ಶಿವಮೊಗ್ಗ | Auto ದಬ್ಬಾಳಿಕೆ ; ಟ್ರಾಫಿಕ್ ಪೊಲೀಸ್ ಇಲಾಖೆಗೆ ಇಲ್ಲಿದೆ ಪರಿಹಾರ..!

ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ 3 ಪ್ರಿಪೇಯ್ಡ್ ಸ್ಟಾಂಡ್ ತೆರಯುವ ಮೂಲಕ ಸಾರ್ವಜನಿಕರೂ ಪ್ರಯಾಣಿಕರ ಅನುಕೂಲಕ್ಕೆ ಅಂತ ವ್ಯವಸ್ಥೆ ಜಾರಿಗೆ ತರಲಾಯಿತು.

ನಗರದಲ್ಲಿ ಹಲವಾರು ಬಾರಿ ಟ್ರಾಫಿಕ್ ಪೊಲೀಸರು Auto ಚಾಲಕರಿಗೆ ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆ ನೀಡಲಾಯಿತು.

ದಂಡ ಕೂಡ ವಿಧಿಸಲಾಯಿತು. ಪೊಲೀಸ್ ಸಹಾಯವಾಣಿ ತೆರೆಯಲಾಯಿತು.

ಆದರೆ ಏನಾದರು ಬದಲಾವಣೆ ಆಯಿತಾ ಎಂದರೆ ಉತ್ತರ ಮಾತ್ರ ಏನು ಬದಲಾವಣೆಯಿಲ್ಲದಾಗಿದೆ.

ಇದಕ್ಕೆಲ್ಲ ಕಾರಣಗಳೇನು?ನಗರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಾದರು ಏನು? ಸಂಪೂರ್ಣ ಮಾಹಿತಿ ನಿಮ್ಮ ಮುಂದೆ,

ಶಿವಮೊಗ್ಗ ನಗರದಲ್ಲಿ ನಿನ್ನೆ ದಿವಸ ನಡೆದ ಒಂದು ಘಟನೆಯ ಪ್ರಯಾಣಿಕರು ಮಾಡಿರುವ ಆರೋಪ ಗಂಭೀರವಾಗಿದೆ.

ಅದೇನಂದರೆ ನಿನ್ನೆ ದಿವಸ ದಾವಣಗೆರೆ ಜಿಲ್ಲೆಯ ಯಾವದೋ ಹಳ್ಳಿಯಿಂದ ರೋಗಿ ಹಾಗೂ ಅವರೊಟ್ಟಿಗೆ ಮತ್ತೊಬ್ಬರು ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಬರಬೇಕಿತ್ತು.ಆದರೆ ಅವರು ಹಳ್ಳಿಯವರು ಹಾಗೂ ಶಿವಮೊಗ್ಗದ ಪರಿಚಯವಿಲ್ಲದ ಕಾರಣ ನಗರದ ಅಶೋಕ ವೃತ್ತದಲ್ಲಿ (Bus Stand) Auto ಗೆ ನಂಜಪ್ಪ ಆಸ್ಪತ್ರೆ ಅಂತ ಹೇಳಿದ್ದಾರೆ.

Auto ಚಾಲಕ ಪ್ರಯಾಣಿಕರು ಇಲ್ಲಿಯವರು ಅಲ್ಲಾ ಅಂತ ತಿಳಿದುಕೊಂಡು ಅವರಿಗೆ ಮಾಹಿತಿ ಇಲ್ಲ ಅಂತ ಗಾಡಿಕೊಪ್ಪ ನಂಜಪ್ಪ ಆಸ್ಪತ್ರೆಗೆ ರೋಗಿಯನ್ನು ಕರೆದೋಯ್ದು ನಂತರ ಅವರು ಅದಲ್ಲ ಕುವೆಂಪು ರಸ್ತೆಯಲ್ಲಿ ಇನ್ನೊಂದ್ ಆಸ್ಪತ್ರೆಯಿದೆ ಅಂತ ಹೇಳಿ Auto ಚಾಲಕ Bus ಸ್ಟಾಂಡ್ ನಿಂದ ಗಾಡಿಕೊಪ್ಪದ ನಂಜಪ್ಪ ಆಸ್ಪತ್ರೆಗೆ 500₹ ಬಾಡಿಗೆ ಹಾಗೂ ಅಲ್ಲಿಂದ ವಾಪಾಸ್ ಕುವೆಂಪು ರಸ್ತೆಯಲ್ಲಿರುವ ಆಸ್ಪತ್ರೆಗೆ 400 ಒಟ್ಟಾರೆ 900₹ ಪಡೆದಿರುವ ಆರೋಪ ಕೇಳಿ ಬಂದಿದೆ.

