ಶಿವಮೊಗ್ಗ | ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಕಾರ್ಯಕಾರಿ ಸಮಿತಿಯ ಆಯ್ಕೆ

ಶಿವಮೊಗ್ಗ

ಶಿವಮೊಗ್ಗದ ಪ್ರತಿಷ್ಠಿತ 80 ವರ್ಷ ಇತಿಹಾಸ ಉಳ್ಳ ಕ್ರಿಕೆಟ್ ಸಂಸ್ಥೆಯಾದ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ನ 2024-2025ರ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ 2025-2028 ಅವಧಿಗೆ ಕಾರ್ಯಕಾರಿ ಸಮಿತಿಯ ಆಯ್ಕೆ ನೆಡೆದಿದ್ದು ಸಮಿತಿ ಈ ಕೆಳಗಿನಂತಿದೆ.

ಡಿ. ರ್. ನಾಗರಾಜ್ – ಅಧ್ಯಕ್ಷರು, ಕಟ್ಟೆ ಶ್ರೀನಾಥ್ – ಉಪಾಧ್ಯಕ್ಷರು ಎಚ್. ಎಸ್. ಸದಾನಂದ -ಕಾರ್ಯದರ್ಶಿ, ಐಡಿಯಲ್ ಗೋಪಿ – ಸಹ ಕಾರ್ಯದರ್ಶಿ,ರಮಕಾಂತ -ಖಜಾಂಚಿ,ಶೈಲೇಶ್ ಕುಮಾರ್ – ಸದಸ್ಯರು,ಕೆ. ಲ್. ಸುಬ್ರಮಣ್ಯ -ಸದಸ್ಯರು ಯಶವಂತ ಕುಮಾರ್ – ಸದಸ್ಯರು,ಮಿಥುನ್ – ಸದಸ್ಯರು,ಅನಿಲ್ ಕುಮಾರ್ ಪಾಟೀಲ್ -ಸದಸ್ಯರು,ರಮಾನಂದ -ಸದಸ್ಯರು,ಡಿ. ವಿ. ರಾಮಚಂದ್ರ – ಸದಸ್ಯರು, ನಿತ್ಯಾನಂದ ಪೈ -ಸದಸ್ಯರು.

ಈ ಒಂದು ಸಭೆಯಲ್ಲಿ ಹಿರಿಯ ಚೇತನ ಶ್ರೀ. ಡಿ.ಎಚ್. ಶಂಕರಮೂರ್ತಿಯವರನ್ನು ಸನ್ಮಾನಿಸಲಾಯಿತು.

ಇವರೊಂದಿಗೆ ಹಿರಿಯರಾದ ತಿಮ್ಮಪ್ಪ ಜಿ. ಎಸ್. ನಾಗರಾಜ್ ವಕೀಲರು3. ಜೆ. ಎಸ್. ಸತ್ಯನಾರಾಯಣರವರು ಸಹಾ ಉಪಸ್ಥಿತರಿದ್ದು ಸಭೆಗೆ ಮೆರಗು ತಂದಿರುತ್ತಾರೆ.

Author