ಶಿವಮೊಗ್ಗ | ಟ್ರಾಫಿಕ್ ಪೊಲೀಸ್ ಇಲಾಖೆಯ ಇಬ್ಬಗೆಯ ನೀತಿ : KSRTC ಅವರಿಗೆ ಒಂದು ನ್ಯಾಯ ; ವಾಹನ ಸವಾರರಿಗೆ ಒಂದು ನ್ಯಾಯ

ಶಿವಮೊಗ್ಗ

ಶಿವಮೊಗ್ಗ, ಜಿಲ್ಲೆಯಲ್ಲಿ ಎಲ್ಲರಿಗೂ ಅನ್ವಯ ಆಗುವ ಕಾನೂನು, KSRTC ಅವರಿಗೆ ಯಾಕೆ ಅನ್ವಯ ಆಗುವುದಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ?

ನಗರದಲ್ಲಿ ಟ್ರಾಫಿಕ್ ಸಮಸ್ಯೆ ಗಮನಸಿ ಈ ಹಿಂದಿನ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಬೇರೆ ಜಿಲ್ಲೆಗೆ ತೆರಳುವ KSRTC ಬಸ್ ಹಾಗೂ ಭಾರಿ ವಾಹನಗಳು ನಗರದೊಳಗೆ ಪ್ರವೇಶ ಮಾಡಬಾರದೆಂದು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೂ ಅದೇಶಿಸಿದ್ದಾರೆ.

ಆದರೂ ಸಹ KSRTC ಬಸ್ ಗಳು ಮಾತ್ರ ಜಿಲ್ಲಾಧಿಕಾರಿ ಆದೇಶಕ್ಕೆ Don’t Care ಎಂಬಂತೆ ನಗರದೊಳಗೆ ವಾಹನ ಚಲಾಯಿಸುತ್ತಿದ್ದಾರೆ. ಇದರ ಕುರಿತು ಹಲವಾರು ಬಾರಿ ಸುದ್ದಿಗಳು ಬಂದಿದೆ

ಇನ್ನು ಮುಂದುವರೆದು ಶಿವಮೊಗ್ಗ ಭದ್ರಾವತಿ ಮಾರ್ಗ ಮಾಚೇನಹಳ್ಳಿಯಲ್ಲಿ ಕಾಮಗಾರಿ ಆಗುತ್ತಿರುವ ಕಾರಣ ಭೂ ಕುಸಿತ ಉಂಟಾದ ಕಾರಣ ಜಿಲ್ಲಾಧಿಕಾರಿ ಅವರು ಈ ಸ್ಥಳದಲ್ಲಿ ಭಾರಿ ವಾಹನ ನಿಶಿದ್ದ ಎಂದು ಆದೇಶ ಮಾಡಿದ್ದಾರೆ. ಹಾಗೂ ನಗರದ ಎಂ ಆರ್ ಎಸ್ ಬಳಿ ಪೊಲೀಸ್ ಬ್ಯಾರಿಕೆಡ್ ಸಹ ಅಳವಡಿಸಿದ್ದಾರೆ ಪೊಲೀಸ್ ಇಲಾಖೆ ಆದರೂ ಸಹ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದರೆ. KSRTC ಅವರಿಂದ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತ ಅದೇ ರಸ್ತೆಯಲ್ಲಿ ಸಂಚಾರ ಮಾಡುವುದು ಮುಂದುವರೆದಿದೆ.

ಶಿವಮೊಗ್ಗ ನಗರದಲ್ಲಿ KSRTC ಅವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರು ಮಾಡುವ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ.ಇಷ್ಟು ಕೆಟ್ಟ ಧೋರಣೆ ಎಷ್ಟು ಸರಿ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ?

ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದರು ಟ್ರಾಫಿಕ್ ಪೊಲೀಸ್ ಇಲಾಖೆ ಯಾಕೆ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ?

ಯಾಕೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಜಿಲ್ಲಾಧಿಕಾರಿ ಹಾಗೂ ಮಾನ್ಯ ಖಡಕ್, ಕ್ಲೀನ್ ಅಂಡ್ ಕ್ಲಿಯರ್ ಅಧಿಕಾರಿ ಎಸ್ಪಿ ನಿಖಿಲ್ ಅವರ ಗಮನಕ್ಕೆ ಈ ವಿಷಯ ತರುತ್ತಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ?

ಸಾರ್ವಜನಿಕರಿಗೆ ವಾಹನ ಸವಾರರಿಗೆ ಬೆಂಬಿಡದೆ ದಂಡ ವಸೂಲಿ ಮಾಡುವ ಟ್ರಾಫಿಕ್ ಪೊಲೀಸ್ ಇಲಾಖೆ KSRTC ಅಧಿಕಾರಿಗಳೊಂದಿಗೆ ಯಾಕಿಷ್ಟು ಒಪ್ಪಂದ ಎಂಬುದು ಪ್ರಶ್ನೆಯಾಗಿದೆ?

