ಆಪರೇಷನ್ ಸಿಂಧೂರ್ ನಡೆದು ಇಂದಿಗೆ ಒಂದು ವರ್ಷವಾಗಿದೆ. ಪಹಲ್ಗಾಮ್ನಲ್ಲಿ 26 ಅಮಾಯಕ ಭಾರತೀಯರನ್ನು, ಅವರ ಧರ್ಮ ಕೇಳಿ ಹತ್ಯೆ ಮಾಡಿದ ಉಗ್ರರಿಗೆ ಭಾರತ ನೀಡಿದ ದಿಟ್ಟ ಪ್ರತ್ಯುತ್ತರ ‘ಆಪರೇಷನ್ ಸಿಂಧೂರ್’ ಇತಿಹಾಸದಲ್ಲಿ ದಾಖಲಾಗಿದೆ.
ಆಪರೇಷನ್ ಸಿಂಧೂರ್ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಲ್ಲ; ಇದು ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಬದಲಾದ ಭಾರತದ ಬಲಿಷ್ಠ ಸಂಕಲ್ಪದ ಸಂಕೇತ! ನಮ್ಮ ಅಮಾಯಕ ನಾಗರಿಕರ ರಕ್ತಕ್ಕೆ ಉತ್ತರವಾಗಿ, ದೇಶದಾಚೆ ಶತ್ರುಗಳು ಅಡಗಿದ್ದ ಗುಹೆಯಲ್ಲೇ ಹೊಕ್ಕು ಹೊಡೆಯುವ ಶಕ್ತಿ ನಮಗಿದೆ ಎಂದು ಜಗತ್ತಿಗೆ ಸಾರಿದ ದಿನವೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಬಣ್ಣಿಸಿದ್ದಾರೆ!

2025ರ ಮೇ 7 ರಂದು ನಮ್ಮ ಸೇನಾಪಡೆಗಳು ಪಾಕಿಸ್ತಾನದ ಒಳಗೆ ಉಗ್ರರನ್ನು ಪೋಷಿಸುತ್ತಿದ್ದ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು. ಈ ಸಂದರ್ಭದಲ್ಲಿ ನಮ್ಮ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳ ಶಕ್ತಿ, ಶೌರ್ಯ, ಪರಾಕ್ರಮಗಳಿಗೂ ಕೂಡ ನಮ್ಮ ಹೆಮ್ಮೆಯ ಮತ್ತು ಗರ್ವದ ಅಭಿನಂದನೆಗಳನ್ನು ಸಲ್ಲಿಸೋಣ – ಭಾರತೀಯ ಸೇನಾ ಪಡೆಗಳ ಶಕ್ತಿ ಮತ್ತು ಕರ್ತವ್ಯನಿಷ್ಠೆಯೇ ನಮ್ಮ ರಾಷ್ಟ್ರದ ಭದ್ರತೆಯ ಬುನಾದಿಯಾಗಿದೆ!
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಯವರ ಸದೃಢ ನಾಯಕತ್ವ ಮತ್ತು ‘Zero Tolerance towards Terror’ ನೀತಿಯಿಂದಾಗಿ ಇಂದು ಭಾರತ ಶಕ್ತಿಶಾಲಿಯಾಗಿ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ.

‘ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರುವುದಿಲ್ಲ‘ ಎಂಬ ಸಂದೇಶ ಇಂದು ಗಡಿಯಾಚೆಗಿನ ಶತ್ರುಗಳಿಗೆ ಸ್ಪಷ್ಟವಾಗಿ ತಲುಪಿದೆ.ಹಾಗೆಯೇ, ಆಪರೇಷನ್ ಸಿಂಧೂರ್ನಲ್ಲಿ ಬಳಕೆಯಾದ ಕ್ಷಿಪಣಿಗಳು ಮತ್ತು ಸ್ವದೇಶಿ ತಂತ್ರಜ್ಞಾನದ ಡ್ರೋನ್ಗಳು ನಮ್ಮ ‘ಆತ್ಮನಿರ್ಭರ ಭಾರತ’ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ.
ಭಾರತ ಸದಾ ಶಾಂತಿಯನ್ನು ಬಯಸುವ ದೇಶ, ಆದರೆ ಅದು ನಮ್ಮ ದೌರ್ಬಲ್ಯವಲ್ಲ – ಭಯೋತ್ಪಾದನೆಯನ್ನು ಹತ್ತಿಕ್ಕುವುದೂ ಗೊತ್ತಿದೆ! ಕೇವಲ ಭಾರತದ ಹಿತದೃಷ್ಟಿಯಿಂದ ಮಾತ್ರವಲ್ಲ, ಇಡೀ ವಿಶ್ವದ ಶಾಂತಿಗಾಗಿ ಇದು ಅನಿವಾರ್ಯ. ಆಪರೇಷನ್ ಸಿಂಧೂರ್ ‘ನಮ್ಮ ಗಡಿಗಳು ಸುರಕ್ಷಿತವಾಗಿವೆ’ ಎಂಬ ಭರವಸೆಯನ್ನು ಪ್ರತಿ ಭಾರತೀಯನಿಗೆ ನೀಡಿದೆ.
ನಮ್ಮ ಸಶಸ್ತ್ರ ಪಡೆಗಳ ಸಾಹಸ, ಯಶಸ್ಸು, ನಮ್ಮ ಯುವಜನತೆಗೆ ಪ್ರೇರಣೆಯಾಗಿದೆ. ಆಪರೇಷನ್ ಸಿಂಧೂರ್ನ ಗೆಲುವು ದೇಶಸೇವೆ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಸದಾ ಎತ್ತಿ ಹಿಡಿಯುವ ಜಾಗೃತಿ ಮೂಡಿಸಿದೆ, ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ! ಎಂದು BYR ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

