ಬಾಗಲಕೋಟೆ ಬೈ ಎಲೆಕ್ಷನ್ ; ಮಿತಿ ಮೀರಿದ ರಾಜಕೀಯ ನಾಯಕರ ಮಾತು

ರಾಜಕೀಯ

ಬಾಗಲಕೋಟೆ, ಏ.9ರಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಐಹೊಳೆ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ. 85% ಹಿಂದೂಗಳಿದ್ದರೂ ಹರಿದು ಹಂಚಿ ಹೋಗಿದ್ದಾರೆ.

ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ಕವರನಲ್ಲಿ 2000 ಕೊಟ್ರೆ ಓಟ್ ಹಾಕ್ತಾರೆ ಅಂತ ತಿಳಿಕೊಂಡಿದ್ದಾರೆ ಆದ್ರೆ ಹಾಗಾಗಬಾರದು ಹಿಂದೂಗಳು ಓಟ್ ಹಾಕಿದ್ರಿಂದಲೇ ದೇಶಕ್ಕೆ ಮೋದಿಯಂತವರು ಪ್ರಧಾನಿಯಾಗಿದ್ದಾರೆ.ದೇಶ ಅಭಿವೃದ್ಧಿ ಪಥದಲ್ಲಿ ಇದೆ ಎಂದ ಪ್ರತಾಪ ಸಿಂಹ ಹೇಳಿದರು.

Author