ಶಿವಮೊಗ್ಗ, ಅಂಬೇಡ್ಕರ್ ಯೂಥ್ ಫೋರ್ಸ್ ಸಂಘಟನೆಯ ವತಿಯಿಂದ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚೂರುಕಟ್ಟೆ ಗ್ರಾಮದಲ್ಲಿ ಭೀಮಾ ಕೋರೇಗಾವ್ ವಿಜಯ್ ದಿವಸ ಕಾರ್ಯಕ್ರಮವನ್ನು ಆಚರಿಸಲಾಯಿತು.
ಅಂಬೇಡ್ಕರ್ ಯುಥ್ ಪೋರ್ಸ್ ಸಂಘಟನೆಯ ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ ಭೀಮ ಕೋರೆಗವ್ ವಿಜಯೋತ್ಸವ ಕಾರ್ಯಕ್ರಮ ಇದು ನಮ್ಮ ಇತಿಹಾಸವಾಗಿದೆ ಇದನ್ನು ನಾವು ತಿಳಿದಿರಬೇಕು ಅಂಬೇಡ್ಕರ್ ಹೇಳಿದಂತೆ ಇತಿಹಾಸ ಬಲ್ಲದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತನ್ನು ನೆನಪಿಸಿದರು.
ನಂತರ ಚಂದ್ರಪ್ಪ ಹೊಳೆಮರೂರು ಅವರು ಮಾತನಾಡಿ ಸಂಘಟನೆ ನಮಗೆ ಅವಶ್ಯಕವಾಗಿದ್ದು ಮೂಡನಂಬಿಕೆ ಇಂದ ನಮ್ಮನ್ನು ವೈಚಾರಿಕತೆ ಎಡೆಗೆ ಒಯ್ಯುತ್ತದೆ ಎಂದರು.

ಉಪಾಧ್ಯಕ್ಷರಾದ ಭಾಗ್ಯಶ್ರೀ ಶಶಿಧರ್ ಅವರು ಮಾತನಾಡಿ ಅಂಬೇಡ್ಕರ್ ಯೂತ್ ಪೋರ್ಸ್ ಸಂಘಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಅದಕ್ಕಾಗಿ ಮಹಿಳಾ ಘಟಕ ಸ್ಥಾಪಿಸುವುದಾಗಿ ಮಾತನಾಡಿದರು, ಸದಸ್ಯರಾದ ಶಶಿಧರ್ ಹೊಳೆಮರೂರು ಮಾತನಾಡಿ ಭೀಮ ಕೋರೇಗಾವ್ ವಿಜಯ ದಿವಸ ಈ ಕಾರ್ಯಕ್ರವನ್ನು ಮಹರ್ 18 ಜನ ಯೋಧರ ನೆನಪಿಗಾಗಿ ಆಚರಿಸುತ್ತಿದ್ದೇವೆ 500 ಜನ ಮಹರ್ ಸಮುದಾಯದ ಜನರು 28000 ಸಾವಿರ ಪೇಸ್ವೆ ಸೈನಿಕರನ್ನು ಸೋಲಿಸಿದ ಕ್ಷಣ ಈ ಯುದ್ಧವು ಸಮಾನತೆಗಾಗಿ ನಡೆದ ಸಮರವಾಗಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯೂಥ್ ಪೋಸ್ ಸಂಘಟನೆಯ ಸದಸ್ಯರಾದ ವಿನಾಯಕ್ ಚೂರಿಕಟ್ಟೆ ವಹಿಸಿದರು,ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯೂಥ್ ಫೋರ್ಸ್ ಸಂಘಟನೆಯ ಸಂಘಟನಾ ಕಾರ್ಯದರ್ಶಿ ತಿಲಾಕ್ ಕಾನಡೆ, ಕಾಜಾಂಚಿಯದಾ ರಾಕೇಶ ಶಿವಪುರ, ಸದಸ್ಯರಾದ ಕವಿತಾ ಸುನಿಲ್, ತಾಳಗುಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಕ್ಮಿ ನಾರಾಯಣ,ಗ್ರಾಮದ ಹಿರಿಯರಾದ ವಾಸುದೇವ್, ಮಹಾಬಲೇಶ್ವರ್, ರಾಘವೇಂದ್ರ,ಗೋಪಾಲ, ಶಮ್ಮುಖ, ರಾಘು ಹಾಗೂ ಊರ ಗ್ರಾಮಸ್ಥರು ಹಾಗೂ ಗ್ರಾಮದ ಎಲ್ಲ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.



