ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ನಡೆದ ಘಟನೆ ನಕಲಿ ದಾಖಲೆಗಳ ಸೃಷ್ಟಿ- ಕೆಲವರ ಹೆಸರಿಗೆ ಜಮೀನು ಮಂಜೂರು ಮಾಡಿಕೊಡಲು ಖತರ್‌ನಾಕ್ ಪ್ಲಾನ್ ಎಂಬ ಶೀರ್ಷಿಕೆಯಡಿಯಲ್ಲಿ ನಿನ್ನೆ ದಿವಸ ಹೆಲೋ ಶಿವಮೊಗ್ಗ ಸಂಜೆ ಪತ್ರಿಕೆಯಲ್ಲಿ ಸುದ್ದಿಯೊಂದು ಬಿತ್ತರವಾಗಿತ್ತು.

ಇನ್ನು ಸುದ್ದಿಯಲ್ಲಿ ಇರುವ ಮಾಹಿತಿ ಏನಂದರೆ ಶಿವಮೊಗ್ಗ ತಾಲೂಕ್ ಭೂ ಸುರಕ್ಷಾ ತಂತ್ರಾಂಶದಲ್ಲಿ ಜಮೀನಿಗೆ ಸಂಬಂಧಿಸಿದ ನಕಲಿ ಭೂ ದಾಖಲೆಗಳನ್ನ ಮೋಸ ಮಾಡುವ ಉದ್ದೇಶದಿಂದ ಕೆಲವರ ಹೆಸರಿಗೆ ಮಂಜೂರು ಮಾಡುವ ಉದ್ದೇಶದಿಂದ ಪುನೀತ್ ಎಚ್. ಎಸ್. ಡೇಟಾ ಎಂಟ್ರಿ ಆಪರೇಟರ್ ರೆಕಾರ್ಡ್ ರೂಮ್ ಶಿವಮೊಗ್ಗ ತಾಲೂಕ್ ಕಚೇರಿ ಶಿವಮೊಗ್ಗ ಇವರಿಗೆ ಇಬ್ಬರು ವ್ಯಕ್ತಿಗಳು ಹಣದ ಆಮಿಷ ತೋರಿಸಿ ಕೆಲವು ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಡಲು ಕೇಳಿಕೊಂಡ ಮೇರೆಗೆ ಅವರು ನೀಡಿದ ಭೂದಾಖಲೆಗಳು ಪರಿಶೀಲಿಸಿದಾಗ ಸೃಷ್ಟಿ ಮಾಡಿದ ನಕಲಿ ದಾಖಲೆಗಳೆಂದು ತಿಳಿದ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪುನೀತ್ ಅವರು ನೀಡಿದ ದೂರಿನ ಆಧಾರಮೇಲೆ ದಿನಾಂಕ 15:06:2026 ರ ಸಂಜೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ (BNS) 2023 U-316 (4), 318(4), 340(2), 336(3), 336(2)FIR ದಾಖಲಾಗಿದೆ.
ಇನ್ನು ಈ ಪ್ರಕರಣ ಸಂಬಂಧ ಮತ್ತಷ್ಟು ಅಪ್ಡೇಟ್ಸ್ ನಿಮ್ಮ ಮುಂದೆ
ಈ ಪ್ರಕರಣ ಸಂಬಂಧ ಸ್ಥಳೀಯರು ಆರೋಪಿಸುವ ವಿಷಯ ಏನಂದರೆ ಪುರಾದಾಳ್ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಪತಿಯ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ.

ಅದೇನಂದರೆ ಅಗಸವಳ್ಳಿ ಗ್ರಾಮ ಪಂಚಾಯತ್ ಗೋವಿಂದಾಪುರ ಗ್ರಾಮದ ಸರ್ವೇ ನಂಬರ್ 4 ಮತ್ತು 48 ರಲ್ಲಿ ಸರ್ಕಾರಿ ಜಾಗದ ಸರಿ ಸುಮಾರ್ 10 ಕ್ಕು ಹೆಚ್ಚು ಎಕರೆ ಅಕ್ರಮ ನಿವೇಶನ ನಿರ್ಮಿಸಲಾಗಿದೆ. ಒಂದೊಂದ್ ನಿವೇಶನಕ್ಕು ಸರಿ ಸುಮಾರ್ 8 ರಿಂದ 10 ಲಕ್ಷ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಹಾಗೂ ಈ ನಿವೇಶನಗಳನ್ನು ಅಕ್ಕಪಕ್ಕ ಊರಿನವರು ಹಣ ನೀಡಿ ಖರೀದಿ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಈ ಸಂಬಂಧ ಪಿಡಿಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಅಕ್ರಮ ನಿವೇಶನ ಕುರಿತು ಮಾಹಿತಿ ಇರಲಿಲ್ಲವೇ? ಅಥವಾ ಕಂಡು ಕಾಣದಂತೆ ಅಧಿಕಾರಿಗಳು ಸುಮ್ಮನೆ ಇದ್ದರ? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಿ ನ್ಯಾಯ ಸಿಗುವುದೇ ಎಂಬ ಪ್ರಶ್ನೆ ಸಂತ್ರಸ್ತರು ಮತ್ತು ಸ್ಥಳೀಯರದ್ದಾಗಿದೆ..!?


