ಶಿವಮೊಗ್ಗ | ಕೆ.ಎಸ್ ಈಶ್ವರಪ್ಪ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು : SDPI ಜೀಲಾನ್ ಆಗ್ರಹ

ರಾಜಕೀಯ

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಅನಿಕೇತನ ಸಂಸ್ಥೆ ವತಿಯಿಂದ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಬಹಿರಂಗವಾಗಿ ಕೊಲೆ ಮಾಡಲು ಕರೆ ನೀಡಿದ್ದು ಮತ್ತು ಕೊಲೆಗೆ ಪ್ರಚೋದನೆ ನೀಡುವುದು ಅಪರಾಧವಾಗಿದೆ.

ಇಂತಹ ಪ್ರಚೋದನಕಾರಿ ಮತ್ತು ಕಾನೂನು ಬಾಹಿರವಾಗಿ ಹೇಳಿಕೆ ನೀಡುತ್ತಿರುವ ಕೆ.ಎಸ್ ಈಶ್ವರಪ್ಪ ವಿರುದ್ಧ ಜಿಲ್ಲಾಡಳಿತ ಮೌನ ವಹಿಸಿರುವುದು ಆಶ್ಚರ್ಯಕರ, ಅದೇ ಮೀಲಾದ್ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದ ಕಾರಣಕ್ಕೆ ಕೇಸು ದಾಖಲಿಸುವ ಪೊಲೀಸ್ ಅಧಿಕಾರಿಗಳು,

ಇಂತಹ ಪದೇ ಪದೇ ಪ್ರಚೋದನೆ ನೀಡುತ್ತಿರುವ, ಶಿವಮೊಗ್ಗದ ಶಾಂತಿ ಹಾಳು ಮಾಡುತ್ತಿರುವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ಎಸ್.ಡಿ.ಪಿ.ಐ ಶಿವಮೊಗ್ಗ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ ಎಂದು ಜೀಲಾನ್ ಖಾನ್ಜಿಲ್ಲಾಧ್ಯಕ್ಷರು, SDPI, ಅಗ್ರಹಿಸಿದ್ದಾರೆ.

Author