ಶಿವಮೊಗ್ಗ | “ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ, ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ : ಕೆ.ಎಸ್. ಈಶ್ವರಪ್ಪ

ರಾಜಕೀಯ

ಶಿವಮೊಗ್ಗ,ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗಳನ್ನು ಖಂಡಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವರ ವಿರುದ್ಧ ತಕ್ಷಣ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಠ-ಮಾನ್ಯಗಳಿಗೆ ಹೆಚ್ಚು ಹೋಗಬಾರದು, ನಾನು ಹೋಗುವುದಿಲ್ಲ” ಎಂಬ ರೀತಿಯ ಹೇಳಿಕೆಗಳನ್ನು ಸಚಿವರು ನೀಡಿರುವುದು ಹಿಂದೂ ಸಮಾಜದ ಭಾವನೆಗಳಿಗೆ ನೋವುಂಟು ಮಾಡುವಂತಹದ್ದು ಎಂದು ಆರೋಪಿಸಿದರು.

“ಮಂತ್ರಿಗಳು ಯಾವುದೇ ಧರ್ಮವನ್ನು ಆಚರಿಸುವ ಜನರ ಮನಸ್ಸಿಗೆ ನೋವಾಗುವಂತಹ ಹೇಳಿಕೆಗಳನ್ನು ನೀಡಬಾರದು. ಸಮಾಜದಲ್ಲಿ ಧರ್ಮ-ಧರ್ಮಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಿರುವುದು ಇನ್ನಷ್ಟು ಗಂಭೀರ ವಿಚಾರ” ಎಂದು ಈಶ್ವರಪ್ಪ ಹೇಳಿದರು.

ಇಸ್ಲಾಂ ಶ್ರೇಷ್ಠ ಧರ್ಮ’ ಹೇಳಿಕೆ ಕುರಿತು ಆಕ್ರೋಶಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮದ ಕುರಿತು ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ಈಶ್ವರಪ್ಪ, “ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠ” ಎಂದು ಹೇಳಿರುವುದು ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಆರೋಪಿಸಿದರು.

“ಎಲ್ಲಾ ಧರ್ಮಗಳ ಬಗ್ಗೆ ಗೌರವ ಇರಬೇಕು. ಆದರೆ ಒಂದು ಧರ್ಮವನ್ನು ಶ್ರೇಷ್ಠ ಎಂದು ಬಿಂಬಿಸಿ ಮತ್ತೊಂದು ಧರ್ಮದ ಆಚರಣೆಗಳ ಬಗ್ಗೆ ಟೀಕೆ ಮಾಡುವ ಅಧಿಕಾರವನ್ನು ಯಾರೂ ನೀಡಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ತನ್ನ ಮೂಲ ತತ್ವ, ಸಿದ್ಧಾಂತಗಳಿಂದ ವಿಮುಖವಾಗಿದೆ ಎಂಬ ಚರ್ಚೆಯ ನಡುವೆ, ಪಕ್ಷದ ಸಂಘಟನೆಯನ್ನು ಮತ್ತೆ ಸರಿಪಡಿಸುವ ಅಗತ್ಯವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ರಾಜಕೀಯದಲ್ಲಿ ಅಧಿಕಾರದ ಆಸೆ ಸಹಜ. ಆದರೆ ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತವನ್ನು ಮರೆಯಬಾರದು. ಬಿಜೆಪಿಯ ಸಂಘಟನೆ ‘ರಿಪೇರಿಯಾಗಬೇಕು’ ಎಂಬ ಭಾವನೆ ಹಲವರಲ್ಲಿದೆ ಎಂದು ಹೇಳಿದರು

Author