ಶಿವಮೊಗ್ಗ, ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರಿಕರಾಗಬೇಕು ಆದರೆ ಪ್ರಾಧ್ಯಪಕನೆ ಕಾಮುಕನಾದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯವೇ?
ಈ ಪ್ರಶ್ನೆ ಉದ್ಭವ ಆಗಲು ಕಾರಣ ನಗರದ ಪ್ರತಿಷ್ಠಿತ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಪಕನಿಂದ ವಿದ್ಯಾರ್ಥಿನಿ ವಾಟ್ಸಪ್ ಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ.
ಫೆ 6 ರಂದು ಮೊದಲು ಅಶ್ಲೀಲ ವಾಟ್ಸಾಪ್ ಸಂದೇಶ ಮಾಡಿದ್ದ ನಂತರ ನಿರಂತರವಾಗಿ ವಿದ್ಯಾರ್ಥಿನಿ ಗೆ ಕಿರುಕುಳ ನೀಡುತ್ತಿದ್ದ ಕೀಚಕ ಪ್ರಾಧ್ಯಪಕನ ವಿರುದ್ಧ ಬೇಸತ್ತ ವಿದ್ಯಾರ್ಥಿನಿ ಪ್ರಾಂಶುಪಾಲರಾದ ಡಾ.ಸಿರಾಜ್ ಅಹ್ಮದ್ ಗೆ ಸಾಕ್ಷಿ ಸಮೇತ ದೂರು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಗುರುವಿನ ಸ್ಥಾನದಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಬೇಕಾಗಿದ್ದ ಪ್ರಾಧ್ಯಪಕ ಡಾ.ಮುದುಕಪ್ಪ. ಜಿ ವಿದ್ಯಾರ್ಥಿನಿ ಮೇಲೆ ಕಾಮುಕ ದೃಷ್ಟಿ ಹಾಯಿಸಿದ್ದಾನೆ.

ವಿದ್ಯಾರ್ಥಿನಿಯ ಮೊಬೈಲ್ ಗೆ ಅಶ್ಲೀಲ, ಹೊಲಸು ಅಸಹ್ಯ ಕಾಮುಕತೆಯ ಮೆಸೇಜ್ ಕಳಿಸಿದ್ದಾನೆ ಇಷ್ಟೇ ಅಲ್ಲದೆ ಪ್ರಾಜೆಕ್ಟ್ ಮಾರ್ಕ್ಸ್, ಇಂಟರ್ನಲ್ ಮಾರ್ಕ್ಸ್ ಬೇಕಾದರೆ ವಿದ್ಯಾರ್ಥಿನಿ ಇವನು ಹೇಳಿದಂತೆ ಕೇಳಬೇಕಂತೆ.
ಅಂತಿಮ ವರ್ಷದ ಬಿ. ಎ. ವಿದ್ಯಾರ್ಥಿನಿಗೆ ವಾಟ್ಸಪ್ ನಲ್ಲಿ ನಿರಂತರವಾಗಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿರುವುದು ತಿಳಿದುಬಂದಿದೆ.
ಸಹ್ಯಾದ್ರಿ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಪಕ ಡಾ.ಮುದುಕಪ್ಪ. ಜಿ ಯಿಂದ ಅನುಚಿತ ವರ್ತನೆ ನಡೆದಿದೆ.ಘಟನೆ ಸಂಬಂಧ ಪ್ರಾಂಶುಪಾಲರಾದ ಡಾ.ಸಿರಾಜ್ ಅಹ್ಮದ್ ಪ್ರಕರಣದ ಗಂಭೀರತೆ ಅರಿತು ಕ್ರಮಕ್ಕೆ ಮುಂದಾಗುತ್ತೇವೆ ಅಂತ ತಿಳಿಸಿದ್ದಾರೆ ಹಾಗೂ ಕುವೆಂಪು ಯೂನಿವರ್ಸಿಟಿಗು ಸಹ ಪ್ರಾಧ್ಯಪಕ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿರುವುದು ತಿಳಿದುಬಂದಿದೆ.

ಆದರೆ ಫೆ. 6 ರಿಂದ ಇಲ್ಲಿಯವರೆಗೆ ಪ್ರಾಧ್ಯಪಕನ ಮೇಲೆ ಯಾವದೇ ಕ್ರಮ ಆಗಿಲ್ಲ ಎಂಬುದು ಈಗ ವಿಪರ್ಯಾಸವಾಗಿದೆ.
ನೊಂದ ವಿದ್ಯಾರ್ಥಿನಿಗೆ ನ್ಯಾಯ ಸಿಗತ್ತಾ ಎಂಬ ಪ್ರಶ್ನೆಯಾಗಿದೆ.ಹಾಗೂ ಎತ್ತ ಸಾಗುತ್ತಿದೆ ಸಮಾಜ ಎಂಬುದು ಪ್ರಜ್ಞಾವಂತರ ಪ್ರಶ್ನೆ?
ಶಿಕ್ಷಕರ ಪಾತ್ರ ಸಮಾಜದಲ್ಲಿ ಅರ್ಥಪೂರ್ಣವಾಗಿರತ್ತೆ ಅದರಲ್ಲೂ ಸತ್ಪ್ರಜೆಗಳನ್ನು ರೂಪಿಸುವ ಅತ್ಯಂತ ಜವಾಬ್ದಾರಿ ಸ್ಥಾನವಾಗಿರತ್ತೆ ಆದರೆ ಇಂತಹ ಶಿಕ್ಷಕರಿಂದ ಸಮಾಜ ಅಧೋಗತಿಯತ್ತ ಸಾಗುತ್ತಿರುವುದು ಕಾಣಬಹುದಾಗಿದೆ.
ನೈತಿಕತೆ ಎತ್ತಿ ತೋರಿಸುವ ಬದಲು ನೈತಿಕತೆಯ ಅಧಪತನವಾಗುತ್ತಿದೆ. ಇಂತಹ ಶಿಕ್ಷಕರಿಂದ ಸಮಾಜದ ಮೇಲೆ ದುಶ್ಪರಿಣಾಮ ಬೀರುವುದು ಎಷ್ಟು ಸತ್ಯ ಆಗಿರತ್ತೊ ಹಾಗೆಯೇ ಉತ್ತಮ ಶಿಕ್ಷಕರ ಮೇಲು ಸಹ ಈ ರೀತಿಯ ಘಟನೆಗಳಿಂದ ಅನುಮಾನಗಳು ಪ್ರಾರಂಭವಾಗುತ್ತದೆ.



