ಶಿವಮೊಗ್ಗ | ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಷ್ಟು ಸುರಕ್ಷಿತ?

ಶಿವಮೊಗ್ಗ

ಶಿವಮೊಗ್ಗದಲ್ಲಿ ನೆನ್ನೆ ದಿವಸ ನಗರದ ನಂಜಪ್ಪ ಆಸ್ಪತ್ರೆ ಎದುರಿನ ಆಟೋ ನಿಲ್ದಾಣದ ಆಟೋದವರು ಮಾಮೂಲಿಯಂತೆ ಆಸ್ಪತ್ರೆ ಬಳಿ ಇರುವ ನಮ್ಮ ಆಟೋ ಸ್ಟ್ಯಾಂಡ್ ಗೆ ಬಂದು ಪ್ರಯಾಣಿಕರು ಆಟೋದಲ್ಲಿ ಬರಬೇಕು ನಾವುಗಳು ಆಟೋ ಸ್ಟ್ಯಾಂಡ್ ಮಾಡಿಕೊಂಡು ಗಂಟೆಗಟ್ಟಲೆ ಕಾಯುತ್ತಾ ಇರುತ್ತೇವೆ ಆದರೆ ರಸ್ತೆಯಲ್ಲಿ ಬೇರೆ ಆಟೋಗಳು ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂದು ರಸ್ತೆಯಲ್ಲಿ ಬಂದು ಆಟೋಗಳ ಪ್ರಯಾಣಿಕರನ್ನು ಇಳಿಸಿ ಗಲಾಟೆ ಮಾಡಿ ಜನಸಾಮಾನ್ಯರು ಹಾಗೂ ಪ್ರಯಾಣಿಕರು ತೊಂದರೆ ಉಂಟು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆಟೋ ಸ್ಟ್ಯಾಂಡ್ ನಲ್ಲಿ ಇರುವ ಆಟೋ ಹತ್ತಬೇಕು ಎಂಬ ಕಾನೂನು ಇದೆಯಾ? ಜನಸಾಮಾನ್ಯರ ಆಯ್ಕೆಗೆ ಕಡಿವಾಣ ಹಾಕಲು ಇವರು ಯಾರು?

ಇದೆಲ್ಲ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ಸಮಸ್ಯೆ ಅಂತ ಅನಿಸಿಲ್ಲ. ಇದು ಶಿವಮೊಗ್ಗದ ಆಟೋ ನಿಲ್ದಾಣದ ಸಮಸ್ಯೆ ಎಲ್ಲೆಲ್ಲಿ ಆಟೋ ನಿಲ್ದಾಣ ಅಂತ ಮಾಡಿಕೊಂಡಿದ್ದರೂ ಅವರೆಲ್ಲ ಪ್ರಯಾಣಿಕರು ನಮ್ಮ ಆಟೋದಲ್ಲಿ ಬರಬೇಕು ಬೇರೆ ಆಟೋದಲ್ಲಿ ಹೋಗಬಾರದು ಇದು ಒಂತರ ಅಂಕುಶ ಎಳೆದಂತೆ ಆಗಿದೆ.

ಆದರೆ ವಾಸ್ತವ ವಿಚಾರವೇನೆಂದರೆ ನೆನ್ನೆ ದಿವಸ ಇದೇ ಅನಾರೋಗ್ಯ ಪೀಡಿತ ಪ್ರಯಾಣಿಕರು ನಂಜಪ್ಪ ಆಸ್ಪತ್ರೆ ಬಳಿ ರಸ್ತೆಯಲ್ಲಿ ಬಂದ ಆಟೋಗೆ ಕೈ ಮಾಡಿ ಆಟೋ ಹತ್ತಿದರು.

ಇದರಿಂದ ಕೆರಳಿ, ತಗೋ ನಂಜಪ್ಪ ಆಸ್ಪತ್ರೆ ಎದುರಿನ ಆಟೋ ಸ್ಟ್ಯಾಂಡ್ ಅವರಿಗೆ ಇದು ಪಿತ್ತ ನೆತ್ತಿಗೆ ಏರಿತ್ತು. ಬಂದಿದ್ದೆ ತಡ ರಸ್ತೆ ಆಸ್ಪತ್ರೆ ಜನಸಾಮಾನ್ಯರು ರೋಗಿಗಳು ಯಾವುದನ್ನು ಲೆಕ್ಕಿಸಿದೆ ಆಟೋ ತಡೆದು ಗಲಾಟೆಗೆ ಇಳಿದರು.

ಇನ್ನು ಬಹು ಮುಖ್ಯ ವಿಚಾರ ತಿಳಿಸಬೇಕಾಗಿರುವುದು ಏನೇನಂದ್ರೆ ಈ ಆಟೋ ಸ್ಟ್ಯಾಂಡ್ ಅಂತ ಮಾಡಿಕೊಂಡ ಮಹಾನ್ ಆಟೋದವರು ಬೇಕಾಬಿಟ್ಟಿ ಬಾಡಿಗೆ ಕೇಳುತ್ತಾರೆ ಇವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ನಿಯಮ ಪಾಲನೆ ಮಾಡಲು ಆಗಲ್ಲ. ಟ್ರಾಫಿಕ್ ಪೊಲೀಸ್ ಹಾಗೂ RTO ಪ್ರಕಾರ ಮೀಟರ್ ಕಡ್ಡಾಯ ಶಿವಮೊಗ್ಗದಲ್ಲಿ ಆದ್ರೆ ಇದು ಕಾಗದಮೇಲೆ ದೇ ಅಷ್ಟೇ. ಹಾಗಾಗಿ ಮೀಟರ್ ಕಡ್ಡಾಯ ಪಾಲನೆ ಮಾಡುವುದಿಲ್ಲ ಅದಕ್ಕೆ ಆಟೋ ಅವರ ಬಳಿ ಇರುವ ಉತ್ತರವೇನು ಎಂದರೆ ಜನರೇ ಮೀಟರ್ ಬೇಡ ಅಂತಾರೆ ಹಾಗಾಗಿ ನಾವು ಮೀಟರ್ ಹಾಕಲ್ಲ ಹಾಗೂ ಕೆಲವು ಆಟೋ ಮೀಟರ್ ಅಳವಡಿಸಿಲ್ಲ.