ಹಳ್ಳಿಯ ಜನ ಸರಿಯಾದ ತಿಳುವಳಿಕೆ ಇಲ್ಲದೆ ಹಣ ಪಾವತಿಸಿದ್ದಾರೆ.ಹಾಗೂ ಖಾಸಗಿ ಆಸ್ಪತ್ರೆಯಾದ ಚಿಕಿತ್ಸೆಗೆ ಹಣ ನೀಡಿ ಕೊನೆಗೆ ಈ ಬಿರು ಬಿಸಲಲ್ಲಿ ಊಟಕ್ಕೂ ಹಣವಿಲ್ಲ ಅಂತ ಶಿವಮೊಗ್ಗ Auto ಸಹವಾಸನು ಬೇಡ ಅಂತ ನಡೆದುಕೊಂಡು Bus ಸ್ಟಾಂಡ್ ಗೆ ತೆರಳಿದ್ದಾರೆ ಎಂಬ ಮಾಹಿತಿಯಾಗಿದೆ.

ಈ ರೀತಿಯ ಘಟನೆಗಳು ಪದೇ ಪದೇ ಕೇಳಿಬರುತ್ತಿದೆ. ನಂಜಪ್ಪ ಆಸ್ಪತ್ರೆ ಎಂದ ತಕ್ಷಣವೇ ಗಾಡಿಕೊಪ್ಪ ಆಸ್ಪತ್ರೆ ಕರೆದುಕೊಂಡು ಹೋಗುವುದು ಅಲ್ಲಿಂದ ವಾಪಾಸ್ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬರುವುದು ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.ಜನಸಾಮಾನ್ಯರ ಅಸಹಾಯಕ ಪರಿಸ್ಥಿತಿಯನ್ನು ಆಟೋದವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಹಾಗಾಗಿ ದಿನನಿತ್ಯ ಈ ರೀತಿ ಯಾಮಾರಿಸಿದರೆ ಏನಿಲ್ಲ ಅಂದರು ಒಂದು 5 ಪ್ಯಾಸೆಂಜರ್ ಮರಳು ಮಾಡಿದರೆ ಮುಗಿತು, ಹಾಗೂ ಬೆದರಿಕೆ ದಬ್ಬಾಳಿಕೆ ಮಾಡಿ ಇಷ್ಟೊಂದ್ ಪ್ರಾಮಾಣಿಕ ದುಡಿಮೆ ಮಾಡಲು ಬೇರೆ ಕೆಲಸದಲ್ಲಿ ತುಂಬಾ ಕಷ್ಟವಿದೆ ಎಂದು ಪ್ರಜ್ಞಾವಂತ ನಾಗರಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ ಇಂದ ಸಂಜೆವರೆಗೂ ಬೆವರುಸುರಿಸಿ ದುಡಿಮೆ ಮಾಡಿ ಕಷ್ಟನೋ ಸುಖಾನೋ ರೋಗ ರೂಜಿನನೋ ಎಲ್ಲದನ್ನು ಬದಿಗೊತ್ತಿ ಏನೋ Auto ಇದೆ ಮನೆಬಾಗಲಿಗೆ ತಂದು ತಲುಪಿಸುತ್ತಾರೆ ಅಂತ ಜನಸಾಮಾನ್ಯರು, ಪ್ರಯಾಣಿಕರು ನಂಬಿದ್ರೆ ಅದೆಲ್ಲ ಶಿವಮೊಗ್ಗದಲ್ಲಿ ಬೇರೆ ರೀತಿ ಸ್ವರೂಪ ಪಡೆಯುತ್ತಿದೆ.

