ಶಿವಮೊಗ್ಗ,ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ನಿರಾಶ್ರಿತರ ಕೇಂದ್ರದಲ್ಲಿ ಸಾಂತ್ವನ ಹಾಗೂ ಮನೋರಂಜನಾ ಕಾರ್ಯಕ್ರಮ ಕಾರ್ಯಕ್ರಮವನ್ನು ಕಲಗೋಡು ರತ್ನಾಕರ್ ಹಾಗೂ ರತ್ನಾಕುಮಾರಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ನಂತರ ಸಮಿತಿಯ ಅಧ್ಯಕ್ಷರಾದ ಕಲಾವಿದ, ಕಲಗೋಡ ರತ್ನಾಕರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶ್ರೀ ನಾರಾಯಣ ಗುರು ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರತ್ನಾಕರ್ ಅವರು ನಿರಾಶ್ರಿತರ ಕೇಂದ್ರದ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಎನ್.ಡಿ. ಸತೀಶ್ ಅವರು ನಿರಾಶ್ರಿತರಿಗೆ ಸಾಂತ್ವನದ ಮಾತುಗಳ ಮೂಲಕ ಧೈರ್ಯ ತುಂಬಿದರು. ಪರಿಸರ ಕಾರ್ಯಕರ್ತ ತ್ಯಾಗರಾಜ್ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕಿರು ಪರಿಚಯ ನೀಡಿದರು.

ಭದ್ರಾವತಿ ವಾಸು ಮತ್ತು ತಂಡದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಿಗೆ ಶ್ರೀ ನಾರಾಯಣ ಗುರು ಅವರ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ನಿರಾಶ್ರಿತರಿಗೆ ಹಣ್ಣುಗಳನ್ನು ಹಂಚಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರು ಗಾಯನ ಮಾಡುವ ಮೂಲಕ ನಿರಾಶ್ರಿತರಿಗೆ ಮನೋರಂಜನೆ ನೀಡಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಗೌರವಧ್ಯಕ್ಷರು ಭದ್ರಾವತಿ ವಾಸುದೇವನ್, ಉಪಾಧ್ಯಕ್ಷರು ಶಿವಾನಂದ,ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್,ಖಜಾಂಚಿ ಪ್ರಕಾಶ ಎ,ಸಂಘಟನಾ ಕಾರ್ಯದರ್ಶಿ ಕನಕರಾಜು, ಸಹ ಕಾರ್ಯದರ್ಶಿ ಕುಮಾರ್, ಸುಬ್ರಮಣ್ಯ,ನಿರ್ದೇಶಕರುಗಳಾದ ತಂಗಪ್ಪನ್,ಅನಿಲ್, ಮುರುಳಿಧರನ್,ಕೆ. ರಾಘವೇಂದ್ರ ಪರಿಸರ ರಮೇಶ್ ಸೇರಿದಂತೆ ಎಲ್ಲಾ ಸದಸ್ಯರ ಸಹಕಾರ ಪ್ರಮುಖವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ


