದ “ದಶಮ ಸ್ಕಂಧದ ಪ್ರವಚನ ಕಾರ್ಯಕ್ರಮ ಸಂಜೆ 7.00 ರಿಂದ 8 ಘಂಟೆಯ ವರೆಗೆ ಬಿ.ಬಿ.ರಸ್ತೆಯಲ್ಲಿ ಇರುವ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದಲ್ಲಿ ನಡೆಯುತ್ತದೆ.

ಪಂಡಿತರಾದ ಪವಮಾನಾಚಾರ್ಯ ಕಲ್ಲಾಪುರ ಬೆಂಗಳೂರು ಇವರು ಪ್ರವಚನ ನಡೆಸಿಕೊಡಲಿದ್ದಾರೆ. ಭಗವದ್ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮಿತಿಯ ಪರವಾಗಿ ಬಿಂದುಮಾಧವ ಕೋರಿದ್ದಾರೆ.

Author