ಶಿವಮೊಗ್ಗ | ವಶಕ್ಕೆ ಪಡೆದಿದ್ದ ದಾಖಲೆ ಇಲ್ಲದ ಆಟೋಗಳು ಮರಳಿ ಆಟೋ ಚಾಲಕರು ಮತ್ತು ಮಾಲೀಕರ ಸುಪರ್ದಿಗೆ : ಟ್ರಾಫಿಕ್ ಇನ್ಸ್ಪೆಕ್ಟರ್ ಗೆ ಧನ್ಯವಾದ ತಿಳಿಸಿದ ಆಟೋ ಚಾಲಕರು ಮತ್ತು ಮಾಲೀಕರು

ಶಿವಮೊಗ್ಗ

ಶಿವಮೊಗ್ಗ ನೆನ್ನೆ ದಿವಸ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹಾಗೂ RTO ಜಂಟಿ ಕಾರ್ಯಾಚರಣೆ ಮೂಲಕ ಆಟೋಗಳ ದಾಖಲೆ ಪರಿಶೀಲನೆ ನಡೆಸಿ ದಾಖಲೆ ಇಲ್ಲದ 70ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದರೂ.

ಇನ್ನು ಈ ಸಂಬಂಧ ಹಲವಾರು ಮಾಧ್ಯಮಗಳು ಈ ಸಂಬಂಧ ಭರ್ಜರಿ ಕಾರ್ಯಾಚರಣೆ ಎಂದು ಸುದ್ದಿ ಮಾಡಿದ್ದವು ಆದರೆ ಸಂಜೆವೇಳೆಗೆ ಚಿತ್ರಣ ಬದಲಾಗಿತ್ತು.ಆಟೋ ಮಾಲೀಕರು ಹಾಗೂ ಆಟೋ ಚಾಲಕರು ಪೂರ್ವ ಸಂಚಾರಿ ಠಾಣೆಯಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಸಮ್ಮುಖದಲ್ಲಿ ಸಭೆ ನಡೆಸಿ ಆಟೋಗಳನ್ನ ವಾಪಾಸ್ ಪಡೆದಿರುತ್ತಾರೆ.

ಇನ್ನು ಈ ಸಂಬಂಧ ಟ್ರಾಫಿಕ್ ಪೊಲೀಸ್ ಇಲಾಖೆ ಮುಂದಿನ ತಿಂಗಳು ಸೆಪ್ಟೆಂಬರ್ 15 ರೊಳಗೆ ದಾಖಲೆ ಸರಿ ಇಟ್ಟುಕೊಳ್ಳಬೇಕು ಎಂಬ ಶರತ್ತಿನೊಂದಿಗೆ ಆಟೋಗಳನ್ನ ಬಿಟ್ಟು ಕಳಿಸಿದ್ದಾರೆ.

ಈ ಸಂಬಂಧ ಆಟೋ ಯೂನಿಯನ್ ಅಧ್ಯಕ್ಷ ಅನ್ನು ಹಾಗೂ ಶಾಂತಿನಗರದ ವಾರ್ಡ್ ಅಧ್ಯಕ್ಷ ಇರ್ಫಾನ್ ಖಾನ್ ಹಾಗೂ ಆಟೋ ಮುಖಂಡರು ಈ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಹಾಗೂ ಇಲಾಖೆಗೆ ಮತ್ತು ಎಸ್ಪಿ ನಿಖಿಲ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಶಿವಮೊಗ್ಗದ ನಾಗರಿಕರು ವಾಹನ ಸವಾರರು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಎಲ್ಲ ವಾಹನಗಳಿಗೂ ಇದೇ ರೀತಿ ಗಡುವು ನೀಡುತ್ತಾರ? ಎಂಬ ಪ್ರಶ್ನೆ ಕೇಳಿಬರುತ್ತಿದೆ.ದಾಖಲೆ ಸರಿಯಾಗಿ ಇಟ್ಟುಕೊಳ್ಳಿ ಅಂತ ತಪಾಸಣೆ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದು ತಪ್ಪ ಎಂಬ ಪ್ರಶ್ನೆ ನಾಗರಿಕರಲ್ಲಿ ಎದ್ದಿದೆ..!

ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಸಭೆಯಲ್ಲಿ ಸಹ ಸೂಚನೆ ನೀಡಿದ್ದರು ಸಹ ಆಟೋಗಳು ದಾಖಲೆ ಇಟ್ಟುಕೊಂಡಿರಲಿಲ್ಲ ಹಾಗೂ ಸಾರ್ವಜನಿಕರ ದೂರಿನ ಮೇಲೆ ಟ್ರಾಫಿಕ್ ಪೊಲೀಸ್ ಇಲಾಖೆ ಹಾಗೂ RTO ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರೂ.

ಈ ವೇಳೆಯಲ್ಲಿ ದಾಖಲೆ ಇಲ್ಲದ ಹಲವಾರು ಆಟೋಗಳನ್ನ ವಶಕ್ಕೆ ಪಡೆದಿದ್ದರೂ.ಇದೆಲ್ಲ ನಡುವೆ ಆಟೋಗಳನ್ನ ಬಿಟ್ಟು ಕಳಿಸಲಾಗಿದೆ.ಯಾವ ಒಂದು ಶಕ್ತಿಗಳು ಪೊಲೀಸ್ ಇಲಾಖೆಯ ಮೇಲೆ ಇಷ್ಟೊಂದ್ ಬಿಗಿ ಹಿಡಿತ ಸಾಧಿಸುತ್ತಿದೆ ಎಂಬ ಪ್ರಶ್ನೆ ನಾಗರೀಕದ್ದಾಗಿದೆ.

ನಗರದಲ್ಲಿ ವಾಹನ ಸವಾರರನ್ನ ರಸ್ತೆ ರಸ್ತೆಯಲ್ಲಿ ಅಡ್ಡಗಟ್ಟಿ ವಾಹನ ತಪಾಸಣೆ ಮಾಡಿ ಕೋಟಿಗಟ್ಟಲೆ ಸರ್ಕಾರದ ಬೊಕ್ಕಸಕ್ಕೆ ಖಜಾನೆ ಭರ್ತಿ ಮಾಡುತ್ತಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ನಿಜವಾಗಲು ದಾಖಲೆ ಇಲ್ಲದ ಸಾವಿರಾರು ಆಟೋಗಳಿಗೆ ಸಮಯವಕಾಶ ನೀಡಿರುವುದು ದುರಂತವೇ ಸರಿ ಎಂಬ ಬೇಸರ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ದಾಖಲೆ ಸರಿಯಾಗಿ ಇಟ್ಟುಕೊಳ್ಳಿ ಅಂತ ತಪಾಸಣೆ ಮಾಡಿದರೆ ದಾಖಲೆ ಸರಿ ಇದ್ದರೆ ಯಾರಿಗೆ ಅನುಕೂಲ ಎಂಬ ಪ್ರಶ್ನೆ ಕೂಡ ಎದ್ದಿದೆ.ಜನಸಾಮಾನ್ಯರಿಗೆ ಒಂದು ನ್ಯಾಯ ಆಟೋದವರಿಗೆ ಒಂದು ನ್ಯಾಯನ? ಎಂಬ ಪ್ರಶ್ನೆ ನಾಗರಿಕರದ್ದಾಗಿದೆ..!?

ಮುಂದಿನ ತಿಂಗಳು ಇನ್ನ ಯಾವ ಯಾವ ಪ್ರಭಾವಿಗಳು ಪೊಲೀಸ್ ಇಲಾಖೆ ಮೇಲೆ ಪ್ರಭಾವ ತಂದು ಕಾರ್ಯಾಚರಣೆ ತಡೆಗಟ್ಟಲು ಏನೆಲ್ಲಾ ಕಸರತ್ತು ಮಾಡಬಹುದು ಎಂಬ ನಿರೀಕ್ಷೆ ಜನಸಾಮಾನ್ಯರದ್ದಾಗಿದೆ..!

Author