ಶಿವಮೊಗ್ಗ | ಕಾರು ಡಿಕ್ಕಿ ; ವೃದ್ಧ ಸಾವು

ಶಿವಮೊಗ್ಗ

ಶಿವಮೊಗ್ಗ,ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಬಳಿ ಕಾರೊಂದು ತಾಂತ್ರಿಕ ತೊಂದರೆಗೊಳಗಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿಯಾದ ಪರಿಣಾಮ ವೃದ್ದರೊಬ್ಬರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ.

ನಿನ್ನೆ ಈ ಘಟನೆ ನಡೆದಿದ್ದು ಕಲ್ಲಜ್ಜನಾಳ್ ಗ್ರಾಮದ ನಿವಾಸಿ 60 ವರ್ಷದ ರಾಜಪ್ಪ ಸಾವನ್ನಪ್ಪಿದವರು.
ರಾಜಪ್ಪ ಹೊಳೆಹೊನ್ನೂರು ಕಡೆಯಿಂದ ಕಲ್ಲಜ್ಜನಾಳ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಚನ್ನಗಿರಿ
ಮಾರ್ಗವಾಗಿ ಶಿವಮೊಗ್ಗದ ಕಡೆಗೆ ಬಂದ ಕಾರು, ಚಾಲಕನ ಹತೋಟಿ ತಪ್ಪಿ ರಾಜಪ್ಪರಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜಪ್ಪ ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಡಿಕ್ಕಿಯಾದ ಕಾರು, ಅದೇ ಸ್ಪೀಡ್​ನಲ್ಲಿ , ಅಲ್ಲೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತೆಂಗಿನ ಮರಕ್ಕೆ ಗುದ್ದಿ ಸೈಡಿಗೆ ಉರುಳಿದೆ. ಇನ್ನೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Author