ಶಿವಮೊಗ್ಗ | ಎಐಸಿಸಿ ಅಧ್ಯಕ್ಷ ಖರ್ಗೆ ಭಾಗವಹಿಸಿದ್ದ ಜಾಗದ ಶುದ್ಧೀಕರಣದಿಂದ ದಲಿತ ಸಮುದಾಯ, ಸಂವಿಧಾನಕ್ಕೆ ಅವಮಾನ ; ಗ್ರಾಮಾಂತರ ಯುವ ಕಾಂಗ್ರೆಸ್‌ ಪ್ರತಿಭಟನೆ

ರಾಜಕೀಯ

ಶಿವಮೊಗ್ಗ;ರಾಷ್ಟ್ರೀಯ‌ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಜಾಗ “ಅಶುದ್ಧʼವಾಗಿದೆ ಎಂದು ಬಲಪಂಥೀಯ ಕೋಮುವಾದಿ ಶಕ್ತಿಗಳು, ಗಂಗಾಜಲದ ಮೂಲಕ ಅದನ್ನು ಶುದ್ಧಿಕರಣ ಮಾಡಿದ ಘಟನೆಯು ದಲಿತ ಸಮುದಾಯದ ಧೀಮಂತ ನಾಯಕ ಖರ್ಗೆ ಅವರಿಗೆ ಹಾಗೂ ಸಂವಿಧಾನಿಕ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ ಎಂದಿರುವ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್‌ ಘಟಕ ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಪಾಲಿಕೆಯ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಯುವ ಕಾರ್ಯಕರ್ತರು, ದೇಶಕ್ಕೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ನಂತರವೂ ಜಾತೀಯತೆ ಹಾಗೂ ಸಾಮಾಜಿಕ ತಾರತಮ್ಯವನ್ನು ಪೋಷಣೆ ಮಾಡುತ್ತಾ ಬರುತ್ತಿರುವ ಮನುವಾದಿ ಸಿದ್ಧಾಂತದ ಸಂಘ ಪರಿವಾರದ ಕೋಮುವಾದಿ ಶಕ್ತಿಗಳು, ಈ ದೇಶದ ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಇಲ್ಲಿನ ಕಾನೂನಿಗೂ ಅವರಿಗೆ ಭಯವಿಲ್ಲ ಎನ್ನುವುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ ಎಂದರು.

ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯದ ಕೆಟ್ಟ ಮನಸ್ಥಿತಿಯನ್ನು ತೋರಿಸಿದೆ ಎಂದು ಪ್ರತಿಭಟನಾಕಾರರು . ಭಾಷಣ ಮಾಡಿದ ಜಾಗ ಅಶುದ್ಧವಾಗಿದೆ ಎಂದು ಗಂಗಾಜಲದ ಮೂಲಕ ಶುದ್ಧೀಕರಣ ಮಾಡಿದ್ದಾರೆ.ಭಾರತ ವಿಶ್ವ ಗುರುವಾಗಿದೆ ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿ, ದೇಶದ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎನ್ನುವ ಗೃಹ ಸಚಿವ ಅಮಿತಾ ಷಾ ಅವರು, ದೇಶದ ಸಂವಿಧಾನ ಮತ್ತು ದಲಿತ ಸಮುದಾಯಕ್ಕೆ ಆದ ಈ ಅವಮಾನದ ಘಟನೆಗೆ ಉತ್ತರ ನೀಡಬೇಕು ಎಂದು ಗ್ರಾಮಾಂತರ ಯುವ ಕಾಂಗ್ರೆಸ್‌ ಘಟಕ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್, ಬ್ಲಾಕ್ ಅಧ್ಯಕ್ಷರಾದ ಶಶಿಕುಮಾರ್, ಪ್ರವೀಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್,ಮಲಗಪ್ಪ ಶಿವು, ಆಕಾಶ್, ಬಾಬು,ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಹಾಗೂ ಸಾಕಷ್ಟು ಯುವಕರು ಪಾಲ್ಗೊಂಡಿದ್ದರು

Author