ಶಿವಮೊಗ್ಗ | ಆಟೋ ಮೀಟರ್ ಬಳಸಲು ನಿರಾಕರಿಸಿದ ಹಾಗೂ ನಿಗದಿತ ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟ 16 ಆಟೋಗಳ ಮೇಲೆ ಐ.ಎಂ.ವಿ. ಕಾಯ್ದೆಯಡಿ ಕಾನೂನು ರೀತ್ಯಾ ಕ್ರಮ ಜರುಗಿಸಿದ ಟ್ರಾಫಿಕ್ ಪೊಲೀಸ್

ಶಿವಮೊಗ್ಗ

ಶಿವಮೊಗ್ಗ ಈ ದಿನ ದಿನಾಂಕ 19-08-2026 ರಂದು ಶಿವಮೊಗ್ಗ ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ, ಆಟೋ ಚಾಲಕರಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟೋ ಮೀಟರ್ ಬಳಸುವಂತೆ ಹಾಗೂ ಮೀಟರ್‌ನಲ್ಲಿ ತೋರಿಸುವ ನಿಗದಿತ ದರದಂತೆ ಮಾತ್ರ ಬಾಡಿಗೆ ಪಡೆಯುವಂತೆ ಸಂಚಾರಿ ಪೊಲೀಸ್ ಇಲಾಖೆ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ತಂಡ ಜಾಗೃತಿ ಮೂಡಿಸಿದ್ದಾರೆ.

ಆಟೋ ಮೀಟರ್ ಬಳಸಲು ನಿರಾಕರಿಸಿದ ಹಾಗೂ ನಿಗದಿತ ಮೀಟರ್ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟ ಸುಮಾರು 16 ಆಟೋ ಚಾಲಕರ ವಿರುದ್ಧ ಐ.ಎಂ.ವಿ. ಕಾಯ್ದೆಯಡಿ ಕಾನೂನು ರೀತ್ಯಾ ಕ್ರಮ ಜರುಗಿಸಿದ್ದಾರೆ.

ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ನಿಗದಿತ ದರದಲ್ಲಿಯೇ ಸೇವೆ ಒದಗಿಸುವಂತೆ ಸೂಚಿಸಲಾಗಿದೆ.

Author