ಬೆಂಗಳೂರು | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ “ಈದ್ ಸೌಹಾರ್ದ ಸಂದೇಶ” ಕಾರ್ಯಕ್ರಮ

ಬೆಂಗಳೂರು

ಬೆಂಗಳೂರು: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ, ಬೆಂಗಳೂರು ನಗರದ ವತಿಯಿಂದ ರಮಝಾನ್ ಹಬ್ಬದ ಅಂಗವಾಗಿ “ಈದ್ ಸೌಹಾರ್ದ ಸಂದೇಶ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜನಾಬ್ ಮುಹಮ್ಮದ್ ಕುಂಞಿ (ವ್ಯವಸ್ಥಾಪಕರು, ಶಾಂತಿ ಪ್ರಕಾಶನ, ಮಂಗಳೂರು) ರವರು ರಮಝಾನ್ ಹಬ್ಬದ ಮಹತ್ವ ಹಾಗೂ ಅದರ ಸಂದೇಶವನ್ನು ವಿವರಿಸಿದರು.

ಅದೇ ರೀತಿಯಾಗಿ ಎಲ್.ಕೆ. ಅತೀಕ್ ಸಾಬ್ ( IAS, ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷರು ,ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ), ಮುಹಮ್ಮದ್ ಮೊಹ್ಸಿನ್ (IAS, ಅಪರ ಮುಖ್ಯ ಕಾರ್ಯದರ್ಶಿ),ಸಯ್ಯದ್ ಮುಹಿವುದ್ದೀನ್ ಶಾಕಿರ್(ಕೇಂದ್ರ ಸಹಾಯಕ ಪ್ರಧಾನ ಕಾರ್ಯದರ್ಶಿ, ಜೆ ಐ ಹೆಚ್ ,ಇಂಡಿಯಾ) ರಮೇಶ್ ಬಾಬು (ವಿಧಾನ ಪರಿಷತ್ ಸದಸ್ಯರು), ರಫೀ ಪಾಷಾ (ಡಿಪ್ಯೂಟಿ ಕಮಿಷನರ್, GST ), ಸಿ.ಎಸ್. ದ್ವಾರಕಾನಾಥ್ (ಮಾಜಿ ಅಧ್ಯಕ್ಷರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ), ಬದ್ರುದ್ದೀನ್ ಮಾಣಿ (ರಾಜ್ಯ ಮಾಹಿತಿ ಆಯುಕ್ತರು), ಯುಸುಫ್ ಕನ್ನಿ (ರಾಜ್ಯ ಕಾರ್ಯದರ್ಶಿ, ಜೆಐಎಚ್), ಶಿವಸುಂದರ್ (ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು), ಡಾ. ಸಾಬಿರ್ ಮುಲ್ಲಾ (ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ)ವಿ ಎಸ್ ಸುದರ್ಶನ್ ( ಮಾಜಿ ವಿಧಾನ ಪರಿಷತ್ ಸದಸ್ಯರು) ಇವರುಗಳು ಈದ್ ಸೌಹಾರ್ದ ಸಂದೇಶವನ್ನು ಹಂಚಿಕೊಂಡರು.

ಇದರೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

Author