ಬಳ್ಳಾರಿ,ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಈ ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಪ್ರತಿಭಟನೆ ನಡೆಸಿದೆ.
ಸರ್ಕಾರಕ್ಕೆ ಬೇಡಿಕೆಗಳು :
ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಇತ್ತೀಚಿಗೆ ನಡೆದ ಉಪಕುಲಪತಿಗಳ ಸಭೆಯಲ್ಲಿ , ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುವುದು ನ್ಯಾಯಯುತ ಎಂದು ಹೇಳಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ಸಹ, ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷ (2025-25)ಸೇವೆ ಸಲ್ಲಿಸುತ್ತಿರುವ ಮತ್ತು ಸೇವಾ ಹಿರಿತನವುಳ್ಳ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷವೂ (2026-27) ಮುಂದುವರಿಸಬೇಕು.

ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನು ರೂ.14,000 ಗಳಿಂದ ರೂ.30,000 ಹೆಚ್ಚಿಸಬೇಕು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಈ ಶೈಕ್ಷಣಿಕ ವರ್ಷದ ಮಾರ್ಚ್ ಅಂತ್ಯದವರೆಗೂ ಗೌರವಧನ ನೀಡಿರಿ.
ಪದವಿ ಪೂರ್ವ ಇಲಾಖೆಯ ಆದೇಶದಂತೆ ವಾರಕ್ಕೆ 10 ಗಂಟೆಗಳ ಕಾರ್ಯಭಾರ ಮಾತ್ರ ನೀಡಬೇಕು.
ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರಿಗೆ ಸೇವಾ ಪ್ರಮಾಣ ಪತ್ರ ಮತ್ತು ಕೃಪಾಂಕ ನೀಡಿ ಸೇವಾ ಭದ್ರತೆ ನೀಡಬೇಕು.
ಮುಂಬರಲಿರುವ ಸರ್ಕಾರಿ ನೇಮಕಾತಿಗಳಲ್ಲಿ, ಅತಿಥಿ ಉಪನ್ಯಾಸಕರನ್ನು ಆದ್ಯತೆಯ ಮೇರೆಗೆ ನೇಮಕಾತಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮೆಲ್ಲರ ಸೇವೆಯ ಬಗ್ಗೆ ನಿಮಗೂ ತಿಳಿದಿದೆ. ವಿದ್ಯಾರ್ಥಿಗಳ ದಾಖಲಾತಿಯಿಂದ ಹಿಡಿದು ಉತ್ತಮ ಫಲಿತಾಂಶ ಬರುವವರೆಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ.

ಕಳೆದ ಶೈಕ್ಷಣಿಕ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ, ಅವರ ಹಿತದೃಷ್ಟಿಯಿಂದ ಪರಿಹಾರ ಬೋಧನೆ ಮಾಡಿದ್ದಾರೆ. ಅದಕ್ಕೆ ಸರ್ಕಾರ ಯಾವುದೇ ರೀತಿ ಗೌರವ ಧನ ನೀಡದಿದ್ದರೂ , ವಿದ್ಯಾರ್ಥಿಗಳ ವಿಶೇಷ ತರಗತಿಗಳನ್ನು ಮಾಡಿ , ಶಿಕ್ಷಣದ ಮತ್ತು ಮಕ್ಕಳ ಹಿತಕ್ಕಾಗಿ ಯಾವಾಗಲೂ ಕೆಲಸ ಮಾಡುತಿದ್ದೇವೆ.
ಆದರೂ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕಡಿಮೆ ಗೌರವಧನ ಸೇರಿದಂತೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ, ಈ ಗೌರವ ಧನ ಸರಿಯಾದ ಸಮಯಕ್ಕೆ ನಮಗೆ ತಲುಪದೇ ಜೀವನ ನಡೆಸುವುದೇ ದುಸ್ತರವಾಗಿದೆ.
ಅದರಿಂದ ತಾವುಗಳು ಕೂಡಲೇ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಬಗೆಹರಿಸಿ , ಅತಿಥಿ ಉಪನ್ಯಾಸಕರ ಪರವಾಗಿ ನಿಲ್ಲಬೇಕೆಂದು ಮನವಿ ಮಾಡುತ್ತೇವೆ ಎಂದು ಅಗ್ರಹಿಸಿದ್ದಾರೆ .
ಈ ಸಂದರ್ಭದಲ್ಲಿ ರಾಜೇಶ್ ಭಟ್, ರಾಜ್ಯ ಕಾರ್ಯದರ್ಶಿ, ಪದ್ಮಪ್ರಭ ಇಂದ್ರ, ರಾಜ್ಯ ಅಧ್ಯಕ್ಷರು ರಂಗಣ್ಣ, ಜಿಲ್ಲಾ ಅಧ್ಯಕ್ಷರು ನಾಗರತ್ನ ಎಸ್ ಜಿ ಜಿಲ್ಲಾ ಕಾರ್ಯದರ್ಶಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ (ರಿ) ಉಪಸ್ಥಿತರಿದ್ದರು.



