ಶಿವಮೊಗ್ಗ | ಪರಿಸರಕ್ಕಾಗಿ ನಾವು ಬಳಗ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಮನವಿ

ಶಿವಮೊಗ್ಗ

ಶಿವಮೊಗ್ಗ,ಬೆಳೆದು ನಿಂತ ಗಿಡಮರಗಳನ್ನು ಉಳಿಸಿಕೊಂಡೇ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವಂತೆ ಆಗ್ರಹಿಸಿ ಪರಿಸರಕ್ಕಾಗಿ ನಾವು ಬಳಗ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಲಾಯಿತು. ಇಂದು ಸೈನ್ಸ್ ಮೈದಾನದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಸಂದರ್ಭದಲ್ಲಿ ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಸುಮಾರು 24 ಅಮೂಲ್ಯ ಗಿಡಮರಗಳನ್ನು ಕಟಾವು ಮಾಡುವ ಯೋಜನೆಯು ನಮಗೆಲ್ಲ ಅತೀವ ನೋವು ತಂದಿದೆ ಇಲ್ಲಿಯ ಶಾಲಾ ಕಾಲೇಜಿನ ಶಿಕ್ಷಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಗಿಡ ಮೇಳ ಮರಗಳನ್ನು ಬೆಳೆಸಿ ದೂರದಿಂದ ನೀರು ತಂದು ಹಾಕಿ ಕಾಪಾಡಿದ್ದಾರೆ ಅದರ ನೆರಳಿನಲ್ಲಿ ಕುಳಿತು ಓದಲು ಆಟದ ದಣಿವನ್ನು ಕಳೆಯಲು ಬಳಸಿಕೊಳ್ಳುವ ಮಕ್ಕಳಿಗೆ ಆ ಗಿಡಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ ಮಾತ್ರವಲ್ಲ ಬೆಳಿಗ್ಗೆ ಸಂಜೆಯ ಸಮಯ ಆಟವಾಡಲು ಮತ್ತು ವಾಕಿಂಗ್ ಮಾಡಲು ಬರುವ ಸ್ಥಳೀಯ ಯುವಕರು ಕೂಡ ಬಹು ಕಾಳಜಿಯಿಂದ ಗಿಡ ಮರಗಳನ್ನು ಮಣ್ಣು ಗೊಬ್ಬರ ಹಾಕಿ ರಕ್ಷಿಸಿ ಕಾಯ್ದುಕೊಂಡಿರುತ್ತಾರೆ.

ಈ ಕಟ್ಟಡದ ಯೋಜನೆಯ ಪ್ರಕಾರ ಹಿಂಭಾಗದಲ್ಲಿ ಎಂಟು ಮೀಟರ್ ನಷ್ಟು ಖಾಲಿ ಜಾಗವಿದ್ದು ಕಟ್ಟಡವನ್ನು ಮುಂದಕ್ಕೆ ನಿರ್ಮಿಸುತ್ತಿರುವ ಕಾರಣಕ್ಕಾಗಿ ಗಿಡಮರಗಳನ್ನು ಕಡಿಯಲಾಗುತ್ತಿದೆ ಆದ್ದರಿಂದ ಸೆಟ್ ಬ್ಯಾಕ್ ಗೆ ತಕ್ಕಸ್ಟು ಜಾಗ ಬಿಟ್ಟು ಕಟ್ಟಡವನ್ನು ಹಿಂಭಾಗದಲ್ಲಿ ಕಟ್ಟಿದರೆ ಎದುರಿನ ಅಮೂಲ್ಯ ಗಿಡಮರಗಳನ್ನು ಉಳಿಸಿಕೊಳ್ಳಬಹುದಾಗಿದ್ದು ನಗರ ಹೃದಯ ಭಾಗದಲ್ಲಿರುವ ಮೈದಾನದ ಹಸಿರು ಸಂಪತ್ತನ್ನು ಕಳೆದುಕೊಳ್ಳದೆಯೇ ಅಭಿವೃದ್ಧಿ ಕಾರ್ಯವನ್ನು ಮಾಡಬೇಕೆಂದು ಸಂಘಟನೆ ಆಗ್ರಹಿಸಿದೆ.

ಇಲ್ಲಿನ ವಿದ್ಯಾರ್ಥಿಗಳು ತಮ್ಮ ಪಾಠದಲ್ಲಿ ಓದುವಂತೆ ಮರಗಿಡಗಳನ್ನು ಒಂದು ಅದ್ಭುತ ಮೌಲ್ಯವನ್ನಾಗಿ ನಾವು ಕೃತಿ ಯಲ್ಲಿಯೂ ಕಾಯ್ದು ಕೊಳ್ಳೋಣ. ಇಲ್ಲಿಯ ಹಸಿರನ್ನು ಉಳಿಸಿಕೊಂಡೆ ಸುಸ್ಥಿರ ಅಭಿವೃದ್ಧಿ ಕೈಗೊಳ್ಳೋಣ ಈ ನಿಟ್ಟಿನಲ್ಲಿ ಗಿಡಮರಗಳನ್ನು ರಕ್ಷಿಸಲು ಮುಂದಾಗಬೇಕೆಂದು ಸಚಿವರಲ್ಲಿ ಪರಿಸರಕ್ಕಾಗಿ ನಾವು ಬಳಗ ವಿನಂತಿ ಮಾಡಿದೆ,ಈ ಸಂದರ್ಭದಲ್ಲಿ ಬಳಗದ ಡಾ ಶೇಖರ ಗೌಳೆರ್ ಜನಾರ್ಧನ್ ಪೈ. ಮತ್ತಿತರರು ಇದ್ದರು.

Author