ಶಿವಮೊಗ್ಗ KSRTC ಅಧಿಕಾರಿಗಳ ದುರವರ್ತನೆ/ ದುರಾಡಳಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇದು ಕೊನೆಗೊಳ್ಳಲೇ ಬೇಕು,ನಗರ ಸಾರಿಗೆ Bus ಸ್ಟಾಪ್ ಗಳಲ್ಲಿ Bus ಗಾಗಿ ಕಾಯುತ್ತ ನಿಂತ ಮಹಿಳೆಯರಿಗೆ, ಶ್ರಮಿಕ ವರ್ಗದವರಿಗೆ ವೃದ್ಧರಿಗೆ ಅನಾರೋಗ್ಯ ಪೀಡಿತರಿಗೆ Bus ನಿಲ್ಲಿಸದಂತೆ ಹೋಗುತ್ತಿರುವ ಸಮಸ್ಯೆಗೆ ನ್ಯಾಯ ಸಿಗಲೇಬೇಕಾಗಿದೆ.
KSRTC Bus ನಿಲ್ದಾಣದಲ್ಲಿ ಶೌಚಾಲಯದಲ್ಲಿ ಮಹಿಳೆಯರಿಂದ ವಸೂಲಿ ಮಾಡುತ್ತಿರುವ 10₹ ರಿಂದ 50₹ ಹಣಕ್ಕೆ ಕಡಿವಾಣ ಬೀಳಲೆಬೇಕು.
ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಉಲ್ಲಂಘಸಿ ನಗರದೊಳಗೆ ಸಂಚಾರ ಮಾಡುತ್ತಿರುವ ಬೇರೆ ಜಿಲ್ಲೆಗೆ ತೆರಳುತ್ತಿರುವ KSRTC Bus ಗಳ ಮೇಲೆ ಜಿಲ್ಲಾಧಿಕಾರಿ ಕ್ರಮ ಜರುಗಿಸಲೇಬೇಕು.
KSRTC ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಬೀಳಲೆ ಬೇಕು.
ನಾವು ಪದೇ ಪದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಮಾಹಿತಿ ತರುತ್ತಾನೆ ಇದ್ದೇವೆ..!
ಶಿವಮೊಗ್ಗ KSRTC ಅಧಿಕಾರಿಗಳ ದರ್ಪದ ಬೆನ್ನಿಗೆ ನಿಂತಿರುವ ಆ ಪ್ರಭಾವಿ ಯಾರು?
ಕಾಂಗ್ರೆಸ್ ಸರ್ಕಾರಕ್ಕೆ KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅಸಾಧ್ಯವಾಗುತ್ತಿರುವುದಾದರು ಯಾಕೆ?
ಏನಿದರ ಮರ್ಮ?
ಆ ಪ್ರಭಾವಿ ಯಾರು? ಎಂಬ ಪ್ರಜ್ಞಾವಂತ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಲೇಬೇಕಿದೆ..!
KSRTC ಅವರಿಗೆ ಅದು ಯಾವ ಪ್ರಭಾವಿ ಬೆಂಬಲದಿಂದ ಶಿವಮೊಗ್ಗದಲ್ಲಿ ಅಧಿಕಾರಿಗಳು ಅವರು ಆಡಿದ್ದೇ ಆಟ ಅನ್ನುವಂತೆ ಆಗಿದೆ?
ಹೆಣ್ಣುಮಕ್ಕಳ,ಮಹಿಳೆಯರ ಅನುಕೂಲ ಮಾಡಿಕೊಡುವುದೇ ನಮ್ಮ ಗುರಿ ಅಂತ ಚುನಾವಣೆಯಲ್ಲಿ ಶಕ್ತಿ ಯೋಜನೆ ನೀಡುವ ಮೂಲಕ ಅಧಿಕಾರ ಗೆದ್ದಂತ ಕಾಂಗ್ರೆಸ್ ಸರ್ಕಾರಕ್ಕೆ ಶಿವಮೊಗ್ಗ KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅಸಾಧ್ಯ ಪರಿಸ್ಥಿತಿ ಯಾಕೆ ಉಂಟಾಗಿದೆ? ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.
KSRTC ಅಧಿಕಾರಿಗಳ ಆಟಾಟೋಪ ಎಷ್ಟಾದರೂ ನಡೀಲಿ ಅಂತ ಸುಮ್ಮನಿರುವ ಹಿಂದೆ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಮೇಲೆ ಪ್ರಯಾಣಿಕರಿಗೆ, ಜನಸಾಮಾನ್ಯರಿಗೆ ಅನುಮಾನ ಹೆಚ್ಚಾಗಿದೆ.
ಕೊನೆಯದಾಗಿ ಎಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ KSRTC ಅಧಿಕಾರಿಗಳ ಆಟಟೋಪದ ಹಿಂದಿರುವ ಪ್ರಭಾವಿ ಯಾರು?
ಯಾಕೆ ಕ್ರಮ ಆಗುತ್ತಿಲ್ಲ? ಎಂಬುದು ಪ್ರಯಾಣಿಕರು ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ.



