ಧಾರವಾಡ | ರೀಲ್ಸ್ ನೋಡಬೇಡ ಅಂತ ಬುದ್ದಿ ಮಾತು ಹೇಳಿದಕ್ಕೆ ಮಗಳು ಆತ್ಮಹತ್ಯೆಗೆ ಶರಣು

ಕ್ರೈಂ

ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ಮೇಘ ಗುಬ್ಬನವರ್ (20) ಖಾಸಗಿ ಕಾಲೇಜು ಒಂದರಲ್ಲಿ ಡಿ. ಎಡ್ ವ್ಯಾಸಂಗ ಮಾಡುತ್ತಿದ್ದರು.ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಹೊಸ ಮೊಬೈಲ್ ಕೊಡಿಸಿದ್ದ ಪೋಷಕರು.

ಆದರೆ ಮೇಘಾ ದಿನವಿಡೀ ರೀಲ್ಸ್ ನೋಡುತ್ತಿದ್ದ ಕಾರಣ ಮೇಘಾಳ ತಾಯಿ ರೀಲ್ಸ್ ನೋಡಬೇಡ ಎಂದು ಬಯ್ದಿದ್ದರೂ, ಹೀಗಾಗಿ ಪೋಷಕರು ಬುದ್ದಿವಾದ ಹೇಳಿದ ಕಾರಣ ಮನನೊಂದು ಮೇಘಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡಿದಿದೆ.ಘಟನೆ ಸಂಬಂಧ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

Author