ಶಿವಮೊಗ್ಗ, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಬರುತ್ತಿದ್ದಾನೆಂದು ಗಂಡನಿಗೆ ಔಷಧ ಕುಡಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ೧೪,ಲಕ್ಷ ರೂ. ದಂಡ ವಿಧಿಸಿ ಭದ್ರಾವತಿ ನ್ಯಾಯಾಲಯ ತೀರ್ಪು ನೀಡಿದೆ.
೨೦೨೦ರ ಜನವರಿ ೧೫ರಂದು ಭದ್ರಾವತಿಯ ಪೇಪರ್ ಟೌನ್ ಪೊಲಿಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆಯು ತನ್ನ ಪ್ರಿಯಕರ ರಾಜಶೇಖರಯ್ಯ ಎಂಬುವವನ ಜೊತೆಗೆ ಸೇರಿ ಗಂಡ ಪ್ರಕಾಶ್‌ಬಾಬುವಿಗೆ ಮತ್ತು ಬರುವ ಔಷದಿಯನ್ನು ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ಈ ಬಗ್ಗೆ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿ ಸಿಪಿಐ ಮಂಜುನಾಥ್ ಈ. ಓ. ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಆರೋಪಿತರಿಗೆ ಶಿಕ್ಷೆ ಘೋಷಿಸಿ ಪಿರ್ಯಾದಿಗೆ ಪರಿಹಾರವಾಗಿ ೫ ಲಕ್ಷ ರೂಪಾಯಿ. ಪರಿಹಾರ ನೀಡಲು ಆದೇಶಿಸಿದ್ದಾರೆ.
ತೀರ್ಥಹಳ್ಳಿ: ಗೋ ಸಾಗಾಣೆ ವಾಹನ ಸಮೇತ ಮೂವರು ವಶಕ್ಕೆ
ತೀರ್ಥಹಳ್ಳಿ, ನಗರದಿಂದ ದಾವಣಗೆರೆಗೆ ಲಾರಿಯಲ್ಲಿ ಗೋವನ್ನು ಸಾಗಿಸುತ್ತಿದ್ದ ವಾಹನದ ಸಮೇತ ಮೂವರನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಕೋಣಂದೂರು ಸಮೀಪ ವಾಹನವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು ವಾಹನದಲ್ಲಿ ಹತ್ತು ಗೋವುಗಳು ಇದ್ದವು.
ಮಾಹಿತಿ ಪ್ರಕಾರ ಗೋವನ್ನು ದಾವಣಗೆರೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನವನ್ನು ಇರಿಸಲಾಗಿದ್ದು ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದು,ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಬೀಗ ಮುರಿದು ಮಧ್ಯಾಹ್ನವೇ ಭಾರೀ ಮೊತ್ತದ ನಗ-ನಗದು ಕಳ್ಳತನ
ಹಾಡುಹಗಲಲ್ಲೇ ಮನೆಯ ಬೀಗ ಮುರಿದು 19 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ದುಡ್ಡು ಕಳವು ಮಾಡಿದ ಘಟನೆಯೊಂದು ಶಿವಮೊಗ್ಗ ನಗರದಲ್ಲಿಯೇ ನಡೆದಿದೆ. ಮೇ ನಾಲ್ಕರಂದು ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವೆಂಕಟೇಶ್ ನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ವೆಂಕಟೇಶ್ ನಗರ 4ನೇ ಕ್ರಾಸ್‌ನ ಮಾತಾ ಪಿತೃ ಕೃಪಾ ನಿಲಯದ ನಿವಾಸಿ, ಪ್ರಶಾಂತ್ ಎಂಬವರು ಎಂದಿನಂತೆ ತಮ್ಮ ವಹಿವಾಟಿಗಾಗಿ ಟೈಲರಿಂಗ್ ಅಂಗಡಿಗೆ ತೆರಳಿದ್ದು. ಇವರ ಪತ್ನಿ ಮಧ್ಯಾಹ್ನ 12-25 ಗಂಟೆಗೆ ಮನೆಗೆ ಬೀಗ ಜಡಿದು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದರು. ಬಳಿಕ ಮಧ್ಯಾಹ್ನ 2-00 ಗಂಟೆಯ ಹೊತ್ತಿಗೆ ವಾಪಸ್ ಆಗಿದ್ದಾರೆ.
ಅಷ್ಟೊತ್ತಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಶಾಂತ್ ರವರ ಪತ್ನಿ ಮನೆಗೆ ಹಿಂದಿರುಗಿದಾಗ, ಮನೆಯ ಮುಂಬಾಗಿಲು ತೆರದಿತ್ತು.
ಮಲಗುವ ಕೋಣೆಯಲ್ಲಿದ್ದ ವಾರ್ಡ್ರೋಬ್ ಮತ್ತು ಗೋದ್ರೇಜ್ ಬೀರುಗಳ ಬಾಗಿಲು ಓಪನ್ ಆಗಿದ್ದವು. ಅದರೊಳಗಿದ್ದ ವಸ್ತುಗಳೆಲ್ಲವೂ ಹಾಸಿಗೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನ ಕಂಡ ಅವರು ತಮ್ಮ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಮನೆಗೆ ಧಾವಿಸಿದ ಪ್ರಶಾಂತ್ ಬಾಬು ಅವರು ಪರಿಶೀಲನೆ ನಡೆಸಿದಾಗ, ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳರು ಒಳಕ್ಕೆ ಬಂದಿರುವುದು ಗೊತ್ತಾಗಿದೆ.
ನಂತರ ಈ ಸಂಬಂಧ ಜಯನಗರ ಪೊಲೀಸ್ ಸ್ಟೇಷನ್ಗೆ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

4,00,000 ಕ್ಯಾಶ್, 1,68,000 ರೂಪಾಯಿ ಮೌಲ್ಯದ 14 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟ್, 1,20,000 ರೂಪಾಯಿ ಬೆಲೆಯ 10 ಗ್ರಾಂ ಚಿನ್ನದ ಚೈನ್, 1,80,000 ರೂಪಾಯಿ ಮೌಲ್ಯದ 15 ಗ್ರಾಂ ಚಿನ್ನದ ಚೈನ್, 60,000 ರೂಪಾಯಿ ಬೆಲೆಯ 5 ಗ್ರಾಂ ಚಿನ್ನದ ಚೈನ್ ಹಾಗೂ ಮತ್ತೊಂದು 1,20,000 ರೂಪಾಯಿ ಮೌಲ್ಯದ 10 ಗ್ರಾಂ ಚಿನ್ನದ ಚೈನ್ 1,20,000 ರೂಪಾಯಿ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರ, 60,000 ರೂಪಾಯಿ ಬೆಲೆಯ 5 ಗ್ರಾಂ ಚಿನ್ನದ ಉಂಗುರ, 24,000 ರೂಪಾಯಿ ಮೌಲ್ಯದ 2 ಗ್ರಾಂ ಚಿನ್ನದ ಉಂಗುರ ಸೇರಿದಂತೆ ಒಟ್ಟು 15,12,000 ರೂಪಾಯಿ ಮೌಲ್ಯದ 126 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ..

