ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ ಕ್ರೀಡೆಗಳಿಂದ ಸಂಘಟನೆಗೆ ಬಲ : ಹಾರನಹಳ್ಳಿ ಚೌಕಿ ಮಠದ ಸ್ವಾಮೀಜಿ

ಶಿವಮೊಗ್ಗ

ಶಿವಮೊಗ್ಗ, ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿಯ ಜಾತ್ರೆ ಅಂಗವಾಗಿ ಫೆಬ್ರವರಿ ೧೫ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಟಗರು ಕಾಳಗದ ಅಂಕಣ ಪೂಜೆಯನ್ನು ಹಾರನಹಳ್ಳಿಯ ಚೌಕಿಮಠದ ನೀಲಕಂಠ ಸ್ವಾಮೀಜಿ ನೆರವೇರಿಸಿ, ಪ್ರಚಾರದ ವಾಹನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಂತಹ ಕ್ರೀಡಾ ಉತ್ಸವಗಳಿಂದ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುವುದರ ಜೊತೆಗೆ ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಟಗರು ಕಾಳಗ ಕುಸ್ತಿ ಹಾಗೂ ಗ್ರಾಮೀಣ ಕ್ರೀಡೆಗಳನ್ನು ನಡೆಸುವುದರಿಂದ ಊರ ಹಬ್ಬಗಳಿಗೆ ಮೆರುಗು ಬರಲಿದೆ.

ನಮ್ಮೂರ ಬಳಗದಿಂದ ನಡೆಯುತ್ತಿರುವ ರಾಷ್ಟ್ರಮಟ್ಟದ ಟಗರು ಕಾಳಗವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ ರಂಗನಾಥ್, ಗೌರವ ಸಂಚಾಲಕರಾದ ಎಚ್ ಪಾಲಾಕ್ಷಿ , ಐಡಿಯಲ್ ಗೋಪಿ ಹೆಚ್ ಸಿ ಮಾಲ್ತೇಶ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸೂಡ ಸದಸ್ಯರಾದ ಎಂ ಪ್ರವೀಣ್ ,ಕುಮಾರ್ ಯುವ ಮುಖಂಡರಾದ ಬಳ್ಳಕೆರೆ ಸಂತೋಷ್, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್. ಪಿ. ಗಿರೀಶ್, ಬಿ .ಲೋಕೇಶ್,ವಿನಯ್ ಇತರರು ಇದ್ದರು.

Author