ಸರಿಗಮಪ ಜೂನಿಯರ್-22 ಸ್ಪರ್ಧಿ ಸೊರಬದ ಕೀರ್ತಿ ಎಸ್, ಅವರಿಗೆ ಮಾಜಿ ಸಚಿವ ಮಧು ಬಂಗಾರಪ್ಪನವರಿಂದ ಅಭಿನಂದನೆ

ಬೆಂಗಳೂರು

ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಸರಿಗಮಪ ಜೂನಿಯರ್-22’ ರಿಯಾಲಿಟಿ ಶೋನಲ್ಲಿ ಸೊರಬ ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಎಸ್. ಬೆಂಗಳೂರಿನ ತಮ್ಮ ಮನೆಗೆ ಸ್ವಾಗತಿಸಿದ ಮಧು ಬಂಗಾರಪ್ಪನವರು ಸನ್ಮಾನಿಸಿ, ನಿನ್ನ ಮುಂದಿನ ಸಂಗೀತ ಕ್ಷೇತ್ರದ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಕೀರ್ತಿ ಎಸ್. ಅದ್ಭುತ ಗಾಯನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು. ನಮ್ಮ ಗ್ರಾಮೀಣ ಭಾಗದ ಬಡತನ ಕುಟುಂಬದಿಂದ ಬಂದ ಈ ಗಾಯಕಿಯ ಪ್ರತಿಭೆಯನ್ನು ಕಂಡು, ಅತೀವ ಸಂತೋಷವಾಗಿದೆ,ನನ್ನ ತಂದೆ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪಜೀ ಅವರು ಸಂಗೀತ ಪ್ರಿಯರಾಗಿದ್ದು, ಸ್ವತಃ ಸಂಗೀತ ಕಲಿತು ಹಾಡುತ್ತಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಇಂದು ಇದ್ದಿದ್ದರೆ, ನಮ್ಮ ನೆಲದ ಈ ಹೆಮ್ಮೆಯ ಪ್ರತಿಭೆಯನ್ನು ಕಂಡು ಸಂತೋಷಪಡುತ್ತಿದ್ದರು ಎಂದರು.

“ನಮ್ಮ ಕ್ಷೇತ್ರದ ಜನರ ಪಾದದ ಧೂಳು ಸದಾ ನಮ್ಮ ಮನೆಯಲ್ಲಿರಬೇಕು”ಎಂಬ ಮಾತನ್ನು ಅಪ್ಪಾಜಿ ಸದಾ ಹೇಳುತ್ತಿದ್ದರು. ಅವರ ಆಶಯದಂತೆ ಇಂದು ನಮ್ಮೂರಿನ ಮಕ್ಕಳ ಪಾದದ ಧೂಳು ನಮ್ಮನೆಯನ್ನು ಆವರಿಸಿತ್ತು. ಬೆಂಗಳೂರಿನ ಸದಾಶಿವನಗರದ ನಮ್ಮ ನಿವಾಸಕ್ಕೆ ಪ್ರತಿಭಾವಂತ ಗಾಯಕಿ ಕುಮಾರಿ ಕೀರ್ತಿ ಎಸ್ ಮತ್ತು ಆಕೆ ಓದುತ್ತಿರುವ ಶಾಲೆಯ ಮಕ್ಕಳು ಆಗಮಿಸಿ, ನನ್ನ ಪ್ರೀತಿಯ ಆತಿಥ್ಯ ಸ್ವೀಕರಿಸಿರುವುದು ನನಗೆ ತುಂಬಾ ಸಂತೋಷ ಕೊಟ್ಟ ವಿಷಯ.ಜೊತೆಗೆ ಕೀರ್ತಿ ಅವರ ಪೋಷಕರು ಹಾಗೂ ಶಿಕ್ಷಕರು ಕೂಡ ಆಗಮಿಸಿದ್ದು ನನಗೆ ಖುಷಿ ತಂದಿತ್ತು. ಅವರೆಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯ ನೀಡಿ ಗೌರವಿಸುವ ಸೌಭಾಗ್ಯ ನಮ್ಮದಾಯಿತು ಎಂದರು.

ಈ ಸಂದರ್ಭದಲ್ಲಿ ಕುಮಾರಿ ಕೀರ್ತಿಯವರ ಯಶೋಗಾಧೆಯನ್ನು ಆಕೆಯ ಮಾತುಗಳಲ್ಲಿಯೇ ಕೇಳಿ. ಆಕೆಯನ್ನು ಗೌರವಿಸಿ, ಪ್ರೇರಣೆ-ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಸಂಗೀತ ಲೋಕದ ಪರಿಚಯವಾಗಲಿ ಎಂಬ ಉದ್ದೇಶದಿಂದ ನಮ್ಮ ಒಡೆತನದ “ಆಕಾಶ್ ಆಡಿಯೋ” ಸ್ಟುಡಿಯೋ ತೋರಿಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಲೈವ್ ರೆಕಾರ್ಡಿಂಗ್ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಪ್ರತ್ಯಕ್ಷ ಅನುಭವ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳೆಲ್ಲರೂ ಸ್ಟುಡಿಯೋ ಒಳಗಿನ ಪ್ರಪಂಚವನ್ನು ನೋಡಿ ಅಪಾರ ಸಂತಸ ವ್ಯಕ್ತಪಡಿಸದ್ದಲ್ಲದೆ, ಹೊಸ ವಿಷಯಗಳನ್ನು ಕುತೂಹಲದಿಂದ ತಿಳಿದುಕೊಂಡರು.

ಸೌಲಭ್ಯಗಳ ಕೊರತೆಯ ನಡುವೆಯೂ ಅರಳಿದ ಈ ನಮ್ಮ ಪ್ರತಿಭೆ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವುದನ್ನು ನೋಡುವುದೇ ಸಂತಸ ಈಕೆಯ ಸಾಧನೆ ಗ್ರಾಮೀಣ ಭಾಗದ ಮಕ್ಕಳಿಗೆ ದೊಡ್ಡ ಪ್ರೇರಣೆ. ಕೀರ್ತಿ ಅವರ ಸುಮಧುರ ಗಾಯನವು ಇಡೀ ಕನ್ನಡಿಗರ ಮನ ಗೆಲ್ಲಲಿ. ಈ ಮಹಾನ್ ವೇದಿಕೆಯಲ್ಲಿ ಅವರು ವಿಜಯಶಾಲಿಯಾಗಿ ಹೊರಹೊಮ್ಮಲಿ ಎಂದು ತುಂಬು ಹೃದಯದಿಂದ ಮಧು ಬಂಗಾರಪ್ಪನವರು ಶುಭ ಹಾರೈಸಿದರು.

Author