ಶಿವಮೊಗ್ಗ, ನಿನ್ನೆ ದಿವಸ ಸಂಜೆಯ ವೇಳೆಗೆ ಚಲನಚಿತ್ರ ನಿರ್ದೇಶಕ ಸಂಗೀತ್ ಸಾಗರ್ ಹೃದಯಾಘಾತದಿಂದ ಸಾವನ್ನಪ್ಪಿದ್ದ ಸುದ್ದಿ ಕಾಡಗಿಚ್ಚಿನಂತೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಆದರೆ ಬೆಳಿಗ್ಗೆ 10 ಗಂಟೆ ಕಳೆದರು ಸಹ ಕುಟುಂಬ ನಿರ್ದೇಶಕರ ಶವ ಪಡೆಯುವಲ್ಲಿ ಆಸ್ಪತ್ರೆಗೆ ಹಣ ಪವತಿಸಲು ಆಗದೆ ಹಾಗೂ ಚಿತ್ರತಂಡ ಅಸಹಾಯಕ ಪರಿಸ್ಥಿತಿಯಲ್ಲಿ ಆಕಾಶದ ಮೇಲೆ ನೋಡುತ್ತಾ ಕೂತಿದ್ದರು.
ಇಂತಹ ಅಸಹಾಯಕ ಪರಿಸ್ಥಿತಿ ಅರಿತು ವಾಸ್ತವ ಸಂಗತಿ ಕುರಿತಾಗಿ ಸುವರ್ಣ ನ್ಯೂಸ್ ನ ಶಿವಮೊಗ್ಗ ಜಿಲ್ಲಾ ವಾರದಿಗಾರರಾದ ರಾಜೇಶ್ ಕಾಮತ್ ಅವರು ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಆಸ್ಪತ್ರೆಯಲ್ಲಿ ಉಳಿದ ನಿರ್ದೇಶಕರ ಶವ ಎಂದು ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿದ್ದರು.
ನಂತರ ಹಣ ಕಟ್ಟಲು ಸಾಧ್ಯವಾಗದ ಕುಟುಂಬಸ್ಥರ ಮತ್ತು ಚಿತ್ರತಂಡದವರ ಪರಿಸ್ಥಿತಿ ಮನಗಂಡು ಆಸ್ಪತ್ರೆಯ ಬಿಲ್ ಕಟ್ಟಲು ನಡೆಸಿದ ಅವಿರತ ಪ್ರಯತ್ನದಿಂದ ಮೃತ ದೇಹ ಆಸ್ಪತ್ರೆಯಿಂದ ಪಡೆಯುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ.
ನಿನ್ನೆ ದಿವಸ ಮ್ಯಾಕ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಕರೆದುಕೊಂಡು ಬಂದಾಗ ಮಾತಾಡುತ್ತ ಇದ್ದರು ಈ ವೇಳೆ ಚಿತ್ರ ತಂಡ ಹೇಗಾದರೂ ಮಾಡಿ ಜೀವ ಉಳಿಸಿ ಎಂದು ಆಸ್ಪತ್ರೆ ವೈದ್ಯರ ಬಳಿ ಅಂಗಲಾಚಿದರು ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಅವರು ಸಹ ಮಾನವೀಯತೆ ಹಾಗೂ ಜೀವ ಉಳಿಸುವ ಪ್ರಯತ್ನಕ್ಕೆ ಮುಂದಾದರು ಆದರೆ ವಿಧಿ ಆಟವೇ ಬೇರೆ ಆಗಿತ್ತೇನೋ ನಿರ್ದೇಶಕರು ಕೊನೆ ಉಸಿರು ಎಳಿದರು ಇಷ್ಟೆಲ್ಲಾ ಅದಮೇಲೂ ಸಹ ಆಸ್ಪತ್ರೆ ಅವರಿಗೆ ಮಹಿಮಾ ಪಟೇಲ್ ಹಾಗೂ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಹಾಗೂ ಅನೇಕರು ಕರೆ ಮಾಡಿ ಆಸ್ಪತ್ರೆಯ ಮುಖ್ಯಸ್ಥ ಡಾ ನಾಗೇಂದ್ರ ಅವರಿಗೆ ಬಿಲ್ ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡ ಬೆನ್ನಲ್ಲೆ ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅವರು 2 ಲಕ್ಷ 50 ಸಾವಿರ ರೂಪಾಯಿ ಬಿಲ್ ನಲ್ಲಿ 1 ಲಕ್ಷ ರೂಪಾಯಿ ಕಡಿಮೆ ಕೂಡ ಮಾಡಿ ಒಂದುವರೆ ಲಕ್ಷ ಪಾವತಿಸುವಂತೆ ತಿಳಿಸಿದರು.ಇಷ್ಟೆಲ್ಲಾ ಆದಮೇಲೆ ಸಹ ಚಿತ್ರತಂಡ ಬಳಿ ಕೇವಲ 50,000₹ ಮಾತ್ರ ಹಣ ಹೊಂದಿಸಲು ಮಾತ್ರ ಸಾಧ್ಯವಾಯಿತು.
