ಶಿವಮೊಗ್ಗ | ವಿದ್ಯಾನಗರದ ಎಂ.ಆರ್.ಎಸ್. ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು” ವೃತ್ತವೆಂದು ನಾಮಕರಣವಾಗಬೇಕು : ಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ (ರಿ). ಮತ್ತೊಮ್ಮೆ ಒತ್ತಾಯ..!

ಶಿವಮೊಗ್ಗ

ಶಿವಮೊಗ್ಗ, ವಿದ್ಯಾನಗರದ ಎಂ.ಆರ್.ಎಸ್. ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು” ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಎಂ.ಆರ್.ಎಸ್. ವೃತ್ತವನ್ನು ಈ ಪ್ರದೇಶದ ಜನರು ರೂಢಿಯಿಂದ ಆ ಹೆಸರಿನಲ್ಲಿ ಕರೆಯುತ್ತಿರುತ್ತಾರೆ. ಆದರೆ, ಇಂದಿನವರೆಗೆ ಆ ವೃತ್ತಕ್ಕೆ ಯಾವುದೇ ನಿರ್ದಿಷ್ಟ ನಾಮಫಲಕ ಅಥವಾ ಅಧಿಕೃತ ನಾಮಕರಣ ಆಗಿಲ್ಲ. ಈ ವೃತ್ತವು ಶಿವಮೊಗ್ಗದ ವಿಶ್ವವಿದ್ಯಾನಿಲಯ ಮತ್ತು ವಿವಿಧ ಕಾಲೇಜುಗಳ ಕೇಂದ್ರ ಸ್ಥಾನವಾಗಿರುವುದರಿಂದ, ಯುವಜನರು ಹೆಚ್ಚಾಗಿ ಸೇರುವ ಪ್ರಮುಖ ಪ್ರದೇಶವಾಗಿದೆ.

ಅದರಿಂದ, ಈ ಸ್ಥಳಕ್ಕೆ ಸಾಮಾಜಿಕ ಸಮಾನತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರೇರಕರಾದ ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರನ್ನು ನಾಮಕರಣ ಮಾಡುವುದರಿಂದ, ಯುವಜನರ ಮನಸ್ಸಿನಲ್ಲಿ ಗುರುವರ್ಯರ ಆದರ್ಶಗಳು, ತತ್ವಗಳು ಮತ್ತು ಜಾಗೃತಿಯನ್ನು ಮೂಡಿಸಲು ಇದು ಅತ್ಯಂತ ಸೂಕ್ತ ಸ್ಥಳವಾಗಿರುತ್ತದೆ.ಬ್ರಹ್ಮಶ್ರೀ ನಾರಾಯಣ ಗುರು ಅವರು ಜಾತಿ, ಮತ, ವರ್ಗ, ಧರ್ಮಗಳ ನಡುವಿನ ಭೇದವನ್ನು ನಿವಾರಿಸಿ, “ಏಕ ಜಾತಿ, ಏಕ ಧರ್ಮ, ಏಕ ದೇವ” ಎಂಬ ಮಾನವೀಯ ತತ್ವವನ್ನು ಸಾರಿದ ಶ್ರೇಷ್ಠ ಆದರ್ಶಪುರುಷರು.

ಅವರ ಆದರ್ಶಗಳು ಇಂದಿನ ಸಮಾಜದ ಪ್ರಗತಿಯ ಮಾರ್ಗದಲ್ಲಿ ದೀಪಸ್ತಂಭಗಳಂತಿವೆ ಶಿವಮೊಗ್ಗ ನಗರದ ವಿದ್ಯಾನಗರದ ಈ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನು ನೀಡುವುದರಿಂದ ಜನರಲ್ಲಿ ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ಜಾಗೃತಿ ಬೆಳೆಯಲು ಇದು ಒಂದು ಪ್ರೇರಣಾದಾಯಕ ಹೆಜ್ಜೆಯಾಗುತ್ತದೆ.

ಅದಕ್ಕಾಗಿ, ಶಿವಮೊಗ್ಗ ಜಿಲ್ಲಾ ಆಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಮೂಲಕ ಕ್ರಮ ಕೈಗೊಂಡು, ಆ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂದು ನಾಮಕರಣ ಮಾಡುವಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.ಈ ಮನವಿಯನ್ನು ಪುರಸ್ಕರಿಸಿ, ಸಮಾಜಕ್ಕೆ ಮಾದರಿಯಾದ ಈ ಮಹಾನ್ ಗುರುವರ್ಯರ ಹೆಸರಿನಲ್ಲಿ ನಾಮಕರಣ ಮಾಡುವ ಮೂಲಕ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಿತರಾಗುವಂತೆ ಮಾಡುವುದೇ ಸರ್ಕಾರದ ಗೌರವಾನ್ವಿತ ಕರ್ತವ್ಯವೆಂದು ನಾವು ನಂಬುತ್ತೇವೆ ಎಂದು,

ಶ್ರೀ ಶ್ರೀ ಶ್ರೀ ನಾರಾಯಣಗುರು ಸೇವಾ ಸಮಿತಿ (ರಿ). ದಿನಾಂಕ 30/11/2025 ರಂದು ಮಾನ್ಯ ಮಾಜಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದು ಹಾಗೆಯೇ ಶಿವಮೊಗ್ಗದ ಮಾನ್ಯ ಶಾಸಕರಾದ ಎಸ್. ಏನ್. ಚನ್ನಬಸಪ್ಪ ಅವರಿಗೂ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೂ ಈ ಹಿಂದೆ 2025 ರ ನವೆಂಬರ್ ನಲ್ಲಿ ಮನವಿ ಸಲ್ಲಿಸಿರುತ್ತಾರೆ.

ಸದರಿ ಇಲ್ಲಿಯವರೆಗೆ MRS ವೃತ್ತಕ್ಕೆ ನಾಮಕರಣವಾಗದ ಹಿನ್ನಲೆ ಮತ್ತೊಮ್ಮೆ ಮನವಿಯನ್ನ ಪುರಸ್ಕರಿಸಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ನಾಮಕರಣ ಮಾಡಬೇಕೆಂದು ಮಾಧ್ಯಮದ ಮುಖೇಣ ವೇದಿಕೆಯ ಸಂಘಟನೆಯ ಕಾರ್ಯದರ್ಶಿ ಶಿವಕುಮಾರ್ ಅವರು ವಿನಂತಿಸಿದ್ದಾರೆ.

Author