ಶಿವಮೊಗ್ಗ,ಹೊರ ರಾಜ್ಯಗಳಲ್ಲಿದ್ದ ನಕಲಿ ಸರ್ಟಿಫಿಕೇಟ್ ಜಾಲ ಕರ್ನಾಟಕಕ್ಕು ವ್ಯಾಪಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ವ್ಯಾಪಾಕವಾಗಿ ಹರಡಿದ್ದ ನಕಲಿ ಸರ್ಟಿಫಿಕೇಟ್ ಜಾಲ ಈಗ ಕರ್ನಾಟಕಕ್ಕೆ ವ್ಯಾಪಿಸಿದೆ.
ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಕಲಿ ಸರ್ಟಿಫಿಕೇಟ್ ನೀಡಿ ಕೆಲಸಗಿಟ್ಟಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಅತಿಥಿ ಉಪನ್ಯಾಸಕ ಹುದ್ದೆಗೆ ಉದ್ಯೋಗ ಪಡೆಯಲು ಶ್ರೀದೇವಿ ಎಂಬುವರು ಎಂ ಎ, ಪಿ ಎಚ್ ಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಪಿ ಎಚ್ ಡಿ ಪಡೆದಿರುವುದಾಗಿ ನಕಲಿ ದಾಖಲೆ ಸಲ್ಲಿಸಿದ್ದಾರೆ.
ಬೆಂಗಳೂರು ವಿವಿಯ ಪ್ರೊಫ್ ಡಾ. ವಿಜಯಲಕ್ಷ್ಮಿ ಅವರ ಇತಿಹಾಸ ವಿಭಾಗದಲ್ಲಿ PhD ಪಡೆದಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ, ಆದರೆ ಡಾ. ವಿಜಯಲಕ್ಷ್ಮಿ ಅವರು ಸುವರ್ಣ ನ್ಯೂಸ್ ಗೆ ನನ್ನ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿನಿ PhD ಮಾಡಿಲ್ಲ ಎಂದು ದೃಡೀಕರಿಸಿದ್ದಾರೆ.

2025ರ ಡಿಸೆಂಬರ್ 11 ರಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು.
ಇನ್ನು ಈ ಪಿ ಎಚ್ ಡಿ, ಸರ್ಟಿಫಿಕೇಟ್ ನೈಜತೆ ದೃಡೀಕರಿಸಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಳಿಸಿದ ಪತ್ರಕ್ಕೆ ಇದೊಂದು ನಕಲಿ ಸರ್ಟಿಫಿಕೇಟ್ ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಉತ್ತರ ನೀಡಿದ್ದಾರೆ.
ಇನ್ನು ಈ ಘಟನೆ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಈ ನಕಲಿ ಸರ್ಟಿಫಿಕೇಟ್ ನೀಡಿದ್ದ ಕುರಿತು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಪ್ರಾಂಶುಪಾಲರಾದ ಡಾ. ರಂಗನಾಥ್ ರಾವ್ ಅವರು ನಮ್ಮ ಇ-ಕನ್ನಡ ಮಾಧ್ಯಮದೊಂದಿಗೆ ಮಾತನಾಡಿ ಘಟನೆ ಸಂಬಂಧ ಶ್ರೀದೇವಿ ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಇಲಾಖೆಯ ನಿರ್ದೇಶನ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಸರ್ಕಾರದಿಂದ ಅತಿಥಿ ಉಪನ್ಯಾಸಕರ ಕೌಂಸ್ಲಿಂಗ್ ಪ್ರಕ್ರಿಯೆ ಮುಗಿದು ಆನ್ಲೈನ್ ಅಪ್ಲಿಕೇಶನ್ ಹಾಕಿ ಎಲ್ಲವನ್ನು ಪರಿಶೀಲನೆ ಆದ ನಂತರ ನಮಗೆ ಕಾಲೇಜಿಗೆ ಇಷ್ಟು ಅಭ್ಯರ್ಥಿಗಳನ್ನು ಕೆಲಸಕ್ಕೆ ಇಂತಿಂತ ಅಭ್ಯರ್ಥಿಗಳನ್ನು ನಿಯೋಜನೆ ಮಾಡಿಕೊಳ್ಳಿ ಎಂದು ತಿಳಿಸುತ್ತಾರೆ, ಅದರಂತೆ ನಾವು ಸಹ ಇಲಾಖೆಯ ಪ್ರಕ್ರಿಯೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎಂದರು. ಇಲಾಖೆಯ ಆದೇಶದಂತೆ 3 ರಿಂದ 4 ದಿನದೊಳಗೆ ಕರ್ತವ್ಯ ನಿಯೋಜನೆ ಪಡೆಯಬೇಕು ಹಾಗೂ ಆನ್ಲೈನ್ ಅಲ್ಲಿ ಕರ್ತವ್ಯಕ್ಕೆ ನಿಯೋಜನೆ ಆದವರ ಮಾಹಿತಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು ಈ ರೀತಿಯ ನಕಲಿ ಸರ್ಟಿಫಿಕೇಟ್ ಅಭ್ಯರ್ಥಿ ನೀಡಿರುವುದು ನಿಜವಾಗ್ಲೂ ಬೇಸರದ ಸಂಗತಿಯಾಗಿದೆ ಎಂದರು. ಕಷ್ಟಪಟ್ಟು ಓದಿ Phd ಪಡೆದುಕೊಂಡು ಬಂದವರನ್ನು ಸಹ ಅನುಮಾನದಿಂದ ನೋಡುವ ಸ್ಥಿತಿ ಇಂತಹವರಿಂದ ನಿರ್ಮಾಣವಾಗಿದೆ ಎಂದರು.
