ಸಂಸದ ಬಿ ವೈ ರಾಘವೇಂದ್ರ ಬಿಜೆಪಿ ಮೇಲೆ ಮುನಿಸಿ ಕೊಂಡರಾ…. ? ಹೌದು ಈ ರೀತಿಯ ಪ್ರಶ್ನೆ ಈಗ ರಾಜ್ಯ ಬಿಜೆಪಿ ಪಕ್ಷದ ವಲಯದೊಳಗೆ ಕೇಳಿ ಬರುತ್ತಿದೆ,
ಅದಕ್ಕೆ ಕಾರಣವಾದರೂ ಏನು ಅಂತೀರಾ?
ಕೇರಳಂ ಚುನಾವಣೆಗೆ ಸಂಸದರು ಪ್ರಚಾರಕ್ಕೆ ತೆರಳದೆ ಇರುವುದು, ಪಕ್ಷದ ಕೇಂದ್ರದ ವರಿಷ್ಟರು ಸೂಚಿಸಿದರೂ ಸಹ ಕೇರಳಂ ಚುನಾವಣೆ ಪ್ರಚಾರದಿಂದ ಸಂಸದರು ಹಿಂದೆ ಸರಿದಿದ್ದಾರೆ.

ಇದೆ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿರುವ ಕೇರಳಂ ಸಮಾಜದ ಮಲೆಯಾಳಿ ಬಾಂಧವರು ಬಿ. ವೈ. ರಾಘವೇಂದ್ರ ಅವರಿಗೆ ಬೆಂಬಲಿಸಿ ಪ್ರಚಾರ ನಡೆಸಿದ್ದರು. ಆದರೆ ಪ್ರಸ್ತುತ ಸಂಸದರು ಕೇರಳಂ ಚುನಾವಣೆ ಪ್ರಚಾರಕ್ಕೆ ತೆರಳದೆ ದೂರವೇ ಉಳಿದಿದ್ದಾರೆ.
ಸ್ವತಹ ಪ್ರಧಾನಿ ನರೇಂದ್ರ ಮೋದಿಯವರು ಕೇರಳಂ ರಾಜಧಾನಿ ತ್ರಿವೇಂಡ್ರಂ ನಲ್ಲಿ ರೋಡ್ ಶೋ ನಡೆಸಿ ಈ ಬಾರಿ ಎಲ್ ಡಿ ಎಫ್ ಮತ್ತು ಯುಡಿಎಫ್ ಹೊರತುಪಡಿಸಿ ಎನ್ಡಿಎ ಗೆ ಕೇರಳಂ ಜನತೆ ಅಧಿಕಾರ ಕೊಡಿ ಎಂದು ವಿಶ್ವಾಸದ ಭಾಷಣ ಮಾಡಿದ್ದಾರೆ.

ಆದರೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಬೇಕು ಎಂಬ ಹುಮ್ಮಸ್ಸು ತೋರಿಸುವ ಸಂಸದ ಬಿ ವೈ ರಾಘವೇಂದ್ರ ಮಾತ್ರ ಕೇರಳಂ ಚುನಾವಣೆಯಲ್ಲಿ ತಮಗೆ ನೀಡಿದ ಸದಾವಕಾಶವನ್ನು ಬಳಸಿಕೊಳ್ಳಲು ಮುಂದಾಗುತ್ತಿಲ್ಲ .
ಅಲ್ಲದೆ ತಮ್ಮ ಕ್ಷೇತ್ರದಲ್ಲಿರುವ ಕೇರಳಂ ಸಮಾಜದ ಬಿಜೆಪಿ ಬೆಂಬಲಿತ ಪ್ರಮುಖರ ನಿಯೋಗವನ್ನು ಕಳುಹಿಸಿ ತಮ್ಮ ಬೆಂಬಲ ನೀಡಬಹುದಾಗಿತ್ತಾದರೂ ಅದನ್ನು ಮಾಡಲಿಲ್ಲ.

