ಶಿವಮೊಗ್ಗ ನಗರದಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾಗಿದ್ದು, ಚಾಲಕರಿಗೆ ದುಡಿಮೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೊಸ ಆಟೋ ಪರ್ಮಿಟ್ಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಗರ್ ಭಾಷ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 8 ಸಾವಿರ ಆಟೋಗಳು ಸಂಚರಿಸುತ್ತಿವೆ. ನಗರದ ವ್ಯಾಪ್ತಿ ಕೇವಲ 5ರಿಂದ 6 ಕಿಲೋಮೀಟರ್ಗಳಷ್ಟಿದ್ದು, ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟೋಗಳಿಗೆ ಪರ್ಮಿಟ್ ನೀಡಲಾಗಿದೆ. ಇದರ ಪರಿಣಾಮವಾಗಿ ಆಟೋ ಚಾಲಕರ ನಡುವೆ ಮಾತ್ರವಲ್ಲದೆ ಆಟೋಗಳು ಮತ್ತು ನಗರ ಸಾರಿಗೆ ಬಸ್ಗಳ ನಡುವೆ ಕೂಡ ತೀವ್ರ ಸ್ಪರ್ಧೆ ಉಂಟಾಗಿದೆ ಎಂದು ಹೇಳಿದರು.
‘ಪರ್ಮಿಟ್ ನಿಲ್ಲಿಸಿ’ ಎಂಬ ಮನವಿಗೆ ಹೊಸ ಆದೇಶನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸ ಪರ್ಮಿಟ್ಗಳನ್ನು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಆರ್ಟಿಒ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇತ್ತೀಚೆಗೆ ‘ಒಬ್ಬ ವ್ಯಕ್ತಿಗೆ ಒಂದು ಪರ್ಮಿಟ್’ ಎಂಬ ರೀತಿಯಲ್ಲಿ ಆದೇಶ ಹೊರಡಿಸಿರುವುದು ಸಂಘಕ್ಕೆ ಸಮಾಧಾನ ತಂದಿಲ್ಲ ಎಂದು ಅಜ್ಗರ್ ಭಾಷ ಹೇಳಿದರು.ನಾವು ಕೇಳುತ್ತಿರುವುದು ಹೊಸ ಪರ್ಮಿಟ್ಗಳನ್ನುನಿಲ್ಲಿಸುವುದಾಗಿದೆ. ಆದರೆ ಅದರ ಬದಲಾಗಿ ಮತ್ತೊಂದು ರೀತಿಯ ಆದೇಶ ನೀಡಿರುವುದು ಆಟೋ ಚಾಲಕರಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ. ಈ ಆದೇಶವನ್ನು ಮರುಪರಿಶೀಲಿಸಿ ರದ್ದುಪಡಿಸಿ, ಹೊಸ ಪರ್ಮಿಟ್ಗಳನ್ನು ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸೆಪ್ಟೆಂಬರ್ 1ರೊಳಗೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗ ನಗರದ ಸುಮಾರು 200ರಿಂದ 220 ಆಟೋ ನಿಲ್ದಾಣಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಸಿದ್ದಪಡಿಸಲಾಗುವುದು. ಅಗತ್ಯವಿದ್ದರೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಿವಮೊಗ್ಗದಲ್ಲಿ 8 ಸಾವಿರ ಆಟೋಗಳಿವೆ ನಗರಕ್ಕೆ ಪ್ರಸ್ತುತ ಇರುವ ಆಟೋಗಳ ಸಂಖ್ಯೆಯೇ ಸಾಕಷ್ಟು ಹೆಚ್ಚಾಗಿದೆ. ಕಳೆದ ಹಲವು ವರ್ಷಗಳಿಂದ ಪರ್ಮಿಟ್ಗಳನ್ನು ನಿರಂತರವಾಗಿ ನೀಡಲಾಗುತ್ತಿದ್ದು ಇದರಿಂದ ಅನಾರೋಗ್ಯಕರ ಸ್ಪರ್ಧೆ ಸೃಷ್ಟಿಯಾಗಿದೆ ಎಂದು ಅಜ್ಜ ಭಾಷ ಹೇಳಿದರು.
1,900ಕ್ಕೂ ಹೆಚ್ಚು ಆಟೋಗಳು ಫೈನಾನ್ಸ್ನಲ್ಲಿ ಸೀಜ್ : ಆಟೋ ಚಾಲಕರ ಆರ್ಥಿಕ ಸಂಕಷ್ಟದ ಕುರಿತುಮಾತನಾಡಿದ ಅಜ್ಜ ಭಾಷ, ನಗರದ ಸುಮಾರು 1,900ಕ್ಕೂ ಹೆಚ್ಚು ಆಟೋಗಳು ಫೈನಾನ್ಸ್ ಸಂಸ್ಥೆಗಳಿಂದ ಸೀಜ್ ಆಗಿ ನಿಂತಿವೆ ಎಂದು ಹೇಳಿದರು.