ಇಲಾಖೆಯಿಂದ ನಮಗೆ ಪ್ರಸ್ತುತ ಮಾರ್ಗದರ್ಶನ ಬಂದಿದೆ ಅದರಂತೆ ಮುಂಬರುವ ಅಭ್ಯರ್ಥಿಗಳಿಂದ ಒರಿಜಿನಲ್ ದಾಖಲೆ, ವೈವಾ, ತಿಸಿಸ್ ಹಾಗೂ ಇನ್ನಿತರೆ ದಾಖಲೆ ಪರಿಶೀಲನೆ ಮಾಡುವ ಮುಖೇಣ ನಂತರ ಕೆಲಸಕ್ಕೆ ನಿಯೋಜನೆ ಮಾಡಬೇಕು ಎಂಬ ಆದೇಶ ಬಂದಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆದೇಶಕ್ಕೆ ಅನುಗುಣವಾಗಿ ಕರ್ತವ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಹೊರರಾಜ್ಯದ ಸರ್ಟಿಫಿಕೇಟ್ ಮಾತ್ರ ಕೆಲಸ ಸೇರ್ಪಡೆಗೆ ಬರುವ ಅಭ್ಯರ್ಥಿಗಳ ಸರ್ಟಿಫಿಕೇಟ್ ಪರಿಶೀಲನೆ ಮಾಡುತ್ತಾರೆ.
ಆದರೆ ಪ್ರಸ್ತುತ ರಾಜ್ಯದ ವಿವಿಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ಸರ್ಟಿಫಿಕೇಟ್ ಪರಿಶೀಲನೆ ಮಾಡುತ್ತಿಲ್ಲ ಎಂಬ ಮಾಹಿತಿಯಾಗಿದೆ.
ಈ ಹಿಂದೆ ಇದೆಲ್ಲ ಪ್ರಕ್ರಿಯೆಗಳು ಇರಲಿಲ್ಲ ಪ್ರಸ್ತುತ ಆದೇಶ ಪ್ರಕಾರ ಕನಿಷ್ಠ ವಿದ್ಯಾರ್ಹತೆ PhD ನಿಗದಿಯಾಗಿದೆ, ಹಲವಾರು ಅನುಭವ ಉಳ್ಳುವ ಶಿಕ್ಷಕರು ಕೆಲಸದಿಂದ ವಂಚಿತರಾಗಿದ್ದಾರೆ ಹಾಗೂ ಇದು ರಾಜ್ಯದ್ಯಾಂತ ಈ ರೀತಿಯ ನಕಲಿ ಸರ್ಟಿಫಿಕೇಟ್ ಹಾವಳಿ ಹೆಚ್ಚಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಹಾಗೂ ವಿವಿ ಯಲ್ಲಿ ಇರುವುವವರೇ ಯಾರೋ ಷಡ್ಯಂತ್ರ ಮಾಡುತ್ತಿರಬಹುದು ಎಂಬ ಸಂಶಯ ಮೂಡಿದೆ ಇದು ಇಲಾಖೆ ಹಾಗೂ ವಿವಿ ಗಳಲ್ಲೇ ಕೇಳಿ ಬರುತ್ತಿರುವ ಮಾತಾಗಿದೆ.
ಈ ಪ್ರಕರಣ ಸಂಬಂಧ ಒಂದು ದೊಡ್ಡ ಜಾಲವಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದರ ಸಂಬಂಧ ಮುಂದಿನ ದಿನಗಳಲ್ಲಿ ದೊಡ್ಡ ಜಾಲವನ್ನು ಬಯಲಿಗೆ ಎಳೆಯ ಬೇಕಾಗಿದೆ. ನಿಜವಾಗಿ ಓದಿ ಬರುವಂತಹ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಕೂಗು ಕೇಳಿ ಬರುತ್ತಿದೆ.
ಮುಂದಿನ ದಿನಗಳಲ್ಲಿ ಆದರೂ ಈ ರೀತಿಯ ನಕಲಿ ಸರ್ಟಿಫಿಕೇಟ್ ಜಾಲವನ್ನು ಪತ್ತೆ ಹಚ್ಚುವ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸಂಬಂಧಪಟ್ಟ ಇಲಾಖೆ ನೋಡಿಕೊಳ್ಳಬೇಕಾಗಿದೆ.



