ಶಿವಮೊಗ್ಗ | ಮಹಿಳೆಯರು ಕ್ಯೂ ನಲ್ಲಿ ನಿಂತರು ಸಿಗದ Domestic ಸಿಲಿಂಡರ್ ಹೋಟೆಲ್ ಗೆ ಸಿಗುತ್ತಿರುವುದು ಹೇಗೆ?

ಶಿವಮೊಗ್ಗ

ಶಿವಮೊಗ್ಗ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಗೃಹ ಉಪಯೋಗಿ ಸಿಲಿಂಡರ್ ಕುರಿತು ಪಡಿತರ ಮತ್ತು ಆಹಾರ ಇಲಾಖೆ ಅಧಿಕಾರಿಗಳ ದಾಳಿ ಕಾಟಾಚಾರಕ್ಕೆ ನಡೆಯುತ್ತಿದ್ದೀಯ ಎಂಬ ಪ್ರಶ್ನೆ ಅನುಮಾನ ಸಾರ್ವಜನಿಕವಲಯದಲ್ಲಿ ಮೂಡಲು ಪ್ರಾರಂಭವಾಗಿದೆ.

ಈ ರೀತಿಯ ಪ್ರಶ್ನೆ ಉದ್ಭವ ಆಗಲು ನಿನ್ನೆ ದಿವಸ ವಿಧಾತ್ರಿ ಕೆಫೆ ಮೇಲೆ ನಡೆದ ದಾಳಿ ಏಕೆಂದರೆ ನೆಹರು ಮೈದಾನ ಪಕ್ಕದ ರಸ್ತೆಯಲ್ಲಿರುವ ವಿಧಾತ್ರಿ ಕೆಫೆ ಹಾಗೂ ಗಾಂಧಿ ನಗರದ ವಿಧಾತ್ರಿ ಭವನ್ ಮೇಲೆ ದಾಳಿ ಆಗಬೇಕಿತ್ತು ಆದರೆ ಅಧಿಕಾರಿಗಳು ಒಮ್ಮೆಲೇ ವಿಧಾತ್ರಿ ಕೆಫೆ ಗೆ ಆಗಮಿಸುವ ಮೂಲಕ ಪರಿಶೀಲಿಸಿ ಮೂರು ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಅರ್ಧ ಮುಕ್ಕಾಲು ಗಂಟೆಯ ನಂತರ ಗಾಂಧಿ ನಗರದ ವಿಧಾತ್ರಿ ಭವನ್ ಹೋಟೆಲ್ ನತ್ತ ತೆರಳಿದರು.

ಈ ಮೂಲಕ ಸಾರ್ವಜನಿಕರು ಹೋಟೆಲ್ ನಲ್ಲಿ Domestic ಸಿಲಿಂಡರ್ ಇರುವ ಬಗ್ಗೆ ಮಾಹಿತಿ ನೀಡಿದ್ದರು ಸಹ ಅಧಿಕಾರಿಗಳು ಹೋಟೆಲ್ ಗೆ ಸಹಕಾರ ನೀಡಿದರ ಎಂಬುದು ಈಗ ಅನುಮಾನಕ್ಕೆ ಇಡಾಗಿದೆ..! ಅಧಿಕಾರಿಗಳ ಈ ವರ್ತನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯರು ಕ್ಯೂ ನಲ್ಲಿ ನಿಂತರು ಸಿಗದ Domestic ಗ್ಯಾಸ್ ಸಿಲಿಂಡರ್ ಗಳು ಹೋಟೆಲ್ ಗಳಿಗೆ ಹೇಗೆ ಸಿಗುತ್ತಿದೆ ಎಂಬ ಪ್ರಶ್ನೆ? ಜನಸಾಮಾನ್ಯರದ್ದಾಗಿದೆ.

ಗ್ಯಾಸ್ ಸಿಲಿಂಡರ್ ಗಳು ಕೊರತೆ ಸ್ಥಿತಿಯ ಭಯದಿಂದ ಜನಸಾಮಾನ್ಯರು ಒಂದುಕಡೆ ಆತಂಕದಲ್ಲಿ ಇದ್ದರೆ ಮತ್ತೊಂದೆಡೆ ಅಧಿಕಾರಿಗಳ ಕಾಟಾಚಾರಕದ ದಾಳಿ ಎಂಬಂತೆ ಕಾಣಿಸುತ್ತಿದೆ ಹಾಗೂ ಈ ಗೃಹ ಉಪಯೋಗಿ ಸಿಲಿಂಡರ್ ಪೂರೈಕೆ ಮಾಡಿದ ಕಂಪನಿ ಹಾಗೂ ಏಜನ್ಸಿ ಮೇಲೆ ಕ್ರಮ ಆಗಲೇಬೇಕಿದೆ.