ಇನ್ನು ಶಿವಮೊಗ್ಗ ನಗರದಲ್ಲಿರುವ Auto ಸ್ಟಾಂಡ್ ಗಳಲ್ಲಿ ಮಾತ್ರ ಜನಸಾಮಾನ್ಯರು ಆಟೋದಲ್ಲಿ ಪ್ರಯಾಣಿಸಬೇಕು ಎಚ್ಚರ ತಪ್ಪಿದರೆ ನಡೆಯುತ್ತೆ ದಬ್ಬಾಳಿಕೆ ಗಲಾಟೆ ಅಸಭ್ಯ ಬೈಗುಳ ಮಾತುಗಳು.

ಇದು ಬಹುತೇಕ ಎಲ್ಲಾ Auto ಸ್ಟಾಂಡ್ ಗಳಲ್ಲಿ ಇದೆ ನಡೆಯುತ್ತಿದೆ.ಇನ್ನು ಇಂದು ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆ ಮುಂಭಾಗ ನಡೆದ ಒಂದು ಘಟನೆ ತಿಳಿಸುತ್ತಿದ್ದೇವೆ.

ಮಧ್ಯಾಹ್ನ 2 ಗಂಟೆ ಆಸು ಪಾಸಿನಲ್ಲಿ ತಂದೆ ತನ್ನ ಪುಟಾಣಿ ಮಗು ಒಂದನ್ನು ಆಸ್ಪತ್ರೆಯಲ್ಲಿ ಚಿಕೆತ್ಸೆ ಕೊಡಿಸಿ ರಸ್ತೆಯಲ್ಲಿ ಬರುತ್ತಿದ್ದ Auto ಗೆ ಕರೆದು ಹತ್ತಿದರು, ಹತ್ತಿದ್ದೇ ದೊಡ್ಡ ಅಪರಾಧವಾಯಿತು ನೋಡಿ ಆಟೋ ಸ್ಟಾಂಡ್ ನಿಂದ ಬಂದೆ ಬಿಡ್ತು ದಂಡ ಆಸ್ಪತ್ರೆ ರಸ್ತೆ ಎನ್ನುವುದು ನೋಡದೆ ರಸ್ತೆ ಅಂತನು ನೋಡದೆ ಟ್ರಾಫಿಕ್ ಜಾಮ್ ಆಗುತ್ತಿದೆ ಹಿಂದೆ ಮುಂದೆ ಅಂತಾನೂ ನೋಡದೆ ಆಟೋನ ಅಡ್ಡ ಹಾಕಿದ್ದೆ ಹಾಕಿದ್ದು Auto ಚಾಲಕನಿಗೆ ತಂದೆ ಮಗು Auto ಬಿಟ್ಟು ಇಳಿಯುವರೆಗೂ ಬಿಡಲಿಲ್ಲ ಕೊನೆಗೂ ಆಟೋದಿಂದ ಇಳಿಸಿ ಇವರ Auto ಸ್ಟಾಂಡ್ Auto ಗೆ ಹತ್ತಿಸಿ ಕಳಿಸಿದರು.