ಉಪಚುನಾವಣೆಗಳತ್ತ ಕೂಡ ಮುಖ ಮಾಡದ ಬಿ ವೈ ಆರ್..!!?
ಇನ್ನು ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಆದರೂ ಬೆಂಬಲ ನೀಡಿದರೇ ಎಂದರೆ ಅದು ಇಲ್ಲ, ಇಳಿ ವಯಸ್ಸಿನಲ್ಲಿ ಸ್ವತಃ ತಮ್ಮ ತಂದೆಯವರಾದ ಯೆಡ್ಯೂರಪ್ಪನವರೇ ಪ್ರಚಾರ ಮಾಡುತ್ತಿದ್ದಾರೆ, ಲಿಂಗಾಯತ ಸಮುದಾಯದ ಮತ ಕ್ರೂಡಿಕರಿಸಲು ಮುಂದಾಗಿದ್ದಾರೆ. ಹಾಗೂ ತಮ್ಮ ಸಹೋದರರಾದ ವಿಜಯೇಂದ್ರ ಅವರು ಈ ಉಪಚುನಾವಣೆ ಗೆಲ್ಲುವ ಮೂಲಕವೇ ರಾಜ್ಯ ರಾಜಕಾರಣದ ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ಲಸ್ ಪಾಯಿಂಟ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ಆದರೆ ಸ್ವತಃ ಶಿವಮೊಗ್ಗ ಸಂಸದ ರಾಘವೇಂದ್ರ ಅವರ ಮೌನದ ನಡೆ ಪಕ್ಷದ ಮೇಲೆ ಮುನಿಸು ಬಂದಿದೆಯಾ ಎಂಬ ಗುಸು ಗುಸು ಪಿಸು ಪಿಸು ಮಾತು ಕೇಳಲಾರಾಂಭಿಸಿದೆ.
ಬಾಗಲಕೋಟೆ ಆಗದಿದ್ದರು ದಾವಣಗೆರೆಗೆ ಆದರೂ ಹೋಗಬಹುದಿತ್ತು!
ಹೌದು ಶಿವಮೊಗ್ಗದಿಂದ ಕೇವಲ ಒಂದೂವರೆ ತಾಸಿನಲ್ಲಿ ದಾವಣಗೆರೆ ತಲುಪ ಬಹುದಾಗಿದೆ ಅದನ್ನು ಮಾಡಲಿಲ್ಲ ತುಂಬಾ ದೂರ ಕೂಡ ಇರಲಿಲ್ಲ ಹಾಗೆ ನೋಡಿದರೆ ಎಂ ಎಲ್ ಸಿ ಅರುಣ್ ಡಿ ಎಸ್ ಅವರು ನಾಲ್ಕು ದಿನದ ಶೆಟ್ಟರ ಸಂತೆ ಕಾರ್ಯಕ್ರಮ ಮುಗಿಸಿ ಕೊಂಡು ತಕ್ಷಣ ಕೇರಳಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದಾರೆ. ಜೊತೆಗೆ ದಾವಣಗೆರೆ ಕ್ಷೇತ್ರದಲ್ಲೂ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂಬುವುದು ಮಹತ್ವ ಪಡೆದುಕೊಳ್ಳುತ್ತದೆ.

ಶಾಮನೂರು ಋಣ ತೀರಿಸಲು ಮುಂದಾದರೇ ಬಿ. ವೈ. ಆರ್ …!!?
ಇಲ್ಲಿ ಬಹು ಮುಖ್ಯವಾಗಿ ಮತ್ತೊಂದು ಪ್ರಶ್ನೆ ಈಗ ಎಲ್ಲರಲ್ಲಿ ಕಾಡ ತೊಡಗಿದೆ ಬಿಜೆಪಿ ವಲಯದಲ್ಲಿ ಸಂಸದ ರಾಘವೇಂದ್ರ ಅವರು ಶಾಮನೂರು ಶಿವಶಂಕರಪ್ಪ ಅವರ ಋಣ ತೀರಿಸಲು ಮುಂದಾದರೇ ಎಂದು ಕಾಂಗ್ರೆಸ್ ಬಿಜೆಪಿ ವಲಯದ ಮಾತಾಗಿದೆ ಯಾಕಂದ್ರೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗದ ಬೆಕ್ಕಿನ ಕಲ್ಮಠಕ್ಕೆ ಆಗಮಿಸಿದ್ದ ಶಾಮನೂರು ಶಿವಶಂಕರಪ್ಪ ಅವರು ಸಂಸದ ರಾಘವೇಂದ್ರ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದರು.

