ಶಿವಮೊಗ್ಗ | ಎ.ಟಿ.ಎನ್.ಸಿ.ಸಿ ಹಿರಿಯ ವಿದ್ಯಾರ್ಥಿ ಬಳಗದ ವಾರ್ಷಿಕ ಸಮ್ಮೇಳನ, ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಶಿವಮೊಗ್ಗ

ಶಿವಮೊಗ್ಗ,ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗದ ಎ.ಟಿ.ಎನ್.ಸಿ.ಸಿ ಹಿರಿಯ ವಿದ್ಯಾರ್ಥಿ ಬಳಗದ ವಾರ್ಷಿಕ ಸಮ್ಮೇಳನ, ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ.ಎಸ್. ಅರುಣ್ ಅವರು ಭಾಗವಹಿಸಿ, ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು, ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ಮೌಲ್ಯಗಳ ಮಹತ್ವವನ್ನು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ, ವ್ಯಾಸಭಾರತಿ ಪ್ರಯೋಗ ವಿಶ್ವವಿದ್ಯಾಲಯ ಅಮೇರಿಕಾದ ಕುಲಪತಿಗಳಾದ ಡಾ. ಕೆ. ರಾಘವೇಂದ್ರ ಪೈ, ಇಂಡಿಯನ್ ಆರ್ಮಿಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದಿವಾಕರ್ ನಾಯ್ಡು, ಖ್ಯಾತ ಉದ್ಯಮಿಗಳಾದ ಕಿಮ್ಮನೆ ಜೈರಾಮ್, ಉದ್ಯಮಿ ಎಸ್.ಎಂ. ಬಾಲಕೃಷ್ಣ, ಎಸ್ ಪಿ ದಿನೇಶ್, ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷರಾದ ಎಸ್.ಎಸ್. ವಾಗೇಶ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Author