ಈ ವೇಳೆಯಲ್ಲಿ ಕನ್ನಡ ಚಿತ್ರರಂಗ ಬಳಿ ಅಂಗಲಾಚಿದರು ಯಾವ ನೆರವು ದೊರಕಿಲ್ಲ ಎಂಬುದು ವಾಸ್ತವ ಸಂಗತಿ . ಚಿತ್ರ ರಂಗದ ಹುಳುಕು ಒಬ್ಬ ನಿರ್ದೇಶಕನ ಸಾವಿನಲ್ಲಿ ಬಟಾಬಯಲಾಯಿತು.
ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ವರದಿಗಾರರಾದ ರಾಜೇಶ್ ಕಾಮತ್ ಅವರು ದೇವರಾಗಿ ಬಂದು ನಿಂತು ಕುಟುಂಬ ಬಳಿ ಹಣವಿಲ್ಲ ಚಿತ್ರತಂಡ ಬಳಿ ಹಣವಿರಲಿಲ್ಲ ಈ ಸಂದರ್ಭದಲ್ಲಿ ಅನೇಕರಿಗೆ ಕರೆ ಮಾಡಿ ಸಹಾಯ ಮಾಡುವಂತೆ ತಿಳಿಸಿದರು.
ಈ ಮಧ್ಯೆ ನಿರ್ದೇಶಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ನೆರವು ನೀಡುವ ಭರವಸೆ ನೀಡಿದರಾದರು ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪಾತ್ರಧಾರಿ ಸಿನಿಮಾ ನಿರ್ಮಾಪಕ ಡೇವಿಡ್ 40,000₹ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ 30,000₹ , ವಿಜಯ ಸೂರ್ಯ 10,000₹, ರವಿ ಶೆಟ್ಟಿ 10,000₹ ಹೀಗೆ ಅನೇಕರು ಮುಂದೆ ಬಂದು ಆಸ್ಪತ್ರೆಗೆ ಕಟ್ಟ ಬೇಕಾಗಿದ್ದ ಹಣವನ್ನು ನೀಡಲು ಮುಂದಾದರು.
ಚಿತ್ರತಂಡದ ಕೃಷ್ಣನೀಲಿ ಮತ್ತು ಕ್ಯಾಟರಿಂಗ್ ವ್ಯವಸ್ಥೆ ಮಾಡುತ್ತಿದ್ದ ಕೊಪ್ಪದ ಮಮತಾ ಶ್ರೀನಿವಾಸ್ ಕೂಡ ಸುವರ್ಣ ನ್ಯೂಸ್ ವರದಿಗಾರರ ಅವಿರತ ಶ್ರಮಕ್ಕೆ ಬೆಂಬಲವಾಗಿ ನಿಂತರು.
ಈ ವೇಳೆಯಲ್ಲಿ ಬೇರೆ ಮಾಧ್ಯಮಗಳು ಸುದ್ದಿ ಮಾಡಲು ಮಾತ್ರ ಮುಂಚೂಣಿಯಲ್ಲಿದ್ದರು ಹೊರತು ಮೃತ ನಿರ್ದೇಶಕರ ಶವ ತೆಗೆದುಕೊಂಡು ಹೋಗಲು ಏನು ಮಾಡಬೇಕು ಎಂದು ತೋಚದೆ ದಿಗ್ಮೂಡರಾಗಿ ಸುದ್ದಿ ಪ್ರಸಾರದಲ್ಲಿ ನಿರತರಾಗಿದ್ದರು.
ಕೊನೆಗೂ ಸುವರ್ಣ ನ್ಯೂಸ್ ನ ರಾಜೇಶ್ ಕಾಮತ್ ಅವರ ಪ್ರಯತ್ನ ಫಲ ನೀಡಿತು ಆಸ್ಪತ್ರೆಯವರಿಗೆ ಬಾಕಿ ಉಳಿದ ಹಣ ಕಟ್ಟಿ ಆಸ್ಪತ್ರೆಯ ಶವಗಾರದಲ್ಲಿದ್ದ ನಿರ್ದೇಶಕರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಕುಟುಂಬಸ್ಥರು ಮೃತ ದೇಹವನ್ನು ಹಾಸನದ ಸಕಲೇಶಪುರಕ್ಕೆ ತೆಗೆದುಕೊಂಡು ಹೋಗಿ ಇಂದು ಸಂಜೆ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.
ಸುವರ್ಣ ನ್ಯೂಸ್ ನ ವರದಿಗಾರರಾದ ರಾಜೇಶ್ ಕಾಮತ್ ಅವರ ಈ ಮಾನವೀಯ ಗುಣಕ್ಕೆ ಮಾಧ್ಯಮ ಮಿತ್ರರಾಗಿ ನಾವೆಲ್ಲರೂ Hatsoff ತಿಳಿಸಲೇಬೇಕು.



