ತೀರ್ಥಹಳ್ಳಿ | ಶ್ರೀ ರಾಮನಸರ ನಾಗದೇವತೆ ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನದಲ್ಲಿ, 48 ದಿನಗಳ ಮಂಡಲ ಪೂಜೆ ಹಾಗೂ ದಂಡೆಬಲಿ ಪೂಜೆ, ರಂಗಪೂಜೆ ವಿಜೃಂಭಣೆಯಿಂದ ಆಚರಣೆ

ಶಿವಮೊಗ್ಗ

ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಸಮೀಪದ ಶ್ರೀ ರಾಮನಸರ ನಾಗದೇವತೆ ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ಭೂತೇಶ್ವರ ದೇವರ ೪೮ ದಿನಗಳ ಮಂಡಲ ಪೂಜೆ ಹಾಗೂ ದಂಡೆಬಲಿ ಪೂಜೆ, ರಂಗಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ನೆರವೇರಿತು.

ಕಳೆದ ೪೮ ದಿನಗಳ ಹಿಂದೆ ಶ್ರೀ ಭೂತೇಶ್ವರ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಜರುಗಿದ್ದು, ಇದರ ಪ್ರಯುಕ್ತವಾಗಿ ಮಂಡಲ ಪೂಜೆ ನಡೆಸಲಾಯಿತು. ಜತೆಗೆ ದಂಡೆಬಲಿ ಪೂಜೆ ಹಾಗೂ ರಂಗಪೂಜೆಯನ್ನು ಧಾರ್ಮಿಕ ವಿಧಿ ವಿಧಾನದಂತೆ ನಡೆಸಲಾಯಿತು. ಅಂದು ಬೆಳಿಗ್ಗೆ ಮಂಡಲಪೂಜೆ ನಡೆದರೇ, ಸಂಜೆ ದಂಡೆಬಲಿ ಪೂಜೆ ಹಾಗೂ ರಂಗಪೂಜೆಯನ್ನು ನೆರವೇರಿಸಲಾಯಿತು.

ಧಾರ್ಮಿಕ ವಿಧಿ ವಿಧಾನವನ್ನು ವೇ.ಬ್ರ.ಶ್ರೀ ಮುರುಳೀಧರ್ ಕೆದ್ಲಾಯ್ ಹಾಗೂ ದೇವಸ್ಥಾನದ ನಿತ್ಯ ಅರ್ಚಕರಾದ ಸುರೇಶ್ ಭಟ್ ಮತ್ತು ರಮೇಶ ಅವರ ತಂಡದ ನೇತೃತ್ವದಲ್ಲಿ ನೆರವೇರಿಸಿದರು.ಧಾರ್ಮಿಕ ಕಾರ್ಯಕ್ರಮದ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಮಧ್ಯಾಹ್ನ ಮತ್ತು ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸುನಂದಮ್ಮ, ನಾಗರಾಜ್ ಹಾಗೂ ಪಾದ್ರಿ ಚಂದ್ರಶೇಖರ್ (ಪುಟ್ಟಣ್ಣ) ಹಾಗೂ ದೇವಸ್ಥಾನ ಸಿಬ್ಬಂದಿಗಳು, ಭಕ್ತರು ಪಾಲ್ಗೊಂಡಿದ್ದರು.

Author