ಈ ಒಂದು ಋಣ ತೀರಿಸುವ ಸಲುವಾಗಿ ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ನಿಂತ ಕಾರಣ ಪ್ರಚಾರಕ್ಕೆ ತೆರಳದೆ ಮೌನವಾಗಿ ಉಳಿದರೆ ಎಂಬು ಪ್ರಶ್ನೆ ಬಿಜೆಪಿ ಪಾಳಯದ್ದಾಗಿದೆ.
ವೀರಣ್ಣ ಚರಂತಿ ಮಠ ಪರ ಪ್ರಚಾರಕ್ಕೆ ಇಳಿಯದ ಬಿ ವೈ ಆರ್..!?
ಇನ್ನು ಬಾಗಲಕೋಟೆಯಲ್ಲೂ ಸಹ ಲಿಂಗಾಯತ ಪ್ರಾಬಲ್ಯವಿದೆ ಸಂಸದರು ಅಲ್ಲಿಗೂ ಸಹ ಪಕ್ಷದ ಪರವಾಗಿ ಪ್ರಚಾರ ಮಾಡಲಿಲ್ಲ, ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಕುಟುಂಬದ ಸಂಬಂಧಗಳನ್ನು ಬೆಸೆದುಕೊಂಡಿರುವ ಬಿಎಸ್ ವೈ ಕುಟುಂಬಸ್ಥರ ಸಾಕಷ್ಟು ಪ್ರಭಾವವನ್ನು ಕೂಡ ಹೊಂದಿದ್ದಾರೆ.
ಇದರ ಸದ್ಬಳಕೆ ಮಾಡಿಕೊಂಡು ಪ್ರಚಾರಕ್ಕೂ ಮುಂದಾಗಿಲ್ಲ. ಇನ್ನು ಬಿಜೆಪಿಯಿಂದ ಉಚ್ಚಾಟಿತ ಬಸವನಗೌಡ ಪಾಟೀಲ್ ಉಚ್ಛಾಟನೆಯ ಕಹಿ ನೆನಪು ಮರೆತು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಪಂಚಮಶಾಲಿ ಮತಗಳನ್ನು ಬಿಜೆಪಿ ಪರ ಒಗ್ಗೂಡಿಸಿದ್ದಾರೆ.
ಆದರೆ ಸಂಸದ ಬಿ ವೈ ಆರ್ ಕೂಡ ಪ್ರಚಾರ ಕೇಳಿದ್ದು ಬಿಜೆಪಿಗೆ ಮತ್ತಷ್ಟು ಗಟ್ಟಿತನ ಬರುವಂತೆ ಮಾಡಬಹುದಾಗಿತ್ತು.
ಕೇಂದ್ರದಲ್ಲಿ ಮಂತ್ರಿ ಸ್ಥಾನದ ಮೇಲೆ ಟವಲ್…!?
ಕೇಂದ್ರದಲ್ಲಿ ಸಚಿವ ಸ್ಥಾನದ ಮೇಲೆ ಟವೆಲ್ ಹಾಕಿ ಕೂತಿರುವ ಸಂಸದರು ಏನಾದರು ಸೋಮಣ್ಣ ಅವರ ರೈಲ್ವೆ ಖಾತೆ ತೆರವಾದಲ್ಲಿ ನನಗೆ ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಆದರೆ ಚುನಾವಣೆಯಂತಹ ಸಂದರ್ಭದಲ್ಲಿ ಪಕ್ಷದ ಪರವಾಗಿ ಎಲ್ಲಿಯೂ ಪ್ರಚಾರ ತೆರಳದೆ ಮುಂದೆ ಸಚಿವರಾವುದು ಮೇಲೆ ಹೇಗೆ? ಎಂಬುದು ಸದ್ಯಕ್ಕೆ ರಾಜಕೀಯ ವಲಯದಲ್ಲಿ ಕೇಳಿ ಬಂದ ತಕ್ಷಣದ ಪ್ರಶ್ನೆಯಾಗಿದೆ?
ಇಷ್ಟೆಲ್ಲಾ ಕಥೆ ವ್ಯಥೆ ನಾವು ಹೇಳುತ್ತಿಲ್ಲ ಸ್ವತಃ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಗುಸು ಗುಸು ಪಿಸು ಪಿಸು ಮಾತುಗಳಾಗಿದೆ.ಹೀಗಾಗಿ ಸಂಸದರಿಗೆ ಪಕ್ಷದ ಮೇಲೆ ಮುನಿಸು ಬಂದಿತೇ ಎಂಬುದು ಪ್ರಸ್ತುತ ರಾಜಕೀಯ ವಲಯದಲ್ಲಿರುವ ಪ್ರಶ್ನೆಯಾಗಿದೆ.

