ಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು

ಶಿವಮೊಗ್ಗ

ಶಿವಮೊಗ್ಗ, ಕೆಎಸ್ಆರ್ ಟಿಸಿ ಯಿಂದ, ಪದೇ ಪದೇ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ : ಕ್ರಮಕ್ಕೆ ಮುಂದಾಗುತ್ತಾರ ಎಸ್ಪಿ ಮಿಥುನ್ ಕುಮಾರ್ ಎಂಬ ಶೀರ್ಷಿಕೆಯಡಿ ಕೆಲವೇ ಗಂಟೆಗಳ ಹಿಂದೆ ನಮ್ಮ ಇ-ಕನ್ನಡ ಮಾಧ್ಯಮದಿಂದ ಸುದ್ದಿ ಪ್ರಸಾರ ಮಾಡಿದ್ದೂ,

ಸುದ್ದಿ ಲಿಂಕ್ : https://e-kannada.in/728/

ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಸೂಚನೆ ಮೇರೆಗೆ ಶಿವಮೊಗ್ಗ ನಗರದ ಖಡಕ್ ಪ್ರಾಮಾಣಿಕ ಅಧಿಕಾರಿಯಾದ, ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಸ್ವಪ್ನ ಖುದ್ದಾಗಿ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿ ಪದೇ ಪದೇ ನಗರದೊಳಗೆ ಸಂಚಾರ ಮಾಡುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ವಶಕ್ಕೆ ಪಡೆದುಕೊಂಡು ಠಾಣೆಗೆ ತೆಗೆದುಕೊಂಡು ಬಂದು ಕ್ರಮಕ್ಕೆ ಮುಂದಾಗುತ್ತಿದ್ದಾರೆ.

ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ.

ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.

Author