ಶಿವಮೊಗ್ಗ | ವಾಣಿಜ್ಯೋದ್ಯಮಿಗಳಿಗೆ ನಂಬಿಕಸ್ಥ ಆರ್ಥಿಕ ಆಸರೆಯಾಗಿ ನಿಂತಿರುವ ಸಂಸ್ಥೆಯ ಸಾಧನೆ ಜಿಲ್ಲೆಗೆ ಮಾದರಿ : ಸಂಸದ BYR

ಶಿವಮೊಗ್ಗ

ಶಿವಮೊಗ್ಗದ ಹೆಮ್ಮೆಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಹಾಗೂ ಸುದೀರ್ಘ 100 ವರ್ಷಗಳ ಸಾರ್ಥಕ ಯಶೋಗಾಥೆಯನ್ನು ಹೊಂದಿರುವ “ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ (ನಿ.) ಶತಮಾನೋತ್ಸವ ಸಂಭ್ರಮ” ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಇಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಂಟಿಯಾಗಿ ಜ್ಯೋತಿ ಬೆಳಗುವ ಮೂಲಕ ಅತ್ಯಂತ ವೈಭವದಿಂದ ಉದ್ಘಾಟಿಸಲಾಯಿತು.

ಒಂದು ಶತಮಾನದ ಕಾಲ ಸಹಕಾರ ತತ್ವದ ಅಡಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ನಂಬಿಕಸ್ಥ ಆರ್ಥಿಕ ಆಸರೆಯಾಗಿ ನಿಂತಿರುವ ಈ ಸಂಸ್ಥೆಯ ಸಾಧನೆ ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದು ಸಂಸದ ಬಿ. ವೈ. ಆರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದರು , ಸಹಕಾರ ಕ್ಷೇತ್ರದ ಬಲವರ್ಧನೆಗೆ ಸಂಸ್ಥೆಯು ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿ, ಮುಂದಿನ ದಿನಗಳ ಬೆಳವಣಿಗೆಗೆ ಶುಭ ಹಾರೈಸಿದರು.

ಕಾರ್ಯಕ್ರಮವು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ 1008 ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಹಾಗೂ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುಗಳಾದ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಪವಿತ್ರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಪೂಜ್ಯ ಮಹಾಸ್ವಾಮಿಗಳ ದಿವ್ಯ ಸಮ್ಮುಖ ಲಭಿಸಿತು.ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟಿಸಿದರು.

ಶಾಸಕರುಗಳಾದ ಶ್ರೀ ಎಸ್.ಎನ್. ಚನ್ನಬಸಪ್ಪ, ಶ್ರೀ ಎಸ್. ರುದ್ರೇಗೌಡ, ಶ್ರೀ ಡಾ. ಧನಂಜಯ ಸರ್ಜಿ, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶ್ ಹುಲ್ಲುಳಿ, ಸಂಘದ ಅಧ್ಯಕ್ಷರಾದ ಶ್ರೀ ಬಳ್ಳೇಕೆರೆ ಸಂತೋಷ್ ಹಾಗೂ ವಿವಿಧ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

Author