ಅಲ್ಲಾ ಸ್ವಾಮಿ Auto ಸ್ಟಾಂಡ್ ನಲ್ಲೆ ಹತ್ತಬೇಕು ಅಂತ ಸಂಬಂಧಪಟ್ಟ ಇಲಾಖೆಯಿಂದ ಕಾನೂನು ಏನಾದರು ಇದಿಯೇನ್ರಿ?ಜನಸಾಮಾನ್ಯರ ಇಷ್ಟ ಯಾವ Auto ದಲ್ಲಿ ತೆರಳಬೇಕು ಎಂಬುದು! ಇದನ್ನು ತಡೆಹಿಡಿಯಲು ನಿಮಗೆ ಯಾರು ಮತ್ತೊಂದು Auto ಅಥವಾ ಪ್ರಯಾಣಿಕರಿಗೆ ಅನಾನುಕೂಲ ಮಾಡಲು ನೀವುಗಳು ಯಾರು?ಜನಸಾಮಾನ್ಯರು Auto ಸ್ಟಾಂಡ್ ಇದ್ದರು ಯಾಕೆ ರಸ್ತೆಯಲ್ಲಿ ಬರುವ Auto ಗೆ ಕೈ ಮಾಡಿ ಹತ್ತುತ್ತಿದ್ದಾರೆ? Auto ಸ್ಟಾಂಡ್ ನಲ್ಲಿ ಬೇಕಾಬಿಟ್ಟಿ ಬಾಡಿಗೆ ಕೇಳುವುದು ಗುಂಪಾಗಿ ಬಂದು ಗಲಾಟೆ ದಬ್ಬಾಳಿಕೆ ಮಾಡುವುದು, ನಿಮ್ಮಗುಳ ಸಹವಾಸ ಬೇಡ ಅಂತ Auto ಸ್ಟಾಂಡ್ ಬಿಟ್ಟು ಪ್ರಯಾಣಿಕರು ಸಾರ್ವಜನಿಕರು, ರಸ್ತೆಯಲ್ಲಿ ಬರುವ ಬೇರೆ Auto ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಈ ವ್ಯವಸ್ಥೆಗು ಜನಸಾಮಾನ್ಯರು ನೆಮ್ಮದಿಯಾಗಿ ಹೋಗಲು ಬಿಡುವುದಿಲ್ಲ ಎಂದರೆ ಯಾವ ನ್ಯಾಯ ಸ್ವಾಮಿ? ಎಂದು ಜನಸಾಮಾನ್ಯರು, ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ ಇದೆ ನಂಜಪ್ಪ ಆಸ್ಪತ್ರೆ ಎದುರಿನ Auto ಸ್ಟಾಂಡ್ ಸಹವಾಸ ಬೇಡ ಅಂತ ಮಹಿಳೆಯೊಬ್ಬರು ಹಸುಗೂಸನ್ನು ಎತ್ತಿಕೊಂಡು ತನ್ನ ತಾಯಿಯೊಂದಿಗೆ ಬಂದು ರಸ್ತೆಯಲ್ಲಿ ಬರುತ್ತಿದ್ದ Auto ಕೈ ಮಾಡಿದಾಗ ಅಲ್ಲಿಯೂ ಆಟೋದೊಂದಿಗೆ ಜಗಳವಾಡಿ ನಂತರ ಆಟೋ ಸ್ಟಾಂಡ್ ಆಟೋದಿಂದಾನು ಜಾಸ್ತಿ ಹಣ ಕೇಳಿದಾಗ ಆ ಮಹಿಳೆ Auto ಸಹವಾಸ ಬೇಡ ಅಂತ ಬಿರು ಬಿಸಿಲಿನಲ್ಲಿ ತೆರಳಿದ್ದು ಮನಕಲಕುವುದಿಲ್ಲವೇ?

ಗಂಟೆ ಗಟ್ಟಲೆ Auto ನಿಲ್ಲಿಸಿಕೊಂಡು ಸ್ಟಾಂಡ್ ನಲ್ಲಿ ನಿಲ್ಲುತ್ತೆವೆ ನಮಗೆ ಬಾಡಿಗೆ ಆಗಬೇಕು ಅಂತ ನೀವು ಯೋಚಿಸುವಾಗ? ನೀವು ಆಟೋದವರಾಗಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಜನಸಾಮಾನ್ಯರು ಎತ್ತಿದ್ದಾರೆ?

ಇದು ಕೇವಲ ನಂಜಪ್ಪ ಆಸ್ಪತ್ರೆ ಒಂದರಲ್ಲಿ ಆಗುತ್ತಿರುವ ಕಥೆ ಅಲ್ಲ, ನಗರದಲ್ಲಿ ಬಹುತೇಕ ಕಡೆ ಇದೆ ಪರಿಸ್ಥಿತಿ ಆಗುತ್ತಿದೆ.ಟ್ರಾಫಿಕ್ ಪೊಲೀಸರೆ ನಿಮ್ಮ ಗಮನಕ್ಕೆ ಅಸಹಾಯಕ ಜನಗಳು ಹೇಗೆ ಅವರುಗಳ ಅಸಹಾಯಕ ಪರಿಸ್ಥಿತಿ ಇದ್ದಾಗ ಪೊಲೀಸ್ ಸ್ಟೇಷನ್ ಗೆ ಬಂದು ದೂರು ನೀಡಲು ಸಾಧ್ಯ?

