ಶಿವಮೊಗ್ಗ ಸಮಾಜದ ಅಭಿವೃದ್ಧಿಗೆ ಮತ್ತು ನಮ್ಮ ಜಿಲ್ಲೆಯ ಪತ್ರಕರ್ತರ ಹಿತರಕ್ಷಣೆಗೆ ನಮ್ಮ ಬೆಂಬಲ ಸದಾ ಇರಲಿದೆ ! : ಸಂಸದ ಬಿವೈಆರ್

ಶಿವಮೊಗ್ಗ

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಶಿವಮೊಗ್ಗ ಜಿಲ್ಲಾ ಶಾಖೆ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪತ್ರಿಕಾ ದಿನಾಚರಣೆ, ಬೃಹತ್ ರಕ್ತದಾನ ಶಿಬಿರ, ಹಿರಿಯ ಪತ್ರಕರ್ತರಿಗೆ ಸನ್ಮಾನ, ದತ್ತಿ ಪ್ರಶಸ್ತಿ ಪುರಸ್ಕೃತರ ಗೌರವ, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ” ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ರಾಘವೇಂದ್ರ ಅವರು ಅತಿಥಿಯಾಗಿ ಪಾಲ್ಗೊಂಡರು.

ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಸಮಾಜದ ಕಣ್ಣಾಗಿ, ಸತ್ಯ ಮತ್ತು ವಿಶ್ವಾಸಾರ್ಹ ಸುದ್ದಿಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಮಾಧ್ಯಮ ರಂಗದ ಸೇವೆ ಅತ್ಯಂತ ಅಪಾರವಾದುದು. ಪತ್ರಿಕಾ ದಿನಾಚರಣೆಯ ಈ ಸವಿನೆನಪಿನಲ್ಲಿ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವೆಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು, ದತ್ತಿ ಪ್ರಶಸ್ತಿ ಪುರಸ್ಕೃತರು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

ಸಮಾಜದ ಅಭಿವೃದ್ಧಿಗೆ ಮತ್ತು ನಮ್ಮ ಜಿಲ್ಲೆಯ ಪತ್ರಕರ್ತರ ಹಿತರಕ್ಷಣೆಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.

Author