ಯಾರನ್ನ ಮೆಚ್ಚಿಸಲು ಈ ಒಂದು ಕರ್ತವ್ಯ? ಕಣ್ಣ ಮುಂದೆನೆ ಬೇರೆ ಜಿಲ್ಲೆಗೆ ಸಂಚಾರ ಮಾಡುವ KSRTC ಬಸ್ ನಗರದೊಳಗೆ ಸಂಚಾರ ಮಾಡಿದರು ಹಾಗೂ ಮಾಚೇನಹಳ್ಳಿ ಕಡೆ KSRTC ಬಸ್ ಸಂಚಾರ ಮಾಡುತ್ತಿದ್ದರು ಯಾವದೇ ಕ್ರಮವಿಲ್ಲ ಯಾಕೆ ಎಂಬ ಪ್ರಶ್ನೆಯಾಗಿದೆ? ಜನರ ಪ್ರಯಾಣಿಕರ ಜೀವ ಹಾನಿಗಾಗಿ ಎಲ್ಲರೂ ಕಾಯುತ್ತಿದ್ದಾರಾ? ಈ ರೀತಿಯ ಅನುಮಾನಗಾಳು ಪ್ರಜ್ಞಾವಂತರಲ್ಲಿ ಕಾಡುತ್ತಿದೆ..!

ಶಿವಮೊಗ್ಗ ನಗರದಲ್ಲಿ KSRTC ಅವರು ಕಾನೂನು ಉಲ್ಲಂಘನೆ ಮಾಡುತ್ತಿದ್ದರು ಸಹ ಟ್ರಾಫಿಕ್ ಪೊಲೀಸ್ ಅವರು, ಅಮೀರ್ ಅಹ್ಮದ್ ವೃತ್ತ, ಬಸ್ ಸ್ಟಾಂಡ್, ವಿದ್ಯಾನಗರ ಫ್ಲೈಓವರ್ ಹಾಗೂ ಎಂ ಆರ್ ಎಸ್ ನಲ್ಲಿ ನಿಂತು ಬರಿ ವಾಹನ ತಪಾಸಣೆ ಮಾಡಿ ದಂಡ ವಿಧುಸುವುದರಲ್ಲಿ ನಿರತರಾಗುವುದಾದರೆ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎಂಬ ಪ್ರಶ್ನೆಯಾಗಿದೆ?

ಕಣ್ಣು ಮುಂದೆ ಕಾನೂನು ಉಲ್ಲಂಘನೆ ಮಾಡಿ ಸಂಚಾರ ಮಾಡುವ KSRTC ಬಸ್ ಗಳ ಮೇಲೆ ಏನಕ್ಕೆ ಟ್ರಾಫಿಕ್ ಪೊಲೀಸರು ಕಣ್ಣು ಹಾಯಿಸುವುದಿಲ್ಲ ಕ್ರಮ ಜರುಗಿಸುವುದಿಲ್ಲ ಎಂಬ ಪ್ರಶ್ನೆ ವಾಹನ ಸವಾರರು ಹಾಗೂ ಪ್ರಜ್ಞಾವಂತ ಜನಸಾಮಾನ್ಯರಲ್ಲಿ ಮೂಡಿದೆ.

ಟ್ರಾಫಿಕ್ ಪೊಲೀಸ್ ಅವರು ಕಾನೂನು ಎಲ್ಲರಿಗೂ ಒಂದೇ ಎಂದು ಯಾವಾಗ ಟ್ರಾಫಿಕ್ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ತೋರಿಸತ್ತೋ ಆಗ ಎಲ್ಲರೂ ಸಹ ಕಾನೂನು ಅನುಸರಿಸಿ ಎಂಬುದು ಆಗತ್ತೆ! ವಾಹನ ಸವಾರರಿಗೆ ಇನ್ನಿಲ್ಲದ ತಪಾಸಣೆ ದಂಡ ವಿಧಿಸುವುಸುದು ಒಂದು ಕಡೆ ಆದರೆ KSRTC ಅವರಿಗೆ ಮಾತ್ರ ಈ ಕಾನೂನು ಜಿಲ್ಲೆಯಲ್ಲಿ ಅನ್ವಯ ಆಗುವುದಿಲ್ಲ ಇದು ಯಾವ ನ್ಯಾಯ ಸ್ವಾಮಿ ಎಂಬ ಪ್ರಶ್ನೆ ಮೂಡಿದೆ!

ಟ್ರಾಫಿಕ್ ಪೊಲೀಸ್ ನಗರದೊಳಗೆ ಸಂಚಾರ ಮಾಡುವ ಬೇರೆ ಜಿಲ್ಲೆಗೆ ತೆರಳುವ KSRTC ಬಸ್ ಗಳ ಮೇಲೆ ಮೊದಲು ಕ್ರಮ ಜರುಗಿಸಲಿ, ಮಾಚೇನಹಳ್ಳಿ ಅಲ್ಲಿ ರಸ್ತೆ ದುರಸ್ಥಿ ಸಂಬಂಧ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಕೊಡದೆ ಸಂಚಾರ ಮಾಡುವ KSRTC ಬಸ್ ಗಳನ್ನು ವಶಕ್ಕೆ ಪಡೆದುಕೊಂಡು ಕ್ರಮ ತೆಗೆದುಕೊಂಡು ನಂತರ ಜನಸಾಮಾನ್ಯರು ವಾಹನ ಸವಾರರಿಗೆ ದಂಡ ವಿಧಿಸಲಿ ಅದಕ್ಕೊಂದು ಅರ್ಥ ಆದರೂ ಇರತ್ತೆ ಎಂಬುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕೊನೆಯದಾಗಿ ಜನರಲ್ಲಿ ಕಾಡುವ ಪ್ರಶ್ನೆ KSRTC ಅವರಿಗೆ ಇಲ್ಲದ ಕಾನೂನು, ವಾಹನ ಸವಾರರಿಗೆ ಯಾಕೆ?

Author