ಸರ್ಜಿ ಆಸ್ಪತ್ರೆ ಬಳಿ ಇರುವ ಆಟೋ ಸ್ಟಾಂಡ್ ಅಂತೂ ಬಿಡಿ ಯಾರೋ ಸತ್ತೇ ಹೋದರೇನೋ ಅಪಘಾತ ಏನೋ ಆಯಿತೇನೋ ಎಂಬಂತೆ Auto ಚಾಲಕರು ಆಸ್ಪತ್ರೆ ಎನ್ನುವುದು ಮರೆತು ಕಿರುಚಾಡುತ್ತಿರುತ್ತಾರೆ. ಅಕ್ಕ ಪಕ್ಕ ನಿಂತಿರುವ Auto ಕರೆಯವುದು ಸಹ ಆ ಪರಿಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಮುಂದೆ ಹೇಗೆ ಇರಬೇಕು ಅನ್ನುವು ಅರಿವು ಇವರಿಗೆಲ್ಲ ತಿಳಿದಿಲ್ಲ ಎಂಬುದು ರೋಗಿಗಳ ಅಳಲು.

ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹತ್ತಿರ ಕೂಡ ಬಡವರು ಎಂಬುದು ಕೂಡ ಲೆಕ್ಕವಿಲ್ಲದೆ ಬೇಕಾಬಿಟ್ಟಿ ಬಾಡಿಗೆ ಪಡೆಯುವುದು ಆಗುತ್ತಿದೆ. Auto ಚಾಲಕರ ಬಳಿ ಬೇಕಾಬಿಟ್ಟಿ ಬಾಡಿಗೆ ಬಗ್ಗೆ ಪ್ರಶ್ನೆ ಮಾಡಿದರೆ Readymade ಉತ್ತರವಿದೆ, ಗ್ಯಾಸ್, LPG ದರ ಹೆಚ್ಚಾಗಿದೆ ನಾವೇನು ಮಾಡಬೇಕು ಅಂತ..?

ಹಾಗೂ ನಗರದಲ್ಲಿ ಒಂದು ರೀತಿ ನಮಗೆ ಯಾರು ಏನು ಮಾಡಲು ಸಾಧ್ಯವೆಂಬಂತೆ ಆಗಿದೆ. ಟ್ರಾಫಿಕ್ ಪೊಲೀಸ್ ಇಲಾಖೆಯನ್ನೇ ಅಣಕಿಸುವಂತೆ ಆಟೋಗಳ ದಬ್ಬಾಳಿಕೆ ನಡೆಯುತ್ತಿದೆ.

ಇವರೆಲ್ಲ ಜೀವನೋಪಾಯಕ್ಕಾಗಿ ದುಡಿಯುವ ಬಡ Auto ಚಾಲಕರ ಎಂಬ ಪ್ರಶ್ನೆ ಜನಮಾನಸದಲ್ಲಿ ಎದ್ದಿದೆ..!?

ಬೇಕಾಬಿಟ್ಟಿ ಬಾಡಿಗೆ ಪಡೆಯುವುದರ ಜೊತೆಗೆ Auto ಚಾಲಕರ ದೌರ್ಜನ್ಯ ವಿರುದ್ಧ ನಮ್ಮ ಮಾಧ್ಯಮದೊಂದಿಗೆ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೇಳಿದ್ದಿಷ್ಟು,

ಶಿವಮೊಗ್ಗದಲ್ಲಿ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ 1.5 ಕಿ.ಮಿ ಗೆ ಮಿನಿಮಂ ದರ ಅತೀ ಹೆಚ್ಚು 40₹ ಯಿದೆ. ಇದು ಹೆಚ್ಚಿನ ಬಾಡಿಗೆ ದರ ನಿಗದಿ ಮಾಡಲಾಗಿದೆ. ಇದು ಕೂಡ ಗ್ಯಾಸ್ ಬೆಲೆ ಏರಿಕೆಗೂ ಮುನ್ನವೇ Auto ಚಾಲಕರಿಗೆ ಇಲಾಖೆವತಿಯಿಂದ ಅನುಕೂಲ ಮಾಡಿಕೊಟ್ಟಿದ್ದಾರೆ .

Bus ಸ್ಟಾಂಡ್ ನಿಂದ ಗಾಡಿಕೊಪ್ಪ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಗೆ ಸರಿ ಸುಮಾರ್ 92₹ ಯಿಂದ 100₹ ಆಗಲಿದೆ ಹಾಗೂ ಅಲ್ಲಿಂದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ 100₹ ಆಗಲಿದೆ.

