ಶಿವಮೊಗ್ಗ | ಪೊಲೀಸರು, ತಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು : ಎಸ್ ಪಿ ಮನವಿ

ಶಿವಮೊಗ್ಗ

ಶಿವಮೊಗ್ಗ,ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು, ತಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು. 53 ರ ವಯಸ್ಸಿನ ನಂತರ ಪೊಲೀಸರಿಗೆ ನಿರಂತರ ಆರೋಗ್ಯ ತಪಾಸಣೆ ಅಗತ್ಯವಾಗಿದ್ದು, ಕಿಡ್ನಿ ಎಂಬುದು ನಮ್ಮ ದೇಹ ಎಂಬ ಕಾರ್ಖಾನೆಯಲ್ಲಿ ಪ್ರಮುಖ ಅಂಗವಾಗಿದ್ದು, ನಮ್ಮ ದೇಹದಲ್ಲಿ ಕಿಡ್ನಿಗೆ ಹೆಚ್ಚು ಕೆಲಸವಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ. ಹೇಳಿದರು.

ಅವರು “ತೃಪ್ತಿ ಹೆಲ್ತ್ ಕೇರ್ ಆಸ್ಪತ್ರೆ” ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಯೋಗದಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 53 ವಯಸ್ಸಿನಿಂದ ಎಎಸ್‌ಐ, ಎಆರ್‌ಎಸ್‌ಐ ರವರುಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಾಗಾರದಲ್ಲಿ ಉಚಿತ ಆರೋಗ್ಯ ತಪಾಸಣೆ, ನಿವೃತ್ತಿ ನಂತರ ಜೀವನ ಶೈಲಿ, ಯೋಗ, ಆರೋಗ್ಯಕರ ಆಹಾರ ಸದುಪಯೋಗ, ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಚರ್ಚಾ ಪದ್ಧತಿ, ಪಿಂಚಣಿ ಮೊತ್ತ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ಎ.ಜಿ. ರಕ್ಷಣಾಧಿ ಕಾರಿ ಕಾರಿಯಪ್ಪ, ಡಿ.ವೈ.ಎಸ್.ಪಿ. ಬಾಬು ಅಂಜನಪ್ಪ, ಜಿಲ್ಲಾ ಪೊಲೀಸ್ ಇಲಾಖೆಯ ಆಪ್ತ ಸಮಾಲೋಚಕರಾದ ವಿ.ಪಿ. ಮಲ್ಲಪ್ಪ, ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಹೆಚ್.ಸಿ. ಕೃಷ್ಣಮೂರ್ತಿ, ಸರ್ಜಿ ಆಸ್ಪತ್ರೆಯ ಡಯಟಿಷಿಯನ್ ಶ್ರೇಯಸ್, ರಾಘವೇಂದ್ರ ಯೋಗ ಕೇಂದ್ರದ ಸಂಸ್ಥಾಪಕರು, ಯೋಗ ತಜ್ಞರು ಯೋಗ ಸಾಮ್ರಾ ಎಸ್.ಗೋಪಾಲಕೃಷ್ಣ, ಹೆಚ್ಚುವರಿ ಎಸ್.ಪಿ. ಆಪ್ತಸಹಾಯಕರು ಹಾಗೂ ಕಾರ್ಯಕ್ರಮದ ನಿರೂಪಕಿಯಾದ ಅನಿತಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಸಕಾರ್ಯಕ್ರಮದಲ್ಲಿ ಮೂತ್ರಕೋಶ ತಜ್ಞ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.

Author