ಇನ್ನು ಆಟೋದವರು ಆಟೋದಲ್ಲಿ ತಮ್ಮ ಭಾವ ಚಿತ್ರ ಜೊತೆಗೆ ಆಟೋ ದಾಖಲೆ ನಮೂದಿಸಿ ಎಂದು ಟ್ರಾಫಿಕ್ ಪೊಲೀಸ್ ಇಲಾಖೆ ತಿಳಿಸಿದರು. ಇವರು ಮಾತ್ರ ಮಾಡುತ್ತಿಲ್ಲ ಕಾರಣ ಏನುಕ್ಕೆ ಅಂತ ಅವರೇ ತಿಳಿಸಬೇಕಾಗಿದೆ.

ಶಿವಮೊಗ್ಗದ ಆಟೋ ನಿಲ್ದಾಣಗಳು ಬೇರೆ ಆಟೋಗಳಿಗೆ ಪ್ರಯಾಣಿಕರಿಗೆ ಬೇರೆ ಆಟೋ ಹತ್ತಲು ಅವಕಾಶ ನೀಡಲ್ಲ ಎನ್ನುವುದು ಒಂದುಕಡೆಯಾದರೆ ಮತ್ತೊಂದು ಕಡೆ ಆಟೋ ಸ್ಟ್ಯಾಂಡ್ ನಲ್ಲಿ ಇರುವ ಆಟೋಗಳು ಬಾಯಿಗೆ ಬಂದ ಬಾಡಿಗೆ ಕೇಳುತ್ತಾರೆ ಇದರ ಸಂಬಂಧ ಪ್ರಯಾಣಿಕರು ತಮಗೆ ಬೇಕಾದ ಆಟೋಗಳಲ್ಲಿ ಪ್ರಯಾಣಿಸಲು ಮುಂದಾದ್ರೆ ಆಟೋ ಸ್ಟ್ಯಾಂಡ್ ಅವರು ಬಂದು ಆಟೋಗಳನ್ನ ಅಡ್ಡ ಹಾಕಿ ಪ್ರಯಾಣಿಕರನ್ನ ಇಳಿಸುತ್ತಾರೆ.

ಇದರ ಸಂಬಂಧ ಪ್ರಯಾಣಿಕರ ಸಮಸ್ಯೆ ಕುರಿತು ವಿಡಿಯೋ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಶಿವಮೊಗ್ಗದ ಆಟೋ ಚಾಲಕ ನಿನಗೆ ದಮ್ಮು ತಾಕತ್ ಇದ್ದರೆ ಪೊಲೀಸ್ ಸ್ಟೇಷನ್ ಬಾ ಅವರಿಗೆ ಮಾಹಿತಿ ತಿಳಿಸು ವಿಡಿಯೋ ಯಾಕೆ ಮಾಡುತ್ತೀಯಾ ಅಂತ ಹೇಳಿ?

ಶಿವಮೊಗ್ಗ ನಗರ ಸುತ್ತಾಡಿಸಿ ಪೊಲೀಸ್ ಸ್ಟೇಷನ್ ಬರದೇ ನಂತರ KSRTC Bus ನಿಲ್ದಾಣ ಬಳಿ ಆಟೋ ನಿಲ್ಲಿಸಿ ಪರಾರಿಯಾಗಿದ್ದಾನೆ.

ಇದೇ ರೀತಿ ಜನಸಾಮಾನ್ಯರು ಮಹಿಳೆಯರು ಆಟೋದಲ್ಲಿ ಕುಳಿತಾಗ ಎಲ್ಲೋ ಸುತ್ತಾಡಿಸಿ ತೊಂದರೆ ಉಂಟು ಮಾಡಿದರೆ ಇದಕ್ಕೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಉದ್ಭವವಾಗಿದೆ!?

ಇನ್ನು ಈ ಸಂಬಂಧ ಟ್ರಾಫಿಕ್ ಪೊಲೀಸ್ ಆಟೋವನ್ನು ಸೆಕ್ಯುರ ಮಾಡಿದ್ದಾರೆ ಆದರೆ ವಾಸ್ತವದಲ್ಲಿ ಮೂಡುವ ಪ್ರಶ್ನೆ ಶಿವಮೊಗ್ಗದ ನಾಗರಿಕರು ಎಷ್ಟು ಸುರಕ್ಷಿತ?

ಆಟೋಗಳಲ್ಲಿ ಪ್ರಯಾಣಿಸಲು ಶಿವಮೊಗ್ಗ ಜನರ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದಿದೆ?

Author