ಎವೆರೆಸ್ಟ್ ಏರಿ ಇಳಿಯುತ್ತಿದ್ದ ಪರ್ವತಾರೋಹಿಗಳಿಬ್ಬರು ಸಾವು

ಅವಘಡ ದುರಂತ

ಹೊಸದಿಲ್ಲಿ,ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಏರಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು, ಪರ್ವತದ ‘ಮೃತ್ಯುವಲಯ’ ಎಂದು ಕರೆಯಲಾಗುವ ಪ್ರದೇಶದಲ್ಲಿ ಇಳಿಯುತ್ತಿದ್ದಾಗ ಮೃತಪಟ್ಟಿದ್ದಾರೆ.

ಮೃತ ಶಿಖರಾರೋಹಿಗಳನ್ನು ಅರುಣ್ ಕುಮಾರ್ ತಿವಾರಿ ಹಾಗೂ ಸಂದೀಪ್ ಆರೆ ಎಂಬುದಾಗಿ ಗುರುತಿಸಲಾಗಿದೆ. ಇವರು ಜಗತ್ತಿನ ಅತಿ ದೊಡ್ಡ ಶಿಖರವಾದ ಎವರೆಸ್ಟ್ನ ತುತ್ತ ತುದಿಯನ್ನು ತಲುಪಿದ್ದರು. ಆದರೆ ಶಿಖರದಿಂದ ಕೆಳಗಿಳಿಯುತ್ತಿದ್ದಾಗ ಅವರಿಗೆ ತೀವ್ರವಾದ ಬಳಳಿಕೆ ಹಾಗೂ ವೈದ್ಯಕೀಯ ಸಮಸ್ಯೆಗಳುಂಟಾಗಿದ್ದವು.

ಅವರು ಬುಧವಾರ ಎವರೆಸ್ಟ್ ಶಿಖರದ ತುದಿಯನ್ನು ಏರಿದ್ದರೆ, ತಿವಾರಿ ಅವರು ಗುರುವಾರ ತಲುಪಿದ್ದರು.ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇಬ್ಬರು ಶಿಖರಾರೋಹಿಗಳನ್ನು ಉಳಿಸಲು ರಕ್ಷಣಾತಂಡಗಳು ಹಾಗೂ ಶೆರ್ಪಾ ಗೈಡ್ಗಳು ತೀವ್ರ ಪ್ರಯತ್ನಗಳನ್ನು ಮಾಡಿದ್ದರು.

ಆದರೆ ದುರದೃಷ್ಟವಶಾತ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲವೆಂದು ನೇಪಾಳದ ಪರ್ವತಾರೋಹಣ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಿಶಿ ಭಂಡಾರಿ ತಿಳಿಸಿದ್ದಾರೆ.

Author