ಶಿವಮೊಗ್ಗ | ಅಡ್ರೆಸ್ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರು ಪೊಲೀಸರ ಬಲೆಗೆ

ಕ್ರೈಂ

ಶಿವಮೊಗ್ಗ,ನಗರದಲ್ಲಿ ಅಡ್ರೆಸ್ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದರೂ ಆರೋಪಿಯೊಬ್ಬ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಶಿವಮೊಗ್ಗದಲ್ಲಿಯು ವಿವಿಧ ಕೇಸ್​ಗಳಿಗೆ ಬೇಕಾಗಿದ್ದ ಆರೋಪಿ ಮೈಸೂರು ಮಂಜ ಕಂಕನಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಕ್ರಮವಾಗಿ ಮಾರಕಾಸ್ತ್ರ ಹೊಂದಿದ್ದ ಆರೋಪದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್​ಗೆ ಹಾಜರಾಗದ ವಿಚಾರದಲ್ಲಿ ಮಂಜ ಅಲಿಯಾಸ್ ಮೈಸೂರು ಮಂಜನನ್ನು ಕಂಕನಾಡಿ ಟೌನ್ ಪೊಲೀಸರು ಶಿವಮೊಗ್ಗ ನಗರದಲ್ಲಿ ಪತ್ತೆಮಾಡಿ ಕರೆದೊಯ್ದಿದ್ದಾರೆ.

ಆಗಸ್ಟ್ 11ರಂದು ಶಿವಮೊಗ್ಗದ ಕೆಇಬಿ ಕಾಲೋನಿ ಬಳಿ ಆರೋಪಿಯನ್ನು ಪತ್ತೆಹಚ್ಚಿದ ಕಂಕನಾಡಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ಈತ ಕೋರ್ಟ್​ನಲ್ಲಿ ನೀಡಿದ ವಿಳಾಸ ಬಿಟ್ಟು ಬೇರೆ ಕಡೆಯಲ್ಲಿ ವಾಸವಿದ್ದ. ವಾಸದ ವಿಳಾಸ ಬದಲಾದ ಹಿನ್ನೆಲೆಯಲ್ಲಿ ಆರೋಪಿ ಪತ್ತೆಯಾಗಿರಲಿಲ್ಲ. ಹೀಗಾಗಿ ಶಿವಮೊಗ್ಗ ನಗರದಲ್ಲಿ ಆರೋಪಿಗಾಗಿ ಅಲ್ಲಿನ ಪೊಲೀಸರು ಹುಡುಕಾಟ ನಡೆಸ್ತಿದರು.

ಈ ಮಧ್ಯೆ ಕ್ಲೂ ವೊಂದು ಸಿಕ್ಕ ಹಿನ್ನೆಲೆಯಲ್ಲಿ ಕೆಇಬಿ ಕಾಲೋನಿ ಬಳಿ ಈತನನ್ನ ಅರೆಸ್ಟ್ ಮಾಡಿದೆ. ಮಂಜ ಅಲಿಯಾಸ್ ಮೈಸೂರು ಮಂಜ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿವೆ ಎನ್ನಲಾಗಿದೆ.

ಈ ಸಂಬಂಧ ವಿಚಾರಣೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈತನ ವಿರುದ್ಧ ದಾಖಲಾದ ಪ್ರಕರಣಗಳನ್ನು ತಲಾಶ್ ಮಾಡಿದ್ದ ಕಂಕನಾಡಿ ಪೊಲೀಸರು, ಈತನ ಬಗ್ಗೆ ಕ್ಲೂ ಪಡೆದಿದ್ದರು.

Author