ಶಿವಮೊಗ್ಗ | ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ ವಿನೋಬನಗರ ಠಾಣೆ ಪೊಲೀಸರು

ಶಿವಮೊಗ್ಗ

ಶಿವಮೊಗ್ಗ,ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಬಳಿ ಅಜ್ಜಿ ಸರ ಕಿತ್ತುಕೊಂಡು ಹೋಗಿದ್ದ ಘಟನೆ ಸದ್ಯ ಈ ವಿಷಯದಲ್ಲಿ ಅಪ್​ಡೇಟ್ ಏನಂದರೆ, ವಿನೋಬನಗರ ಪೊಲೀಸರು ಈ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ತಮಿಳುನಾಡಿನವರೆಗೂ ಹೋಗಿ ಆರೋಪಿಗಳನ್ನ ಅರಸ್ಟ್ ಮಾಡಿದ್ದಾರೆ.

ಈ ಮೂಲಕ ಒಂಟಿ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹25 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು

ಅರಸು ಅಲಿಯಾಸ್‌ ವಲ್ಲರಸು ಆರ್ (25): ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು.

ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (40): ಜೆ.ಜೆ.ಆ‌ರ್ ನಗರ, ಬೆಂಗಳೂರು.

ಕೇಶವನ್ (43): ಸೇಲಂ ಜಿಲ್ಲೆ, ತಮಿಳುನಾಡು.

ಸತೀಶ್‌ ಕುಮಾ‌ರ್ (40): ಹೊಸೂರು ಮೂಲದವರು, ಹಾಲಿ ವಾಸ ಅತ್ತಿಬೆಲೆ, ಬೆಂಗಳೂರು.

ದಿನಾಂಕ 18/11/2025 ರಂದು ಮಧ್ಯಾಹ್ನ ವಿನೋಬನಗರದ 60 ಅಡಿ ರಸ್ತೆಯ 16ನೇ ಕ್ರಾಸ್‌ನಲ್ಲಿ ಶ್ರೀಮತಿ ಹೊನ್ನಮ್ಮ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ವಿನೋಬನಗರದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಗ್ರಾಂ ಚಿನ್ನದ ಗಟ್ಟಿ ( ₹4,80,000).ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೋಚಿದ್ದ 70 ಗ್ರಾಂ ತೂಕದ ಮಾಂಗಲ್ಯ ಸರ (ಮೌಲ್ಯ ₹8,50,000).

ವಿನೋಬನಗರದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ 60 ಗ್ರಾಂ ತೂಕದ ಆಭರಣಗಳು (ಮೌಲ್ಯ ₹10,20,000).ಕೃತ್ಯಕ್ಕೆ ಬಳಸಿದ್ದ ₹1,50,000 ಮೌಲ್ಯದ ಬಜಾಜ್ ಪಲ್ಸರ್ ಎನ್ 250 ಬೈಕ್ ವಶಕ್ಕೆ.

Author