ಶಿವಮೊಗ್ಗ, ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್ ಎಸ್, (29) ಪೊಲೀಸರಿಗೆ ದೂರು ನೀಡಿದ್ದಾರೆ. ಗೋಪಾಳ ವೃದ್ದಾಶ್ರಮ ಎದುರು ಪೊಲೀಸ್ ಲೇ ಔಟ್ ನಲ್ಲಿ ಬೆಳಗ್ಗೆ 08:16 ಗಂಟೆಗೆ, ಖಾಸಗಿ ಹಂದಿ ಹಿಡಿಯುವವರ ಗುಂಪೊಂದು ಸಮುದಾಯದ ಬೀದಿ ನಾಯಿಯನ್ನು ಬಲೆಯಲ್ಲಿ ಹಿಡಿದು ಹೊಡೆದು ಸಾಯಿಸಿದ್ದರು.
ವಿಡಿಯೋ ವೀಕ್ಷಿಸಿ – https://www.instagram.com/reel/DRwLQopkcam/?igsh=MW5xcHlkM2d5amZpYg==
ಸಿ.ಸಿ. ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ *ಬೀದಿ ನಾಯಿಯನ್ನು ಸೆರೆಹಿಡಿದು ಕ್ರೂರವಾಗಿ ಕೊಲ್ಲುವ ದೃಶ್ಯ ಕಂಡು ಬಂದಿದೆ,
ಆದ್ದರಿಂದ ಈ ಕೃತ್ಯವೆಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಸೂರಜ್ ತುಂಗನಗರ ಪೊಲೀಸರಿಗೆ ನೀಡಿದ ಲಿಖಿತ ದೂರಿನ ಮೇರೆಗೆ ಗುನ್ನೆ ಸಂಖ್ಯೆ: 0723/2025 ಕಲಂ 11 (1) The Prevention of cruelty to Animal (PCA) Act 1960 & ಕಲಂ 325 ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳಲಾಗಿದೆ.



