ಶಿವಮೊಗ್ಗ | ಪ್ರಸಾದ್ ನೇತ್ರಾಲಯದಿಂದ ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಪೊಲೀಸ್ ಚೌಕಿ ಹಸ್ತಾಂತರ

ಶಿವಮೊಗ್ಗ

ಶಿವಮೊಗ್ಗದ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗ ಪೊಲೀಸ್ ವಿಭಾಗಕ್ಕೆ ನವೀಕೃತ ಪೊಲೀಸ್ ಚೌಕಿ ಯನ್ನು ಹಸ್ತಾಂತರಿಸಲಾಯಿತು.

ಶಿವಮೊಗ್ಗ ನಗರ ಸಂಚಾರಿ ಪೋಲಿಸ್ ರವರ ವಿನಂತಿಗೆ ಅನುಗುಣವಾಗಿ ಈ ಸೌಲಭ್ಯವನ್ನು ಅಧಿಕೃತವಾಗಿ ಅವರಿಗೆ ಹಸ್ತಾಂತರಿಸಲಾಗಿದ್ದು ಸಾರ್ವಜನಿಕ ಸೇವೆ ಹಾಗೂ ಸಮುದಾಯ ಬೆಂಬಲದತ್ತ ಪ್ರಸಾದ್ ನೇತ್ರಾಲಯದ ಬದ್ಧತೆಯನ್ನು ಇದು ದೃಢಪಡಿಸುತ್ತದೆ.

ಪೊಲೀಸ್ ಇನ್ಸ್ಪೆಕ್ಟರ್ ಟಿ. ವಿ ದೇವರಾಜ್, ಪ್ರಸಾದ್ ನೇತ್ರಾಲಯದ ಡಾ. ಬಾಲಚಂದ್ರ ತೆಗ್ಗೇಹಳ್ಳಿ, ಸಹಾಯಕ ಆಡಳಿತಧಿಕಾರಿ ಕೃಷ್ಣಮೂರ್ತಿ.ರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಮತ್ತು ಆಸ್ಪತ್ರೆಯ ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Author