ಕಾರವಾರ, ಭುವನೇಶ್ವರದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕಐಐಟಿ) ಕ್ಯಾಂಪಸ್ನಲ್ಲಿ ನಡೆದ `ಫೆಮಿನಾ ಮಿಸ್ ಇಂಡಿಯಾ2026′ ಸ್ಪರ್ಧೆಯಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಅವರ ಹಿರಿಯ ಪುತ್ರಿ ಸಾಧಿ ಸೈಲ್ ವಿಜೇತೆಯಾಗಿದ್ದಾರೆ.
ಶನಿವಾರ ರಾತ್ರಿ ಸತೀಶ ಸೈಲ್ ಅವರಿಗೆ ವಿಡಿಯೊ ಕರೆ ಮಾಡಿದ ಸಾದ್ವಿ ತನ್ನ ಗೆಲುವಿನ ಸಂಭ್ರಮ ಹಂಚಿಕೊಂಡರು. ಗೆಲುವಿನ ಕಿರೀಟ ತೋರಿಸುತ್ತಿದ್ದಂತೆ ಮಗಳ ಸಾಧನೆ ಕಂಡು ಸೈಲ್ ಭಾವುಕರಾದರು.
ಶಾಸಕ ಸತೀಶ ಸೈಲ್ ಅವರ ಪುತ್ರಿ ಸಾದ್ರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಕಾರವಾರದವರೇ ಆಗಿದ್ದರೂ ಗೋವಾದಲ್ಲಿ ಜನಿಸಿದ್ದರಿಂದ ಜನ್ಮದಾಖಲೆಗಳಲ್ಲಿ ಗೋವಾ ವಿಳಾಸಇತ್ತು.

ಈ ಕಾರಣಕ್ಕೆ ಗೋವಾದಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗೆ ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು ಎಂಬುದಾಗಿ ಶಾಸಕ ಸತೀಶ ಸೈಲ್ ಆಪ್ತರು ಹೇಳಿದ್ದಾರೆ.
‘ಪುತ್ರಿ ಸಾದ್ವಿ ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಂದ ಪ್ರೇರಣೆಗೊಂಡು ಅರ್ಥಶಾಸ್ತ್ರ ವಿಷಯ ಅಧ್ಯಯನ ಮಾಡಿದ್ದಾರೆ. ಆಕೆ ಕೆನಡಾದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿದ್ದ ವೇಳೆ ಕೋವಿಡ್ ಎದುರಾಗಿತ್ತು. ಸವಾಲುಗಳ ನಡುವೆಯೂ ವ್ಯಾಸಂಗ ಪೂರ್ಣಗೊಳಿಸಿದ್ದಾಳೆ.
ತನ್ನ ಆಸಕ್ತಿಯ ಮಾಡೆಲಿಂಗ್ ಕ್ಷೇತ್ರಕ್ಕೆ ಹೋದಾಗ ನಾನು ಸಮ್ಮಿತಿಸಿರಲಿಲ್ಲ. ಆ ಕ್ಷೇತ್ರಕ್ಕೆ ಆಕೆ ಕಾಲಿಡುವುದು ಆರಂಭದಲ್ಲಿ ನನಗೆ ಇಷ್ಟವಿರಲಿಲ್ಲ. ಆದರೆ, ಆಕೆಯ ಆಸಕ್ತಿಗೆ ಪ್ರೋತ್ಸಾಹ ನೀಡಲಾರಂಭಿಸಿದೆ. ಅವಳ ಸಾಧನೆ ಹೆಮ್ಮೆ ತಂದಿದೆ’ ಎಂದು ಸತೀಶ ಸೈಲ್ ಪ್ರತಿಕ್ರಿಯಿಸಿದ್ದಾರೆ.
ಬಳಿಕ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಸೇರಿ 7ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಕಾರವಾರದಲ್ಲಿ ಪೂರ್ಣಗೊಳಿಸಿರುವ ಸಾಧಿ ಕಾಲೇಜು ಶಿಕ್ಷಣವನ್ನು ಭಾಷೆಗಳಲ್ಲಿ ನಿರರ್ಗಳವಾಗಿ ಅವರು ಮಾತನಾಡಬಲ್ಲರು.
ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜತೆಗೆ ಬೆಂಗಳೂರಿನಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮವನ್ನೂಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಸಾಧಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೆರವಾಗಲು`ಕಿಟ್ಸ್’ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ಮಕ್ಕಳ ಆರೋಗ್ಯ ಕಾಳಜಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ನೆರವಾಗುತ್ತಿದ್ದಾರೆ.


