ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಶೂನ್ಯ ಕೊಡುಗೆ : ಶಾಸಕ ಚನ್ನಬಸಪ್ಪ ಆರೋಪ

ಶಿವಮೊಗ್ಗ

ಶಿವಮೊಗ್ಗ,ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದಾರೆ. ಮೂರು ವರ್ಷಗಳಿಂದ ಶಿವಮೊಗ್ಗ ಅಭಿವೃದ್ಧಿಗೆ ಬಜೆಟ್‌ನಲ್ಲ್ಲಿ ನಿರಂತರವಾಗಿ ಯಾವುದೇ ಅನುದಾನವನ್ನು ನೀಡಿಲ್ಲ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ದೂರಿದ್ದಾರೆ.

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗವನ್ನು ಸೆಡ್‌ಲೈನ್ ಮಾಡಿರುವುದು ಅಕ್ಷಮ್ಯ ಅಪರಾಧ. ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಜಿಲ್ಲಾಸ್ಪತ್ರ್ರೆ, ಪೊಲೀಸ್ ಕಮೀಷನರೇಟ್, ಆಯುಷ್ ವಿವಿಗೆ ೧೦೦ ಎಕರೆ ಭೂಮಿ ಮಂಜೂರಾಗಿದ್ದರೂ ಅದಕ್ಕೆ ಅನುದಾನ ಘೋಷಣೆ ಮಾಡದೇ ಇರುವುದು, ಪೌರ ಕಾರ್ಮಿಕರ ಖಾಯಮಾತಿ, ಜಿಲ್ಲಾಡಳಿತ ಭವನ, ಕೊಳಚೆ ಪ್ರದೇಶ ಅಭಿವೃದ್ಧಿ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್, ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್, ಎಲೆಚುಕ್ಕೆ ರೋಗ ಸಂಶೋಧನೆಗೆ ಹಣ ಬಿಡುಗಡೆ ಮಾಡಿಲ್ಲ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದರು.

ಶಿವಮೊಗ್ಗಕ್ಕೆ ಅಗತ್ಯವಿರುವ ಇನ್ನೂ ಎರಡು ಬಸ್ ಡಿಪೋ ಸ್ಥಾಪನೆ, ಕನಿಷ್ಠ ೨೦ ಬಸ್ ಕಲ್ಪಿಸುವುದು, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣದ ಬಗ್ಗೆಯೂ ಏನೂ ಹೇಳಿಲ್ಲ. ಎಂದರು.

ನಗರಾಧ್ಯಕ್ಷ ಮೋಹನ್‌ರಡ್ಡಿ, ಪ್ರಮುಖರಾದ ಎಸ್. ಜ್ಞಾನೇಶ್ವರ್, ಹೆಚ್.ಕೆ. ದೀನ್‌ದಯಾಳ್, ಶ್ರೀನಾಗ್, ನವುಲೆ ಮಂಜುನಾಥ್, ಈಶ್ವರಪ್ಪ ಉಪಸ್ಥಿತರಿದ್ದರು.

Author