ಶಿವಮೊಗ್ಗ | ಕಮಲಾ ನೆಹರು ಕಾಲೇಜು ರಸ್ತೆ‌ಯಲ್ಲಿ ಸಂಚಾರ ಈಗ ಸುಗಮ

ಶಿವಮೊಗ್ಗ

ಶಿವಮೊಗ್ಗ,ನಗರದಲ್ಲಿ ಪುಟ್​​ಪಾತ್​ ಒತ್ತುವರಿ ತೆರವು, ವಾಹನ ನಿಲುಗಡೆಯ ವ್ಯವಸ್ಥೆ, ಸುಗಮ ಸಂಚಾರದ ಕ್ರಮಗಳನ್ನು ಕೈಗೊಳ್ಳುತ್ತಿರುವ ಶಿವಮೊಗ್ಗ ಟ್ರಾಫಿಕ್​ ಪೊಲೀಸ್ ಇದೀಗ ಮತ್ತೊಂದು ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

ಅದೆಂದರೆ, ಈ ಮಾರ್ಗದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಗೋಪಿ ಸರ್ಕಲ್ ಎಂದು ಕರೆಸಿಕೊಳ್ಳುವ ಸೀನಪ್ಪ ಶೆಟ್ಟಿ ಸರ್ಕಲ್​ನಲ್ಲಿ ಕಮಲಾ ನೆಹರು ಕಾಲೇಜು ಅಥವಾ ಪಾಲಿಕೆಗೆ ಹೋಗುವ ದಾರಿಯಲ್ಲಿ ಸಾಗುವುದು ವಾಹನ ಸವಾರರಿಗೆ ಕಷ್ಟದ ಕೆಲಸವಾಗಿತ್ತು ಸರ್ಕಲ್​ಗೆ ತಾಗಿಕೊಂಡೆ ಇರುವ ಪೋಸ್ಟ್​ ಆಫೀಸ್ ಪಕ್ಕದ ರಸ್ತೆಗೆ ವಾಹನ ಸವಾರರು ಟರ್ನ್​ ತೆಗೆದುಕೊಳ್ಳುವುದು ಕಷ್ಟವಾಗುತ್ತಿತ್ತು.

ಕೋರ್ಟ್ ಸರ್ಕಲ್​ ಕಡೆಯಿಂದ ಬರುವ ಉಳಿದ ಕಡೆಗೆ ಹೋಗುವ ವಾಹನಗಳು ಮುಂದೆ ನಿಲ್ಲಿಸುತ್ತಿದ್ದರು, ಇದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೆ ದಾರಿ ಸಿಗುತ್ತಿರಲಿಲ್ಲ.ಹೀಗಾಗಿ ಈ ಸಮಸ್ಯೆ ಸಮಸ್ಯೆ ಕ್ಲಿಯರ್ ಮಾಡಲು ಈ ಮೊದಲು ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ಭಾಗದಲ್ಲಿ ಬ್ಯಾರಿಕೇಡ್​ ರಿಮೂವ್ ಮಾಡಿ, ಸರ್ಕಲ್​ನಲ್ಲಿ ಸಿಗ್ನಲ್​ ಸ್ಟಾಪ್​ನ್ನು ಸ್ವಲ್ಪ ಹಿಂದಕ್ಕಿರಿಸಿದರು. ಈ ಸಣ್ಣ ಕ್ರಮದಿಂದ ದೊಡ್ಡ ತ್ರಾಸು ಸರಿಯಾಗಿತ್ತು. ಆದರೆ ಪೋಸ್ಟ್​ ಆಫೀಸ್​ ಪಕ್ಕದ ರಸ್ತೆಯಲ್ಲಿ ಹೋಗುವ ಬರುವ ವಾಹನಗಳ ನಡುವೆ ಜಾಮ್ ಆಗುತ್ತಿತ್ತು. ಡಿವೈಡರ್ ಹಾಕಿ ಈ ಸಮಸ್ಯೆಗೂ ಮುಕ್ತಿ ಕೊಟ್ಟಿದ್ದಾರೆ.

ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ.

ಈ ರಸ್ತೆಯು ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿರುವುದರಿಂದ ಸದಾ ವಾಹನಗಳ ಓಡಾಟವಿರುತ್ತದೆ. ಆದ್ದರಿಂದ ವಾಹನ ಸವಾರರು ಶಿಸ್ತುಬದ್ಧವಾಗಿ ತಮ್ಮ ಪಥದಲ್ಲಿಯೇ ಚಲಿಸಲು ಅನುಕೂಲವಾಗುವಂತೆ ಡಿವೈಡರ್ ರೂಪದಲ್ಲಿ ಬ್ಯಾರಿಕೇಡ್ ಜೋಡಿಸಲಾಗಿದೆ. ಇದರ ಜೊತೆಗೆ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ ಸದರಿ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟುನಿಟ್ಟಿನ ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಯಲ್ಲಿಡಲಾಗಿದೆ. ದೇವರಾಜ್, ಇನ್​ಸ್ಪೆಕ್ಟರ್ ಶಿವಮೊಗ್ಗ

ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು.

ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಫೈನ್​ ಹಾಕೋದು ಗ್ಯಾರಂಟಿ. ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.

Author