ನಾಮಕಾವಸ್ಥೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಮಾಧ್ಯಮ ಪ್ರಮುಖರು..!!?
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಅವರು ನಮ್ಮ ಮಾಧ್ಯಮದೊಂದಿಗೆ ಮಾತನಾಡಿ ಯಾವ ಸಂಸದರು ಕೇರಳಂ ಚುನಾವಣೆಗೆ ಹೋಗಿಲ್ಲ ಅಂತಾರೆ ಹಾಗೂ ಎಂ ಎಲ್ ಸಿ, ಡಿ. ಎಸ್. ಅರುಣ್ ಅವರು ಪಕ್ಷದ ಜವಾಬ್ದಾರಿ ಪ್ರಕಾರ ಕೇರಳ ಚುನಾವಣೆ ಪ್ರಚಾರದಲ್ಲಿದ್ದಾರೆ ಅಂತಾರೆ.
ಸಂಸದರಿಗೆಲ್ಲದ ಉಸಾಬರಿ ಎಂಎಲ್ಸಿಗೆ ಯಾಕೆ ಎನ್ನುವ ಪ್ರಶ್ನೆ ಇದರಿಂದ ಸಹಜವಾಗಿ ಎಳುತ್ತದೆ ಅಲ್ಲವೇ?
ಇನ್ನು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೋಡಿದರೆ MLC.ಡಾ. ಧನಂಜಯ್ ಸರ್ಜಿ ಹಾಗೂ MLC, ಡಿ. ಎಸ್ ಅರುಣ್ ಅವರು ದಾವಣಗೆರೆ ಚುನಾವಣೆ ಪ್ರಚಾರದಲ್ಲಿದ್ದಾರೆ ಅಂತಾರೆ.

ಡಿ.ಎಸ್. ಅರುಣ್ ಕೆರಳಂ ಪ್ರಚಾರದಲ್ಲಿರುವುದು ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ಇಲ್ಲದಾಗಿದೆ ಎಂಬುದು ವಿಪರ್ಯಾಸವಾಗಿದೆ.
ಕೊನೆಯದಾಗಿ ಶಿವಮೊಗ್ಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ಸಂಸದ ರಾಘವೇಂದ್ರ ಅವರಿಗೆ ಬಿಜೆಪಿ ಪಕ್ಷದ ಮೇಲೆ ಮುನಿಸು ಬರುವಂತೆ ಆಗಿರುವುದಾದರು ಏನು?