ಹಾಗಾಗಿ ಮೇಲ್ಕಂಡ ವಿಚಾರದಂತೆ 900₹ ಪಡೆದಿರುವುದು ದೌರ್ಜನ್ಯ ಬೇರೆ ಬೇರೆ ಕಡೆಯಿಂದ ಬರುವಂತ ನಾಗರಿಕರು ಜನಸಾಮಾನ್ಯರಿಗೆ ನೆರವಾಗಿರಬೇಕು, ನಗರಕ್ಕೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಎಲ್ಲಾ Auto ಚಾಲಕರು ಹೀಗೆ ಎಂಬಂತೆ ಜನಸಾಮಾನ್ಯರಲ್ಲಿ ಮೂಡುವಂತೆ ಆಗಬಾರದು ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.

ಹಾಗೆ ನಗರದಲ್ಲಿ ವಿಪರೀತ ಆಟೋಗಳಿಗೆ ಪರ್ಮಿಟ್ ನೀಡಲಾಗಿದೆ . ಮಹಾನಗರ ಪಾಲಿಕೆ ವ್ಯಪ್ತಿಯಲ್ಲಿ 4000 ದಿಂದ 5,000 Auto ಮಾತ್ರ ಪರ್ಮಿಟ್ ನೀಡಬೇಕು ಆದರೆ ನಗರದಲ್ಲಿ 6,500 ಕ್ಕು ಹೆಚ್ಚು Auto ಗಳಿವೆ. 1,500 ಗಾಡಿಗಳು ಹೆಚ್ಚಾಗಿದೆ.

ಇದರಿಂದ ಆಟೋಗಳ ಬೇಕಾಬಿಟ್ಟಿ ಬಾಡಿಗೆ ಕೇಳುವುದು ಮತ್ತೊಂದು ಸಮಸ್ಯೆ ಉಂಟಾಗಿದೆ. ಹಾಗಾಗಿ ಈ ಕೂಡಲೇ RTO ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು ಹಾಗೂ Meter ಕಡ್ಡಾಯಗೊಳಿಸಬೇಕು.

ಹಾಗೂ ಯಾರೇ ಬೇಕಾಬಿಟ್ಟಿ ಬಾಡಿಗೆ ಪಡೆದರೆ ಹಾಗೂ ದೌರ್ಜನ್ಯ ಕೇಳಿ ಬಂದಲ್ಲಿ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು, ಅಂತಹ ಆಟೋಗಳ ಲೈಸನ್ಸ್ ರದ್ದುಗೊಳಿಸಬೇಕು ಎಂದು ತಿಳಿಸಿದ್ದಾರೆ.

ಇನ್ನು ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ನಮ್ಮೊಂದಿಗೆ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ಆಗುವುದನ್ನ ಸಹಿಸುವುದಿಲ್ಲ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕೊನೆಯದಾಗಿ ಸಮಸ್ಯೆಗಳಿಗೆ ಪರಿಹಾರ ಏನು?

ಮೊದಲನೆಯದು Auto Meter ಕಡ್ಡಾಯ ಮಾಡಬೇಕಾಗಿದೆ.

ಹಾಗೂ ನಗರದಲ್ಲಿರುವ ಎಲ್ಲಾ Auto ಗಳಿಗೆ ಟ್ರಾಫಿಕ್ ಪೊಲೀಸ್ ಇಲಾಖೆ ಕಡ್ಡಾಯವಾಗಿ, ಪರಿಣಾಮಕಾರಿಯಾಗಿ ಪೊಲೀಸ್ ಸಹಾಯವಾಣಿ ನಂಬರ್ ಅಳವಡಿಸಬೇಕಿದೆ.

ಯಾವದೇ ಅಹಿತಕರ ಘಟನೆ ದೂರುಗಳು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಲೈಸನ್ಸ್ ರದ್ದೂಗೊಳಿಸುವಂತ ಕಠಿಣ ಕ್ರಮಕ್ಕೆ ಮುಂದಾಗುವ ಮುಖೇಣ ಪ್ರಯಾಣಿಕರು , ನಾಗರಿಕರು, ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸ್ ಇಲಾಖೆ ನೆರವಿಗೆ ಇರಲಿದೆ ಎಂಬ ಸ್ಪಷ್ಟ ಸಂದೇಶ ರವನಿಸೊದರ ಮೂಲಕ ಜನಸಾಮಾನ್ಯರಿಗೆ ಕೂಡ ಜಾಗೃತಿ ಮೂಡಿಸಬೇಕಾಗಿದೆ.

Author