ಶಿವಮೊಗ್ಗ | ಅಪರೂಪದ ಮರದ ಹಾವನ್ನ ಸುರಕ್ಷಿತವಾಗಿ ರಕ್ಷಿಸಿದ ಉರಗ ತಜ್ಞ ಸ್ನೇಕ್ ಕಿರಣ್

ಶಿವಮೊಗ್ಗ

ಶಿವಮೊಗ್ಗ, ನಗರದ ವಿನೋಬಾನಗರದ ಕಾಣಿಸಿಕೊಂಡಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.ವಿನೋಬಾನಗರದ ಸಮೃದ್ಧಿ ನಿಲಯ ಎಂಬ ಮನೆಯ ಪ್ಯಾಸೇಜ್‌ನಲ್ಲಿ ಈ ಅಪರೂಪದ ಮರದ ಹಾವು ಪತ್ತೆಯಾಗಿತ್ತು.

ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಉರಗ ರಕ್ಷಕರಾದ ಸ್ನೇಕ್ ಕಿರಣ್ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು, ಜಾಗರೂಕತೆಯಿಂದ ಸುಮಾರು 45 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಹಾವಿನ ಬಗ್ಗೆ ಮಾಹಿತಿ ನೀಡಿದ ಅವರು, ಇದು ಅತ್ಯಂತ ಅಪರೂಪದ ವಿಷರಹಿತ ಹಾವಾಗಿದೆ. ಇದನ್ನು ಕಂಚು ಬೆನ್ನಿನ ಮರದ ಹಾವು ಎಂದು ಕರೆಯಲಾಗುತ್ತದೆ. ಸುಮಾರು 4.5 ಅಡಿ ಉದ್ದ ಇರುವ ಈ ಹಾವುಗಳು ಸಾಮಾನ್ಯವಾಗಿ ಮರಗಳ ಮೇಲೆ ವಾಸಿಸುತ್ತವೆ, ಎಂದು ತಿಳಿಸಿದರು.

Author