ಇನ್ನು AC ಸತ್ಯನಾರಾಯಣ್ ನೇತೃತ್ವದಲ್ಲಿ ಮೊನ್ನೆ ದಿವಸ ಗಾಂಧಿ ನಗರದ ವಂದನ ಬೇಕರಿ ಗೆ ತೆರಳಿ ಪರಿಶೀಲನೆ ಮಾಡಿದ್ದಾರೆ ಅದೇ ಎರಡು ಹೆಜ್ಜೆ ಇತ್ತ ಕಡೆ ಬಂದಿದ್ದರೆ, ವಿಧಾತ್ರಿ ಭವನ್ ಹೋಟೆಲ್ ಮೇಲು ಸಹ ದಾಳಿ ಮಾಡಬಹುದಾಗಿತ್ತು ಅದು ಆಗಿಲ್ಲ, ನಗರದಲ್ಲಿ ಹಲವು ಕಡೆ ಕಾಳಸಂತೆಯಲ್ಲಿ ಸಿಲಿಂಡರ್ ಗಳು ಮಾರಾಟ ಆಗುತ್ತಿರುವ ಆರೋಪಗಳು ಕೇಳಿ ಬರುತ್ತಾನೆ ಇದೆ.

ಇನ್ನು ಸಚಿವ ಮುನಿಯಪ್ಪ ಅವರು ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲು ತಿಳಿಸಿದ್ದಾಗಿದೆ.

ಶಿವಮೊಗ್ಗದ ಪಡಿತರ ಮತ್ತು ಆಹಾರ ಇಲಾಖೆ ಮಾತ್ರ ಜನಸಾಮಾನ್ಯರ ಈ ಸಮಸ್ಯೆ ಸಂಬಂಧ ಸರಿಯಾಗಿ ದಾಳಿಗಳನ್ನು ಮಾಡದೇ ರಾಜಿ ಮಾಡಿಕೊಂಡಂತೆ ಭಾಸವಾಗುತ್ತಿದೆ. ಈ ಸಂಬಂಧ ಸಚಿವರು ಶಿವಮೊಗ್ಗದ ಈ ಅಧಿಕಾರಿಗಳ ಮೇಲು ಕ್ರಮ ಜರುಗಿಸಬೇಕಿದೆ.

ಇನ್ನು ವಿಧಾತ್ರಿ ಕೆಫೆ ಮಾಲೀಕ ಅವಿನಾಶ್ ಅವರು ಶಿಕ್ಷಕರಾಗಿದ್ದಂತವರು ಒಂದು ಉದ್ಯಮ ನಡೆಸುವಾಗ ಏರುಪೇರುಗಳು ಇರತ್ತೆ ಹಾಗಂತ ಕಾನೂನು ದುರುಪಯೋಗ ಮಾಡಿಕೊಂಡು ಮಾಡುವುದು ತಪ್ಪಾಗತ್ತೆ ಹಾಗೂ ಘಟನೆ ಸಂಬಂಧ ಸುದ್ದಿ ಗೆ ತೆರಳಿದ್ದ ಇ-ಕನ್ನಡ ಮಾಧ್ಯಮ ಪ್ರತಿನಿಧಿ ಮೇಲೆ ಏಕಏಕಿ ಧಮ್ಕಿ ಹಾಕಿರುವುದು ಖಂಡನೀಯವಾಗಿದೆ.

ವಿಧಾತ್ರಿ ಕೆಫೆ/ ವಿಧಾತ್ರಿ ಭವನ್ ಮಾಲೀಕ ಅವಿನಾಶ್ ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ತಮಗೆ ಕೆಲವು ಮಾಧ್ಯಮ ಪ್ರತಿನಿಧಿಗಳು ಆತ್ಮೀಯರು ಎಂದ ಮಾತ್ರಕ್ಕೆ ನಿಮ್ಮ ಕಾನೂನು ಉಲ್ಲಂಘನೆ ಮಾಡುವಂತ ಕೆಲಸಗಳಿಗೆ ಮಾಧ್ಯಮ ಪ್ರತಿನಿಧಿಗಳು ನಿಮ್ಮನ್ನ ಬೆಂಬಲಿಸುವುದಿಲ್ಲ ಎಂದು ನೀವು ಅರಿತುಕೊಳ್ಳುವ ಅವಶ್ಯಕತೆಯಿದೆ .

ಹಾಗಾಗಿ ನಗರದಲ್ಲಿ ಅವ್ಯಾಹತವಾಗಿ ಕಾಳಸಂತೆಯಲ್ಲಿ ಬಿಕರಿ ಆಗುತ್ತಿರುವ Domestic ಸಿಲಿಂಡರ್ ಗಳ ಬಗ್ಗೆ ಇಂತಹ ಒಂದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ದಾಳಿ ಮಾಡುವ ಮೂಲಕ ನ್ಯಾಯಯುತ ಕರ್ತವ್ಯ ಮಾಡಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಎಂಬುದು ಶಿವಮೊಗ್ಗದ ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ.

Author